ಬ್ಯಾಂಕು
ನವದೆಹಲಿ, ಮಾರ್ಚ್ 15: ಬ್ಯಾಂಕುಗಳಿಗೆ ಈ ಮಾರ್ಚ್ ತಿಂಗಳ ಕೊನೆಯ ಎರಡು ವಾರ ರಜೆಗಳ ಸುಗ್ಗಿಯೇ ಇದೆ. ಆರ್ಬಿಐ ಕ್ಯಾಲಂಡರ್ ಪ್ರಕಾರ ಇಡೀ ಮಾರ್ಚ್ ತಿಂಗಳಲ್ಲಿ 14 ದಿನ ರಜೆ ಇದ್ದು, ಅದರಲ್ಲಿ ಮಾರ್ಚ್ 16ರಿಂದಲೇ 9 ರಜೆಗಳಿವೆ. ಕೊನೆಯ ವಾರದಂದು ಹೋಳಿ ಹಬ್ಬ ಮತ್ತು ಗುಡ್ ಫ್ರೈಡೆ ಹಬ್ಬಗಳಿವೆ. ವಿವಿಧೆಡೆ ವಿವಿಧ ದಿನಗಳಲ್ಲಿ ಹೋಳಿಗೆ ಬ್ಯಾಂಕುಗಳು (Bank Holidays) ಬಾಗಿಲು ಮುಚ್ಚುತ್ತವೆ. ಕರ್ನಾಟಕದಲ್ಲಿ ಗುಡ್ ಫ್ರೈಡೆಯಂದು (Good Friday Festival) ಬ್ಯಾಂಕುಗಳಿಗೆ ರಜೆ ಇದೆ. ಅದು ಬಿಟ್ಟರೆ ಭಾನುವಾರದ ರಜೆಗಳು, ಎರಡು ಮತ್ತು ನಾಲ್ಕನೇ ಶನಿವಾರದ ರಜೆಗಳೂ ಒಳಗೊಂಡಿವೆ. ಮಾರ್ಚ್ ತಿಂಗಳಲ್ಲಿ ಐದು ಭಾನುವಾರಗಳ ರಜೆಗಳೇ ಇವೆ. ಮಾರ್ಚ್ 15ರ ಬಳಿಕ ಯಾವ್ಯಾವ ಕಡೆ ಬ್ಯಾಂಕುಗಳಿಗೆ ರಜೆ ಇದೆ ಎನ್ನುವ ವಿವರ ಇಲ್ಲಿದೆ:
ಮಾರ್ಚ್ 15ರ ಬಳಿಕ ಬ್ಯಾಂಕುಗಳಿಗೆ ರಜಾದಿನಗಳು
- ಮಾರ್ಚ್ 17: ಭಾನುವಾರ
- ಮಾರ್ಚ್ 22: ಶುಕ್ರವಾರ: ಬಿಹಾರ ದಿವಸ್ (ಬಿಹಾರ ರಾಜ್ಯದಲ್ಲಿ ರಜೆ)
- ಮಾರ್ಚ್ 23: ನಾಲ್ಕನೇ ಶನಿವಾರ
- ಮಾರ್ಚ್ 24: ಭಾನುವಾರ
- ಮಾರ್ಚ್ 25, ಸೋಮವಾರ: ಹೋಳಿ ಹಬ್ಬ (ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚಿ, ಕೋಹಿಮಾ, ಪಟ್ನಾ, ಶ್ರೀನಗರ ಮತ್ತು ತಿರುವನಂತಪುರಂ ಹೊರತುಪಡಿಸಿ ಉಳಿದ ಕಡೆ ಬ್ಯಾಂಕ್ ರಜೆ ಇರುತ್ತದೆ)
- ಮಾರ್ಚ್ 26, ಮಂಗಳವಾರ: ಹೋಳಿ ಹಬ್ಬ ಎರಡನೇ ದಿನ (ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
- ಮಾರ್ಚ್ 27, ಬುಧವಾರ: ಹೋಳಿ ಹಬ್ಬ (ಪಾಟ್ನಾದಲ್ಲಿ ಬ್ಯಾಂಕ್ ರಜೆ)
- ಮಾರ್ಚ್ 29: ಗುಡ್ ಫ್ರೈಡೆ ಹಬ್ಬ (ಅಗಾರ್ಟಲಾ, ಗುವಾಹಟಿ, ಜೈಪುರ್, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ಕಡೆ ರಜೆ)
- ಮಾರ್ಚ್ 31: ಭಾನುವಾರ
ಕರ್ನಾಟಕದಲ್ಲಿ ಮಾರ್ಚ್ 15ರ ನಂತರದ ಬ್ಯಾಂಕ್ ರಜಾದಿನಗಳ ಪಟ್ಟಿ
- ಮಾರ್ಚ್ 17: ಭಾನುವಾರ
- ಮಾರ್ಚ್ 23: ನಾಲ್ಕನೇ ಶನಿವಾರ
- ಮಾರ್ಚ್ 24: ಭಾನುವಾರ
- ಮಾರ್ಚ್ 29: ಗುಡ್ ಫ್ರೈಡೆ ಹಬ್ಬ
- ಮಾರ್ಚ್ 31: ಭಾನುವಾರ
ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ
2024ರ ಏಪ್ರಿಲ್ ತಿಂಗಳಲ್ಲಿರುವ ರಜೆಗಳು
- ಏಪ್ರಿಲ್ 1: ಬ್ಯಾಂಕ್ ವಾರ್ಷಿಕ ರಜೆ
- ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಜಯಂತಿ
- ಏಪ್ರಿಲ್ 7: ಭಾನುವಾರ
- ಏಪ್ರಿಲ್ 8: ಈದ್
- ಏಪ್ರಿಲ್ 9: ಯುಗಾದಿ
- ಎಪ್ರಿಲ್ 13: ಎರಡನೇ ಶನಿವಾರ
- ಏಪ್ರಿಲ್ 14: ಭಾನುವಾರ
- ಏಪ್ರಿಲ್ 21: ಭಾನುವಾರ
- ಏಪ್ರಿಲ್ 27: ನಾಲ್ಕನೇ ಶನಿವಾರ
ಬ್ಯಾಂಕುಗಳಿಗೆ ರಜೆ ಇದ್ದರೂ ಎಟಿಎಂ, ಆನ್ಲೈನ್, ನೆಟ್ ಬ್ಯಾಂಕಿಂಗ್ ಇತ್ಯಾದಿಗಳು 24 ಗಂಟೆ ಲಭ್ಯ ಇರುತ್ತವೆ. ಯುಪಿಐ ಪ್ಲಾಟ್ಫಾರ್ಮ್ ಬಳಸಿ ಬ್ಯಾಂಕಿಂಗ್ ಸೇವೆ ಪಡೆಯಬಹುದು. ಎಫ್ಡಿ, ಆರ್ಡಿ ಇತ್ಯಾದಿ ಪ್ಲಾನ್ಗಳನ್ನೂ ಆನ್ಲೈನ್ನಲ್ಲೇ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ