AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

eKYC: ಪಿಎಂ ಕಿಸಾನ್: ಜ. 31ರೊಳಗೆ ಇಕೆವೈಸಿ ಮಾಡದಿದ್ದರೆ ಸಿಗುವುದಿಲ್ಲ 16ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

PM Kisan Samman Nidhi Yojana: ಪಿಎಂ ಕಿಸಾನ್ ಯೋಜನೆಯಲ್ಲಿ ಕಂತಿನ ಹಣ ಪಡೆಯಲು ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಫೆಬ್ರುವರಿ ಅಥವಾ ಮಾರ್ಚ್​ನಲ್ಲಿ 16ನೇ ಕಂತಿನ ಹಣ ಬರಬೇಕೆಂದರೆ ಜನವರಿ 31ರೊಳಗೆ ಕೆವೈಸಿ ಆಗಿರಬೇಕು. ಕೇಂದ್ರ ಸರ್ಕಾರ ಕಳೆದ 5 ವರ್ಷಗಳಿಂದ 8ರಿಂದ 11 ಕೋಟಿ ರೈತರಿಗೆ ವರ್ಷಕ್ಕೆ 6,000 ರೂ ನೀಡುತ್ತದೆ.

eKYC: ಪಿಎಂ ಕಿಸಾನ್: ಜ. 31ರೊಳಗೆ ಇಕೆವೈಸಿ ಮಾಡದಿದ್ದರೆ ಸಿಗುವುದಿಲ್ಲ 16ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ
ಪಿಎಂ ಕಿಸಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2024 | 1:50 PM

Share

ನವದೆಹಲಿ, ಜನವರಿ 30: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಸರಿಯಾಗಿ ಐದು ವರ್ಷ ಆಯಿತು. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನ ಮಧ್ಯಂತರ ಬಜೆಟ್​ನಲ್ಲಿ (2019 Interim Budget) ಈ ಸ್ಕೀಮ್ ಚಾಲನೆಗೊಂಡಿತು. ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರಿಗೆ ಸರ್ಕಾರ ಒದಗಿಸುತ್ತದೆ. ಈವರೆಗೆ 15 ಕಂತುಗಳನ್ನು ರೈತರಿಗೆ ನೀಡಲಾಗಿದೆ. 16ನೇ ಕಂತಿನ ಹಣ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ. ಆದರೆ, ಜನವರಿ 31ರೊಳಗೆ ನೀವು ಕೆವೈಸಿ ಅಪ್​ಡೇಟ್ ಮಾಡದಿದ್ದರೆ ಹಣ ಸಿಗುವುದಿಲ್ಲ.

ಆದರೆ, ಬೇರೆಲ್ಲಾ ಯೋಜನೆಗಳಂತೆ ಪಿಎಂ ಕಿಸಾನ್ ಸ್ಕೀಮ್​ನಲ್ಲೂ ಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಕಳೆದ ಕೆಲ ತಿಂಗಳುಗಳಿಂದಲೂ ಸರ್ಕಾರ ಎಲ್ಲಾ ಫಲಾನುಭವಿಗಳಿಗೂ ಕೆವೈಸಿ ಸಲ್ಲಿಸುವಂತೆ ನಿರ್ದೇಶನ ನೀಡುತ್ತಿದೆ. ಅಂದಾಜು 10 ಕೋಟಿ ಅರ್ಹ ಫಲಾನುಭವಿಗಳ ಪೈಕಿ ಒಂದು ಕೋಟಿಯಷ್ಟು ಮಂದಿ ಕೆವೈಸಿ ಪರಿಷ್ಕರಿಸಿಲ್ಲ ಎನ್ನಲಾಗಿದೆ. ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ವಿಧಾನಗಳಲ್ಲಿ ಕೆವೈಸಿ ಅಪ್​ಡೇಟ್ ಮಾಡಬಹುದು. ಇಕೆವೈಸಿ ಮಾಡದಿದ್ದರೆ 16ನೇ ಕಂತಿನ ಹಣವಾದ 2,000 ರೂ ನಿಮ್ಮ ಖಾತೆಗೆ ಬರುವುದಿಲ್ಲ.

ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಕೆವೈಸಿಗೆ ಜನವರಿ 31ರವರೆಗೆ ಗಡುವು

ಡಿಸೆಂಬರ್​ನಿಂದ ಮಾರ್ಚ್​ವರೆಗಿನ ನಾಲ್ಕು ತಿಂಗಳ ಅವಧಿಗೆ ನೀಡಲಾಗುವ 2,000 ರೂ ಹಣ ನಿಮ್ಮ ಖಾತೆಗೆ ಸಿಗಬೇಕೆಂದರೆ ಇಕೆವೈಸಿ ಪೂರ್ಣಗೊಂಡಿರಬೇಕು. ಅದನ್ನು ಇನ್ನೂ ಮಾಡದೇ ಇದ್ದವರು ಜನವರಿ 31ರೊಳಗೆ ಪೂರ್ಣಗೊಳಿಸಬೇಕು.

2023ರಲ್ಲಿ ಇದೇ ಅವಧಿಯ ಕಂತಿನ ಹಣ ಮಾರ್ಚ್ 27ರಂದು ಬಿಡುಗಡೆ ಆಗಿತ್ತು. ಆದರೆ, ಈ ವರ್ಷ ಅದೇ ದಿನ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಫೆಬ್ರುವರಿಯಲ್ಲಿ ಬೇಕಾದರೂ ಹಣ ಬಿಡುಗಡೆ ಆಗಬಹುದು.

ಇಕೆವೈಸಿ ಮಾಡುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ ಆದ pmkisan.gov.in/ ಗೆ ಹೋಗಿ.
  • ಇಲ್ಲಿ ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ವಿಭಾಗ ಕಾಣುತ್ತೀರಿ.
  • ಇಲ್ಲಿ ಬೆನಿಫಿಶಿಯರಿ ಲಿಸ್ಟ್ ಎಂಬ ಟ್ಯಾಬ್ ಕ್ಲಿಕ್ ಮಾಡಿ.
  • ಇದರಲ್ಲಿ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಂಡು, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ
  • ಈ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ.

ಇದನ್ನೂ ಓದಿ: FASTag KYC: ಜ. 31ರೊಳಗೆ ಕೆವೈಸಿ ಅಪ್​ಡೇಟ್ ಮಾಡದಿದ್ದರೆ ಡೀ ಆ್ಯಕ್ಟಿವೇಟ್ ಆಗಲಿದೆ ಫಾಸ್​ಟ್ಯಾಗ್; ಕೆವೈಸಿ ಅಪ್​ಡೇಟ್ ಮಾಡುವ ಕ್ರಮ ಹೇಗೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಕೆವೈಸಿ ಮಾಡುವುದು ಹೇಗೆ?

  • ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ: pmkisan.gov.in
  • ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ಇಕೆವೈಸಿ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಆಗಿ ಖಚಿತಪಡಿಸಿ
  • ಸರ್ಚ್ ಆಯ್ಕೆ ಕ್ಲಿಕ್ ಮಾಡಿ
  • ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ನಮೂದಿಸಿ.
  • ಇಲ್ಲಿಗೆ ಇಕೆವೈಸಿ ಪ್ರಕ್ರಿಯೆ ಮುಗಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ