Bank Holidays In August: ಬ್ಯಾಂಕುಗಳಿಗೆ ಆಗಸ್ಟ್ ತಿಂಗಳಲ್ಲಿ ರಜಾ ದಿನಗಳೆಷ್ಟು? ಒಟ್ಟು 14, ಕರ್ನಾಟಕದಲ್ಲಿ 7; ಇಲ್ಲಿದೆ ಪಟ್ಟಿ

|

Updated on: Jul 27, 2023 | 6:15 PM

2023 August, Holidays List: 2023ರ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ರಜಾ ದಿನಗಳವರೆಗೆ ರಜೆಗಳಿವೆ. ಇದರಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳೂ ಸೇರಿವೆ. ಸ್ವಾತಂತ್ರ್ಯೋತ್ಸವದ ರಜೆಯೂ ಇದೆ. ಕರ್ನಾಟಕದಲ್ಲಿ ಒಟ್ಟು 7 ದಿನ ಬ್ಯಾಂಕ್ ರಜೆ ಇದೆ.

Bank Holidays In August: ಬ್ಯಾಂಕುಗಳಿಗೆ ಆಗಸ್ಟ್ ತಿಂಗಳಲ್ಲಿ ರಜಾ ದಿನಗಳೆಷ್ಟು? ಒಟ್ಟು 14, ಕರ್ನಾಟಕದಲ್ಲಿ 7; ಇಲ್ಲಿದೆ ಪಟ್ಟಿ
ಬ್ಯಾಂಕುಗಳಿಗೆ ರಜಾ ದಿನಗಳು
Follow us on

ನವದೆಹಲಿ, ಜುಲೈ 27: ಎಟಿಎಂ, ಆನ್​ಲೈನ್ ಬ್ಯಾಂಕಿಂಗ್ ಬಂದ ಬಳಿಕ ಬ್ಯಾಂಕ್ ಕಚೇರಿಗಳಿಗೆ ಹೋಗುವ ಪ್ರಮೇಯ ಬಹಳ ಕಡಿಮೆ ಆಗಿದೆ. ಆದರೂ ಬ್ಯಾಂಕಿಗೆ ಹೋಗಿಯೇ ಮಾಡಬೇಕಾದ ಹಲವು ಕಾರ್ಯಗಳಿವೆ. ಹೀಗಾಗಿ, ಬ್ಯಾಂಕ್​ ಕಚೇರಿಗಳು ಜನರಿಗೆ ಬಹಳ ಮುಖ್ಯ ಸ್ಥಳಗಳಲ್ಲಿ ಒಂದಾಗಿದೆ. ನಮ್ಮ ಕೆಲ ಬ್ಯಾಂಕಿಂಗ್ ಕೆಲಸಕ್ಕೆ ನಮ್ಮ ಆಫೀಸ್​ಗೆ ರಜೆ ಹಾಕುವುದಿದೆ. ಇಂಥ ಸಂದರ್ಭದಲ್ಲಿ ಬ್ಯಾಂಕಿಗೆ ರಜೆ (Bank Holiday) ಇದ್ದಾಗ ನಮ್ಮ ರಜೆ ನಿರುಪಯುಕ್ತವಾಗಬಹುದು. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಯಾವ್ಯಾವತ್ತು ರಜಾ ದಿನಗಳಿವೆ ಎಂಬುದನ್ನು ಮೊದಲೇ ತಿಳಿದಿರುವುದು ಉತ್ತಮ.

ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ರಾಜ್ಯಗಳಲ್ಲಿನ ಸ್ಥಳೀಯ ರಜೆ ಹಾಗೂ ರಾಷ್ಟ್ರೀಯ ರಜೆಗಳನ್ನು ಪರಿಗಣಿಸಿ ಬ್ಯಾಂಕುಗಳಿಗೆ ರಜಾದಿನಗಳ ಪಟ್ಟಿ ತಯಾರಿಸುತ್ತದೆ. ರಜೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸ ಇರುತ್ತದೆ. ಇದೀಗ ಜುಲೈ ಮುಗಿದು ಆಗಸ್ಟ್ ತಿಂಗಳು ಸಮೀಪಿಸಿದೆ. ಆರ್​ಬಿಐ ವೇಳಾಪಟ್ಟಿ ಪ್ರಕಾರ ಆಗಸ್ಟ್ ತಿಂಗಳಲ್ಲಿ ಒಟ್ಟು 14 ರಜಾದಿನಗಳಿವೆ. ಇದರಲ್ಲಿ ಶನಿವಾರ, ಭಾನುವಾರದ ರಜೆಗಳೂ ಒಳಗೊಂಡಿವೆ. ಆಗಸ್ಟ್ ತಿಂಗಳು ಸ್ವಾತಂತ್ರ್ಯ ದಿನೋತ್ಸವ ಒಂದು ಸಾರ್ವತ್ರಿಕ ರಜೆ ಇದೆ. ಕೇರಳದಲ್ಲಿ ಓಣಂ ಹಬ್ಬಕ್ಕೆ ರಜೆಗಳಿವೆ.

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಒಟ್ಟು 7 ದಿನಗಳು ಬ್ಯಾಂಕ್ ರಜೆ ಇವೆ. 15ರಂದು ಸ್ವಾತಂತ್ರ್ಯೋತ್ಸವ ದಿನದ್ದು ಬಿಟ್ಟರೆ ಉಳಿದವರು ಭಾನುವಾರ ಮತ್ತು ಶನಿವಾರದ ರಜೆಗಳೇ. ಆಗಸ್ಟ್ 12 ಮತ್ತು 26ರಂದು ಶನಿವಾರದ ರಜೆಗಳಿರುತ್ತವೆ. ಉಳಿದ ಶನಿವಾರಗಳು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ಇನ್ನು, ಜುಲೈ 29, ಶನಿವಾರ ಮೊಹರಂ ಪ್ರಯುಕ್ತ ರಜೆ ಇದೆ.

ಇದನ್ನೂ ಓದಿ: SBI Safety Tips: ಆನ್​ಲೈನ್​ನಲ್ಲಿ ಸುರಕ್ಷಿತವಾಗಿ ಬ್ಯಾಂಕಿಂಗ್ ನಡೆಸಲು ಎಸ್​ಬಿಐ ನೀಡಿದೆ ಕೆಲ ಟಿಪ್ಸ್

2023ರ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ ರಜಾ ದಿನಗಳು

  1. ಆಗಸ್ಟ್ 6: ಭಾನುವಾರ
  2. ಆಗಸ್ಟ್ 8: ಟೆಂಡೋಂಗ್ ಲಹೋ ರುಮ್ ಫಾಟ್ (ಸಿಕ್ಕಿಂನಲ್ಲಿ ಬ್ಯಾಂಕುಗಳಿಗೆ ರಜೆ)
  3. ಆಗಸ್ಟ್ 12: ಎರಡನೇ ಶನಿವಾರ
  4. ಆಗಸ್ಟ್ 13: ಭಾನುವಾರ
  5. ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  6. ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಮುಂಬೈ, ಬೇಲಾಪುರ್, ನಾಗಪುರ್​ನಲ್ಲಿ ರಜೆ)
  7. ಆಗಸ್ಟ್ 18: ಶ್ರೀಮಂತ ಶಂಕರದೇವ ಪುಣ್ಯ ತಿಥಿ (ಅಸ್ಸಾಮ್​ನ ಗುವಾಹಟಿಯಲ್ಲಿ ರಜೆ)
  8. ಆಗಸ್ಟ್ 20: ಭಾನುವಾರ
  9. ಆಗಸ್ಟ್ 26: ನಾಲ್ಕನೇ ಶನಿವಾರ
  10. ಆಗಸ್ಟ್ 27: ಭಾನುವಾರ
  11. ಆಗಸ್ಟ್ 28: ಪ್ರಥಮ ಓಣಂ (ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ರಜೆ)
  12. ಆಗಸ್ಟ್ 29: ತಿರು ಓಣಂ (ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ರಜೆ)
  13. ಆಗಸ್ಟ್ 30: ರಕ್ಷಾಬಂಧನ (ರಾಜಸ್ಥಾನ, ಜಮ್ಮು ಕಾಶ್ಮೀರದಲ್ಲಿ ರಜೆ)
  14. ಆಗಸ್ಟ್ 31: ರಕ್ಷಾ ಬಂಧನ, ನಾರಾಯಣ ಗುರು ಜಯಂತಿ, ಪ್ಯಾಂಗ್ ಲ್ಹಾಬಸೋಲ್ (ಗ್ಯಾಂಗ್​ಟೋಕ್, ಡೆಹ್ರಾಡೂನ್, ಕಾನಪುರ್, ಕೊಚ್ಚಿ, ಲಕ್ನೋ, ತಿರುವನಂತಪುರಂಗಳಲ್ಲಿ ರಜೆ)

ಇದನ್ನೂ ಓದಿ: ITR and Penalty: ಐಟಿಆರ್ ಸಲ್ಲಿಸುವಾಗ ಸುಳ್ಳು ದಾಖಲೆ ತೋರಿಸೀರಿ ಜೋಕೆ..! ಎರಡು ಪಟ್ಟು ದಂಡ ವಸೂಲಿ ಮಾಡುತ್ತೆ ಆದಾಯ ತೆರಿಗೆ ಇಲಾಖೆ

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ ರಜಾದಿನಗಳು

  1. ಆಗಸ್ಟ್ 6: ಭಾನುವಾರ
  2. ಆಗಸ್ಟ್ 12: ಎರಡನೇ ಶನಿವಾರ
  3. ಆಗಸ್ಟ್ 13: ಭಾನುವಾರ
  4. ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  5. ಆಗಸ್ಟ್ 20: ಭಾನುವಾರ
  6. ಆಗಸ್ಟ್ 26: ನಾಲ್ಕನೇ ಶನಿವಾರ
  7. ಆಗಸ್ಟ್ 27: ಭಾನುವಾರ

ಇದನ್ನೂ ಓದಿ: US Fed Hike Effect: ಅಮೆರಿಕದಲ್ಲಿ ಬಡ್ಡಿದರ 22 ವರ್ಷದಲ್ಲೇ ಗರಿಷ್ಠ; ಭಾರತದ ಮೇಲೆ ಆಗುವ ಪರಿಣಾಮಗಳೇನು?

2023ರಲ್ಲಿ ಉಳಿದ ದಿನಗಳಲ್ಲಿರುವ ಸಾರ್ವಜನಿಕ ರಜೆಗಳು

  • ಸೆಪ್ಟೆಂಬರ್ 19: ಗಣೇಶ ಹಬ್ಬ
  • ಸೆಪ್ಟೆಂಬರ್ 28: ಈದ್
  • ಅಕ್ಟೋಬರ್ 1: ಗಾಂಧಿ ಜಯಂತಿ
  • ಅಕ್ಟೋಬರ್ 24: ದಸರಾ
  • ನವೆಂಬರ್ 14: ದೀಪಾವಳಿ
  • ನವೆಂಬ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ