AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays June 2023: ಜೂನ್ ತಿಂಗಳ ರಜಾ ದಿನಗಳ ಪಟ್ಟಿ; ದೇಶದೆಲ್ಲೆಡೆ ಹಾಗೂ ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ಡೀಟೇಲ್ಸ್

RBI Releases Holiday List for 2023 June: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ. ಜೂನ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜೆಗಳಿವೆ. ಕರ್ನಾಟಕದಲ್ಲಿ 7 ದಿನ ಬ್ಯಾಂಕ್ ಬಾಗಿಲು ಮುಚ್ಚಿರುತ್ತವೆ.

Bank Holidays June 2023: ಜೂನ್ ತಿಂಗಳ ರಜಾ ದಿನಗಳ ಪಟ್ಟಿ; ದೇಶದೆಲ್ಲೆಡೆ ಹಾಗೂ ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ಡೀಟೇಲ್ಸ್
ಬ್ಯಾಂಕಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 08, 2026 | 12:45 PM

Share

ಮುಖ್ಯಾಂಶಗಳು

  • ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 2023ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ.
  • ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟಾರೆ 12 ದಿನ ರಜೆಗಳಿವೆ. ಇದರಲ್ಲಿ ಭಾನುವಾರ, ಶನಿವಾರಗಳ ನಿಯಮಿತ ರಜೆಗಳೂ ಇವೆ.
  • ಕರ್ನಾಟಕದಲ್ಲಿ ಜೂನ್ 29ರಂದು ಈದ್ ಉಲ್ ಅಳ ಸೇರಿದಂತೆ ಒಟ್ಟು 7 ರಜೆಗಳಿವೆ.

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ (Bank holidays list) ಪ್ರಕಟಿಸಿದೆ. ಹಬ್ಬ ಹರಿದಿನ, ವಾರಾಂತ್ಯ ಇತ್ಯಾದಿ ರಜೆಗಳು ಒಳಗೊಂಡಿವೆ. ಜೂನ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜೆಗಳಿವೆ. ಆದರೆ, ಎಲ್ಲೆಡೆಯೂ 12 ದಿನ ರಜೆ ಇರುವುದಿಲ್ಲ. ಕೆಲ ರಜೆಗಳು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿರುತ್ತವೆ. ಇಂಥ ಪ್ರಾದೇಶಿಕ ರಜೆಗಳನ್ನು (Regional holidays) ಆಯಾ ಪ್ರದೇಶಗಳ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ಜೂನ್ ತಿಂಗಳಲ್ಲಿ ಜಗನ್ನಾಥ ರಥಯಾತ್ರೆ, ಈದ್ ಉಲ್ ಅಳ (Eid Ul Azha), ಖರ್ಚಿ ಪೂಜಾ ಮೊದಲಾದ ಹಬ್ಬಗಳಿವೆ. ಇವು ಪ್ರಾದೇಶಿಕ ರಜೆಗಳ ಗುಂಪಿಗೆ ಸೇರಿದವು.

ಈಗ ಮೇ 27ರ ನಾಲ್ಕನೇ ಶನಿವಾರ ಮತ್ತು ಮೇ 28ರ ಭಾನುವಾರದ ರಜೆ ಸೇರಿದರೆ ಜೂನ್ 30ರವರೆಗೂ 14 ದಿನಗಳ ಕಾಲ ಬ್ಯಾಂಕ್​ಗೆ ರಜೆ ಇರುತ್ತವೆ.

2023 ಜೂನ್ ತಿಂಗಳ ರಜಾ ದಿನಗಳು

  • ಜೂನ್ 4: ಭಾನುವಾರ
  • ಜೂನ್ 10: ಎರಡನೇ ಶನಿವಾರ
  • ಜೂನ್ 11: ಭಾನುವಾರ
  • ಜೂನ್ 15: ರಾಜಾ ಸಂಕ್ರಾಂತಿ ಪ್ರಯುಕ್ತ ಮಿಜೋರಾಂ ಮತ್ತು ಒಡಿಶಾದಲ್ಲಿ ರಜೆ
  • ಜೂನ್ 18: ಭಾನುವಾರ
  • ಜೂನ್ 20: ಒಡಿಶಾದಲ್ಲಿ ರಥಯಾತ್ರೆ ಹಿನ್ನೆಲೆಯಲ್ಲಿ ರಜೆ
  • ಜೂನ್ 24: ನಾಲ್ಕನೇ ಶನಿವಾರ
  • ಜೂನ್ 25: ಭಾನುವಾರ
  • ಜೂನ್ 26: ತ್ರಿಪುರಾದಲ್ಲಿ ಖಾರ್ಚಿ ಪೂಜಾ ಸಂಬಂಧ ರಜೆ
  • ಜೂನ್ 28: ಈದ್ ಉಲ್ ಅಳ ಹಬ್ಬದ ಪ್ರಯುಕ್ತ ಜಮ್ಮು ಕಾಶ್ಮೀರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ರಜೆ
  • ಜೂನ್ 29: ಈದ್ ಉಲ್ ಅಳ ಪ್ರಯುಕ್ತ ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಮಿಜೋರಾಮ್, ಒಡಿಶಾ ಹೊರತುಪಡಿಸಿ ಇತರ ಎಲ್ಲಾ ರಾಜ್ಯಗಳಲ್ಲೂ ರಜೆ
  • ಜೂನ್ 30: ಈದ್ ಉಲ್ ಅಳ ಪ್ರಯುಕ್ತ ಮಿಜೋರಾಂ ಮತ್ತು ಒಡಿಶಾದಲ್ಲಿ ರಜೆ

ಕರ್ನಾಟಕದಲ್ಲಿ 2023 ಜೂನ್ ತಿಂಗಳಲ್ಲಿ ಯಾವ್ಯಾವಾಗ ರಜೆ?

  • ಜೂನ್ 4: ಭಾನುವಾರ
  • ಜೂನ್ 10: ಎರಡನೇ ಶನಿವಾರ
  • ಜೂನ್ 11: ಭಾನುವಾರ
  • ಜೂನ್ 18: ಭಾನುವಾರ
  • ಜೂನ್ 24: ನಾಲ್ಕನೇ ಶನಿವಾರ
  • ಜೂನ್ 25: ಭಾನುವಾರ
  • ಜೂನ್ 29: ಈದ್ ಉಲ್ ಅಳ ಹಬ್ಬ

2023ರ ಜೂನ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟಾರೆಯಾಗಿ 12 ದಿನ ರಜೆ ಹೊಂದಿದ್ದರೂ ಕರ್ನಾಟಕದಲ್ಲಿ ಬ್ಯಾಂಕುಗಳು ಈ ಒಂದು ತಿಂಗಳಲ್ಲಿ 7 ದಿನ ಮಾತ್ರ ಬಾಗಿಲು ಮುಚ್ಚಿರುತ್ವೆ. ಇದರಲ್ಲಿ ಜೂನ್ 29ರಂದು ಈದ್ ಉಲ್ ಆಳ ಹಬ್ಬ ಪ್ರಯುಕ್ತ ರಜೆ ಇದ್ದರೆ ಉಳಿದವು ಶನಿವಾರ ಮತ್ತು ಭಾನುವಾರಗಳ ನಿಯಮಿತ ರಜೆಗಳೇ ಆಗಿವೆ.

ಬ್ಯಾಂಕುಗಳು ರಜೆ ಇದ್ದ ದಿನಗಳಲ್ಲಿ 2,000 ರೂ ನೋಟುಗಳ ವಿನಿಮಯ ಸಾಧ್ಯವಾಗದೇ ಹೋಗಬಹುದು. ಆದರೆ, ಬೇರೆ ಬಹುತೇಕ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಅಡ್ಡಿ ಇರುವುದಿಲ್ಲ. ಸಾರ್ವಜನಿಕರು ಇಂಟರ್ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಎಟಿಎಂ, ಯುಪಿಐ ಇತ್ಯಾದಿ ಸೇವೆಗಳನ್ನು ಪಡೆಯಬಹುದು.

Published On - 1:15 pm, Thu, 25 May 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ