SBI Safety Tips: ಆನ್​ಲೈನ್​ನಲ್ಲಿ ಸುರಕ್ಷಿತವಾಗಿ ಬ್ಯಾಂಕಿಂಗ್ ನಡೆಸಲು ಎಸ್​ಬಿಐ ನೀಡಿದೆ ಕೆಲ ಟಿಪ್ಸ್

State Bank of India: ಆನ್​ಲೈನ್​ನಲ್ಲಿ ನಡೆಯುವ ವಂಚನೆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದಷ್ಟು ಸಲಹೆ ಸೂಚನೆಗಳನ್ನು ಇಮೇಲ್ ಮೂಲಕ ಕಳುಹಿಸಿದೆ.

SBI Safety Tips: ಆನ್​ಲೈನ್​ನಲ್ಲಿ ಸುರಕ್ಷಿತವಾಗಿ ಬ್ಯಾಂಕಿಂಗ್ ನಡೆಸಲು ಎಸ್​ಬಿಐ ನೀಡಿದೆ ಕೆಲ ಟಿಪ್ಸ್
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2023 | 5:13 PM

ಆನ್​ಲೈನ್​ನಲ್ಲಿ ಬ್ಯಾಂಕಿಂಗ್ (Online Banking) ಮಾಡಲು ಈ ಹಿಂದೆ ಬಹಳ ಮಂದಿ ಹೆದರುತ್ತಿದ್ದರು. ಈಗ ಹೆಚ್ಚು ಭಯ ಇಲ್ಲದೇ ಆನ್​ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸುತ್ತಾರೆ. ಇದಕ್ಕೆ ಕಾರಣ, ಬ್ಯಾಂಕುಗಳು ತೆಗೆದುಕೊಂಡಿರುವ ಹಲವು ಸುರಕ್ಷಾ ಕ್ರಮಗಳು. ಅದರ ನಡುವೆಯೂ ವಂಚಕರು ವಿನೂತನ ಮಾರ್ಗಗಳ ಮೂಲಕ ಅಮಾಯಕ ಜನರನ್ನು ವಂಚಿಸುವುದು ಪೂರ್ತಿ ನಿಂತಿಲ್ಲ. ಮಾರುವೇಷದ ಮೆಸೇಜ್​ಗಳನ್ನು (Phishing Message) ಕಳುಹಿಸುವುದು ಇತ್ಯಾದಿ ಕುತಂತ್ರಗಳ ಮೂಲಕ ಜನರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಜಾಲಗಳು ಹೇರಳ ಇವೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು, ಆರ್​ಬಿಐ ಮೊದಲಾದ ಸಂಸ್ಥೆಗಳು ಗ್ರಾಹಕರಿಗೆ ಅರಿವು (Awareness) ಮೂಡಿಸುವ ಕೆಲಸ ಮಾಡುತ್ತಿರುತ್ತವೆ. ಎಸ್​ಬಿಐ ಕೂಡ ಆಗಾಗ್ಗೆ ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಒಂದಷ್ಟು ಸಲಹೆಗಳನ್ನು ನೀಡುತ್ತಿರುತ್ತದೆ. ಇಂದು ಜುಲೈ 27ರಂದು ಎಸ್​ಬಿಐ ಇಂಥದ್ದೊಂದು ಇಮೇಲ್ ಕಳುಹಿಸಿ, ಆನ್​ಲೈನ್ ಬ್ಯಾಂಕಿಂಗ್ ವಹಿವಾಟಿಗೆ ಸುರಕ್ಷಿತ ಕ್ರಮಗಳನ್ನು ಹೇಗೆ ಅನುಸರಿಸಬಹುದು ಎಂದು ಒಂದಷ್ಟು ಟಿಪ್ಸ್ ನೀಡಿದೆ. ಹಾಗೆಯೇ, ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೊಟ್ಟಿದೆ.

ಎಸ್​ಬಿಐ ಮೆಸೇಜ್​ಗಳಲ್ಲಿ ಲಿಂಕ್ ಇರುವುದಿಲ್ಲ

ಪ್ಯಾನ್ ಅಥವಾ ಕೆವೈಸಿ ಅಪ್​ಡೇಟ್ ಮಾಡಲು ಎಸ್​ಬಿಐ ಕಳುಹಿಸುವ ಮೆಸೇಜ್ ಮತ್ತು ಇಮೇಲ್​ಗಳಲ್ಲಿ ಲಿಂಕ್​ಗಳು ಒಳಗೊಂಡಿರುವುದಿಲ್ಲ. ಹಾಗೆಯೇ, ವೈಯಕ್ತಿಕ ಮಾಹಿತಿ, ಪಾಸ್ವರ್ಡ್ ಅಥವಾ ಬಹಳ ಸೂಕ್ಷವಾದ ಒನ್ ಟೈಮ್ ಎಸ್ಸೆಮ್ಮೆಸ್ ಪಾಸ್ವರ್ಡ್ ಅನ್ನು ಕೇಳಿ ಯಾವ ಎಸ್​ಬಿಐ ಪ್ರತಿನಿಧಿಯೂ ಕರೆ ಮಾಡುವುದಿಲ್ಲ, ಅಥವಾ ಇಮೇಲ್, ಎಸ್ಸೆಮ್ಮೆಸ್ ಕಳುಹಿಸುವುದಿಲ್ಲ ಎಂದು ಎಸ್​ಬಿಐ ತನ್ನ ಗ್ರಾಹಕರಿಗೆ ಕಳುಹಿಸಿದ ಇಮೇಲ್​ನಲ್ಲಿ ಎಚ್ಚರಿಸಿದೆ.

ಇದನ್ನೂ ಓದಿ: ITR and Penalty: ಐಟಿಆರ್ ಸಲ್ಲಿಸುವಾಗ ಸುಳ್ಳು ದಾಖಲೆ ತೋರಿಸೀರಿ ಜೋಕೆ..! ಎರಡು ಪಟ್ಟು ದಂಡ ವಸೂಲಿ ಮಾಡುತ್ತೆ ಆದಾಯ ತೆರಿಗೆ ಇಲಾಖೆ

ಜುಲೈ 27ರಂದು ಎಸ್​ಬಿಐ ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಕಳುಹಿಸಿದ ಟಿಪ್ಸ್

ಇಮೇಲ್ ಅಥವಾ ಎಸ್ಸೆಮ್ಮೆಸ್ ಅಥವಾ ಫೋನ್ ಕರೆ ಬಗ್ಗೆ ಅನುಮಾನ ಬಂದರೆ ಕೂಡಲೇ ಈ ಮುಂದಿನ ಇಮೇಲ್ ವಿಳಾಸಕ್ಕೆ ಅಲರ್ಟ್ ಕಳುಹಿಸಿ: phishing@sbi.co.in

ಅನಧಿಕೃತ ವಹಿವಾಟು ನಡೆದುಹೋದಲ್ಲಿ, 1930 ನಂಬರ್ ಕರೆ ಮಾಡಿ ಮಾಹಿತಿ ನೀಡಿ, ಅಥವಾ ಟ್ರಾನ್ಸಾಕ್ಷನ್ ಡೀಟೇಲ್ಸ್ ಅನ್ನು cybercrime.gov.in ವೆಬ್​ಸೈಟ್​ನಲ್ಲಿ ಸೈಬರ್​ಕ್ರೈಮ್ ಸೆಲ್​ಗೆ ಕಳುಹಿಸಿ.

ಎಸ್​ಬಿಐ ಬ್ಯಾಂಕ್​ನ 1800111109 ನಂಬರ್​ಗೆ ಕರೆ ಅನಧಿಕೃತ ವಹಿವಾಟು ಬಗ್ಗೆ ತಿಳಿಸಿ. ಅಥವಾ crcf.sbi.co.in/ccf/ ಇಲ್ಲಿ ದೂರು ದಾಖಲಿಸಿ

ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್​ನಿಂದ YONO SBI/ YONO Lite ಮೊಬೈಲ್ ಆ್ಯಪ್ ಹಾಕಿಕೊಳ್ಳಿ.

ಆನ್ಲೈನ್ ಬ್ಯಾಂಕಿಂಗ್​ನಲ್ಲಿ ನಿಮ್ಮ ಪಾಸ್ವರ್ಡ್ ಮತ್ತು ಎಂಪಿನ್​ಗಳನ್ನು ಆಗಾಗ್ಗೆ ಬದಲಿಸುತ್ತಿರಿ.

ನಿಮ್ಮ ಕಂಪ್ಯೂಟರ್, ಲ್ಯಾಪ್​ಟಾಪ್ ಅಥವಾ ಮೊಬೈಲ್​ನಲ್ಲಿ ಯಾವುದೇ ಮಾಲ್​ವೇರ್, ಆ್ಯಡ್​ವೇರ್ ಇತ್ಯಾದಿ ವಂಚಕ ತಂತ್ರಾಂಶಗಳು ಸೇರದಂತೆ ನೋಡಿಕೊಳ್ಳಿ.

ನೀವು ಬ್ರೌಸರ್ ಅಡ್ರೆಸ್ ಬಾರ್​ನಲ್ಲಿ ನೇರವಾಗಿ ಆನ್​ಲೈನ್ ಎಸ್​ಬಿಐ ವೆಬ್​ಸೈಟ್​​ನ ಯುಆರ್​ಎಲ್ ಟೈಪ್ ಮಾಡುವಾಗ ಮೊದಲಿಗೆ https ಇರಲಿ.

ನಿಮಗೆ ಎಸ್​ಬಿಐನ ವಾಟ್ಸಾಪ್ ಅಥವಾ ಕಾಲ್ ಸೆಂಟರ್ ನಂಬರ್ ಬಗ್ಗೆ ಮಾಹಿತಿ ಬೇಕೆಂದರೆ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ bank.sbi ಅಲ್ಲಿ ಗಮನಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ