Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ

Indian railways marching ahead confidently: ಭಾರತೀಯ ರೈಲ್ವೆಸ್ ಸಂಸ್ಥೆ ಈ ವರ್ಷ ತಯಾರಿಸಿರುವ ಲೋಕೋಮೋಟಿವ್ ವಾಹನಗಳ ಸಂಖ್ಯೆ 1,400 ದಾಟಿದೆ. ಅಮೆರಿಕ, ಯೂರೋಪ್​ಗಳಲ್ಲಿ ತಯಾರಾದ ಒಟ್ಟಾರೆ ಲೋಕೋಮೋಟಿವ್​​ಗಳಿಗಿಂತ ಭಾರತವೇ ಹೆಚ್ಚು ತಯಾರಿಸಿದೆ. ಎರಡು ಲಕ್ಷಕ್ಕೂ ಅಧಿಕ ವ್ಯಾಗನ್​ಗಳು, ಹತ್ತು ವರ್ಷದಲ್ಲಿ 41,000 ಎಲ್​​ಎಚ್​​ಬಿ ಕೋಚ್​​​ಗಳನ್ನು ತಯಾರಿಸಿದೆ. ಎಲ್ಲಾ ಐಸಿಎಫ್ ಕೋಚ್​​ಗಳನ್ನು ಎಲ್​​ಎಚ್​​ಬಿ ಕೋಚ್​​ಗಳಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದೆ.

ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ
ಟ್ರೈನ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 23, 2025 | 1:42 PM

ನವದೆಹಲಿ, ಮಾರ್ಚ್ 23: ಭಾರತೀಯ ರೈಲ್ವೇ (Indian Railways) ಲೋಕೋಮೋಟಿವ್ ಉತ್ಪಾದನೆಯಲ್ಲಿ (Locomotives production) ಹೊಸ ದಾಖಲೆಯನ್ನೇ ಬರೆದಿದೆ. ಈ ವರ್ಷ ಅದು 1,400 ಲೋಕೋಮೋಟಿವ್​​ಗಳನ್ನು ತಯಾರಿಸಿದೆ. ಈ ವರ್ಷ ಅಮೆರಿಕ ಮತ್ತು ಯೂರೋಪ್​​ಗಳಿಂದ ತಯಾರಾದ ಒಟ್ಟು ಲೋಕೋಮೋಟಿವ್​​ಗಳಿಗಿಂತ ಭಾರತವೇ ಹೆಚ್ಚು ತಯಾರಿಸಿದೆ. ಭಾರತ ಈ ವರ್ಷ 1,400 ಲೋಕೋಮೋಟಿವ್​ಗಳನ್ನು ತಯಾರಿಸಿರುವ ಸಂಗತಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ. ಭಾರತೀಯ ರೈಲ್ವೆ ಹಲವು ಕಡೆ ಲೋಕೋಮೋಟಿವ್​​ಗಳನ್ನು ತಯಾರಿಸುತ್ತದೆ. ಪ್ರಮುಖವಾಗಿ, ಪಶ್ಚಿಮ ಬಂಗಾಳದ ಆಸನ್​ಸೋಲ್​ನಲ್ಲಿರುವ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್, ಉತ್ತರಪ್ರದೇಶದ ವಾರಾಣಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್, ಮತ್ತು ಪಂಜಾಬ್​​ನ ಪಾಟಿಯಾಲಾ ಲೊಕೋಮೋಟಿವ್ ವರ್ಕ್ಸ್, ಇಲ್ಲಿ ಹೆಚ್ಚು ಲೋಕೋಮೋಟಿವ್​​​ಗಳ ನಿರ್ಮಾಣ ಕಾರ್ಯ ನಡೆಯುತ್ತದೆ.

ಏನಿವು ಲೋಕೋಮೋಟಿವ್​​ಗಳು?

ಲೋಕೋಮೋಟಿವ್​ ಎಂಬುದು ಟ್ರೈನ್​​ನ ಎಂಜಿನ್ ವಾಹನವಾಗಿರುತ್ತದೆ. ರೈಲು ಬಂಡಿಯ ಬೋಗಿಗಳನ್ನು ಈ ಎಂಜಿನ್ ವಾಹನ ಹಳಿಯಲ್ಲಿ ಎಳೆದುಕೊಂಡು ಹೋಗುತ್ತದೆ.

ಇದನ್ನೂ ಓದಿ: ಭಾರತದ ಆರ್ಥಿಕತೆ 4.3 ಟ್ರಿಲಿಯನ್ ಡಾಲರ್; 10 ವರ್ಷದಲ್ಲಿ ಡಿಜಿಪಿ ಡಬಲ್; ಜಪಾನ್ ಅನ್ನೂ ಹಿಂದಿಕ್ಕಿದೆಯಾ ಭಾರತ?

ಇದನ್ನೂ ಓದಿ
Image
4.3 ಟ್ರಿಲಿಯನ್ ಡಾಲರ್ ಆದ ಭಾರತದ ಜಿಡಿಪಿ
Image
ಬೆಂಗಳೂರಿನಲ್ಲಿ ಟೊಯೋಟಾ ಆರ್ ಅಂಡ್ ಡಿ ಘಟಕ
Image
ಭಾರತದಲ್ಲಿ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮೈಲಿಗಲ್ಲು
Image
ರುಪೇ ಸಬ್ಸಿಡಿ ಖತಂ; ಪೇಮೆಂಟ್ಸ್ ಉದ್ಯಮಕ್ಕೆ 600 ಕೋಟಿ ನಷ್ಟಭೀತಿ

ಭಾರತೀಯ ರೈಲ್ವೆ ಒಟ್ಟಾರೆ ಈ ವರ್ಷ 1,400 ಲೋಕೋಮೋಟಿವ್​​ಗಳನ್ನು ತಯಾರಿಸಿ ದಾಖಲೆ ಬರೆದಿದೆ. ಇಷ್ಟೇ ಅಲ್ಲ, ಎರಡು ಲಕ್ಷಕ್ಕೂ ಅಧಿಕ ರೈಲ್ವೆ ವ್ಯಾಗನ್​​ಗಳನ್ನು ನಿರ್ಮಿಸಿದೆ. ಕಳೆದ 10 ವರ್ಷದಲ್ಲಿ 41,000 ಎಲ್​​ಎಚ್​​ಬಿ ರೈಲು ಕೋಚ್​​ಗಳನ್ನೂ ತಯಾರಿಸಿದೆ. ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ಈ ಹಿಂದೆ ವರ್ಷಕ್ಕೆ 400ರಿಂದ 500 ಎಲ್​​​ಎಚ್​​ಬಿ ಬೋಗಿಗಳ ನಿರ್ಮಾಣವಾಗುತ್ತಿತ್ತು. ಈಗ 5,000ದಿಂದ 5,500 ಕೋಚ್​​ಗಳನ್ನು ಪ್ರತೀ ವರ್ಷ ತಯಾರಿಸಲಾಗುತ್ತಿದೆಯಂತೆ.

ರೈಲ್ವೆ ಸುರಕ್ಷತೆಗೆ ಒತ್ತು

ರೈಲು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಸಾಧ್ಯವಾಗಿಸಲು ಮತ್ತು ಅಪಘಾತವಾಗದಂತೆ ಸುರಕ್ಷಿತ ಪ್ರಯಾಣಕ್ಕಾಗಿ ಸರ್ಕಾರಿ ಒತ್ತು ಕೊಡುತ್ತಿದೆ. ರೈಲ್ವೆ ಸುರಕ್ಷತೆಗಾಗಿ ಹೂಡಿಕೆಯನ್ನು 1.16 ಲಕ್ಷ ಕೊಟಿ ರೂಗೆ ಹೆಚ್ಚಿಸಲಾಗಿದೆ ಎನ್ನುವ ವಿಚಾರವನ್ನು ಸಚಿವರು ತಿಳಿಸಿದ್ದಾರೆ. ಮುಂದಿನ ಕೆಲ ವರ್ಷಗಳೊಳಗೆ ಎಲ್ಲಾ ಐಸಿಎಫ್ ಕೋಚ್​​​ಗಳನ್ನು ಎಲ್​​ಎಚ್​​ಬಿ ಕೋಚ್​​ಗಳಾಗಿ ಪರಿವರ್ತಿಸಲಾಗುವುದು ಎಂದಿದ್ದಾರೆ.

ಎಲ್​ಎಚ್​​ಬಿ ಬೋಗಿಗಳು ಹೊಸ ಮಾದರಿಯದ್ದಾಗಿದ್ದು, ಇವು ಹೆಚ್ಚು ವೇಗವಾಗಿ ಓಡಬಲ್ಲುವು, ಹೆಚ್ಚು ಸುರಕ್ಷಿತವಾಗಿರುತ್ತವೆ. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು, ಪರಿಸರಪೂರಕ ಫೀಚರ್​​ಗಳು ಇರುತ್ತವೆ.

ಇದನ್ನೂ ಓದಿ: ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ಸೆಕ್ಟರ್​​ನಲ್ಲಿ ಚೀನಾ, ಅಮೆರಿಕ ನಂತರ ಅತಿಹೆಚ್ಚು ರಿಸರ್ಚ್ ಪೇಪರ್ಸ್ ಸಲ್ಲಿಸಿದ್ದು ಭಾರತೀಯರೇ

‘ಉದ್ದದ ರೈಲುಗಳು, ಎಲೆಕ್ಟ್ರಾನಿಕ್ ಇಂಟರ್​​ಲಾಕಿಂಗ್, ಫಾಗ್ ಸೇಫ್ಟಿ ಸಾಧನ, ಕವಚ್ ಸಿಸ್ಟಂ ಇವುಗಳನ್ನು ಬಹಳ ವೇಗವಾಗಿ ಜಾರಿ ಮಾಡಲಾಗುತ್ತದೆ. ರೈಲು ಟ್ರ್ಯಾಕ್​​​ಗಳ ನಿರ್ವಹಣೆ ಮತ್ತಷ್ಟು ಸಮರ್ಪಕಗೊಳಿಸಲು ಹೊಸ ರೀತಿಯ ರೈಲ್ ಕಮ್ ರೋಡ್ ಅಥವಾ ಆರ್​​ಸಿಆರ್ ವಾಹನವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Sun, 23 March 25

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?