AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ಸೆಕ್ಟರ್​​ನಲ್ಲಿ ಚೀನಾ, ಅಮೆರಿಕ ನಂತರ ಅತಿಹೆಚ್ಚು ರಿಸರ್ಚ್ ಪೇಪರ್ಸ್ ಸಲ್ಲಿಸಿದ್ದು ಭಾರತೀಯರೇ

India's Semiconductor Research Surge: 2018ರಿಂದ 2023ರವರೆಗೆ ಭಾರತೀಯ ಸಂಶೋಧಕರು ಚಿಪ್ ವಿನ್ಯಾಸ ಮತ್ತು ತಯಾರಿಕೆಯಲ್ಲಿ 39,709 ಪ್ರಬಂಧಗಳನ್ನು ಸಲ್ಲಿಸಿದ್ದಾರೆ. ಜಾಗತಿಕವಾಗಿ ಸಲ್ಲಿಕೆಯಾದ ರಿಸರ್ಚ್ ಪೇಪರ್​​​ಗಳಲ್ಲಿ ಭಾರತದ ಪಾಲು 8.4%. ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್​​ನಲ್ಲಿ ಅತಿ ಹೆಚ್ಚು ರಿಸರ್ಚ್ ಪೇಪರ್ಸ್ಸ್ ಸಲ್ಲಿಸಿದ ದೇಶಗಳ ಪಟ್ಟಿಯಲ್ಲಿ ಚೀನಾ ಮತ್ತು ಅಮೇರಿಕಾ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. ಆದರೂ, ಉಲ್ಲೇಖಗಳ ಸಂಖ್ಯೆ ಕಡಿಮೆ ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್‌ಗೆ ಪ್ರವೇಶದ ಕೊರತೆ ಸವಾಲುಗಳಾಗಿವೆ. ಭಾರತದ ಬ್ಯಾಕ್‌ಎಂಡ್ ಕೌಶಲ್ಯವನ್ನು ಬಲಪಡಿಸುವುದು ಮತ್ತು ಸ್ವತಂತ್ರ ಸಾಫ್ಟ್‌ವೇರ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ.

ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ಸೆಕ್ಟರ್​​ನಲ್ಲಿ ಚೀನಾ, ಅಮೆರಿಕ ನಂತರ ಅತಿಹೆಚ್ಚು ರಿಸರ್ಚ್ ಪೇಪರ್ಸ್ ಸಲ್ಲಿಸಿದ್ದು ಭಾರತೀಯರೇ
ಸೆಮಿಕಂಡಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2025 | 7:03 PM

Share

ನವದೆಹಲಿ, ಮಾರ್ಚ್ 21: ಯಾವುದೇ ಉದ್ಯಮದ ಬೆಳವಣಿಗೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಮುಖ್ಯ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆಗೆ ಒತ್ತು ಕೊಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ, ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ (Chip Design and Fabrication) ತಂತ್ರಜ್ಞಾನದಲ್ಲಿ ಅತಿ ಹೆಚ್ಚು ರಿಸರ್ಚ್ ಪೇಪರ್ ಸಲ್ಲಿಸಿದ ದೇಶಗಳ ಸಾಲಿನಲ್ಲಿ ಭಾರತ ಇದೆ. 2018ರಿಂದ 2023ರ ಅವಧಿಯಲ್ಲಿ ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ವಿಷಯದಲ್ಲಿ ಭಾರತೀಯ ಸಂಶೋಧಕರು ಬರೋಬ್ಬರಿ 39,709 ರಿಸರ್ಚ್ ಪೇಪರ್ಸ್ (Research papers) ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಜಾಗತಿಕವಾಗಿ ಸಲ್ಲಿಕೆಯಾದ ಪೇಪರ್ ​ಗಳಲ್ಲಿ ಭಾರತೀಯರ ಪಾಲು ಶೇ. 8.4ರಷ್ಟಿದೆ. ಚೀನಾ ಮತ್ತು ಅಮೆರಿಕನ್ನರನ್ನು ಬಿಟ್ಟರೆ ಅತಿಹೆಚ್ಚು ರಿಸರ್ಚ್ ಪೇಪರ್ಸ್ ಸಲ್ಲಿಸಿರುವುದು ಭಾರತೀಯರೇ. ಸಂಶೋಧನೆಗೆ ಹೆಸರುವಾಸಿಯಾದ ಜಪಾನ್, ಸೌತ್ ಕೊರಿಯಾ ಮತ್ತು ಜರ್ಮನಿ ಯಂತಹ ದೇಶಗಳ ರಿಸರ್ಚರ್ಸ್​​ಗಳಿಗಿಂತಲೂ ಹೆಚ್ಚು ಪ್ರಬಂಧಗಳನ್ನು ಭಾರತೀಯರು ಮಂಡಿಸಿರುವುದು ಗಮನಾರ್ಹ.

ಮೇಲೆ ತಿಳಿಸಿದ 2018ರಿಂದ 2023ರವರೆಗಿನ ಐದು ವರ್ಷದ ಅವಧಿಯಲ್ಲಿ ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ವಿಷಯದಲ್ಲಿ ಚೀನೀಯರು ಒಟ್ಟಾರೆ 1,60,852 ರಿಸರ್ಚ್ ಪೇಪರ್​​ಗಳನ್ನು ಸಲ್ಲಿಸಿದ್ದಾರೆ. ನಂತರದ ಸ್ಥಾನ ಅಮೆರಿಕನ್ನರದ್ದು. ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಟೊಯೋಟಾ ಆರ್ ಅಂಡ್ ಡಿ ಘಟಕ
Image
ಭಾರತದಲ್ಲಿ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮೈಲಿಗಲ್ಲು
Image
ಮರುಗಾಡಿನಲ್ಲಿ ಸೇಬು ಬೆಳೆದ ರಾಜಸ್ಥಾನದ ರೈತರು
Image
ರುಪೇ ಸಬ್ಸಿಡಿ ಖತಂ; ಪೇಮೆಂಟ್ಸ್ ಉದ್ಯಮಕ್ಕೆ 600 ಕೋಟಿ ನಷ್ಟಭೀತಿ

ರಿಸರ್ಚ್ ಪೇಪರ್ ಹೆಚ್ಚಾದರೂ ಸೈಟೇಶನ್ ಕಡಿಮೆ

ಸರ್ಕಾರ ಸೆಮಿಕಂಡಕ್ಟರ್ ರಿಸರ್ಚ್ ಮತ್ತು ಅಭಿವೃದ್ಧಿಗೆ 2,000 ಕೋಟಿ ರೂ ಹೂಡಿಕೆ ಸೇರಿದಂತೆ ಬಹಳಷ್ಟು ಬೆಂಬಲ ನೀಡುತ್ತಿದೆ. ಈ ಕಾರಣಕ್ಕೆ ರಿಸರ್ಚ್ ಪೇಪರ್ಸ್ ಸಲ್ಲಿಕೆ ಹೆಚ್ಚುತ್ತಿರಬಹುದು. ಇದು ಸಕಾರಾತ್ಮಕ ಬೆಳವಣಿಗೆಯಾದರೂ ಕೆಲ ಸಮಸ್ಯೆಗಳು, ಹಿನ್ನಡೆಗಳೂ ಇವೆ. ಈ ರಿಸರ್ಚ್ ಪೇಪರ್​​ಗಳನ್ನು ಉಲ್ಲೇಖಿಸುವ ಅಥವಾ ರೆಫರ್ ಮಾಡುವ ಪ್ರಮಾಣ ಕಡಿಮೆ ಇದೆ. ಹಾಗೆಯೇ, ಅಧಿಕ ಪರವಾನಿಗೆ ವೆಚ್ಚದ ಕಾರಣದಿಂದ ಅತ್ಯಾಧುನಿಕ ಡಿಸೈನ್ ಸಾಫ್ಟ್​​ವೇರ್ ಪಡೆಯುವುದು ಕಷ್ಟವಾಗಿದೆ.

ಭಾರತವು ಚಿಪ್ ಡಿಸೈನ್​​ನ ಬ್ಯಾಕೆಂಡ್ ಕಾರ್ಯ ಗಳಲ್ಲಿ ಪರಿಣಿತಿ ಹೊಂದಿದೆ. ಆದರೆ, ಪ್ರಾಡಕ್ಟ್ ಲೆವೆಲ್​​ನ ಡಿಸೈನ್ ಸಾಮರ್ಥ್ಯ ಮತ್ತು ಸ್ವತಂತ್ರವಾಗಿ ಸಾಫ್ಟ್​​ವೇರ್ ಸಲ್ಯೂಶನ್ಸ್ ನಿರ್ಮಿಸುವ ಸಾಮರ್ಥ್ಯ ಬೆಳೆಯಬೇಕಿದೆ. ಇದೂ ಒಂದು ಸವಾಲು.

ಇದನ್ನೂ ಓದಿ: ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತೀಯರ ಪ್ರಾಬಲ್ಯ

ಜಾಗತಿಕವಾಗಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿರುವ ಉದ್ಯೋಗಿಗಳಲ್ಲಿ ಶೇ. 19ರಷ್ಟು ಮಂದಿ ಭಾರತೀಯರೇ ಇದ್ದಾರಂತೆ. ಆ ಮಟ್ಟಿಗೆ ಭಾರತದಲ್ಲಿ ಪ್ರತಿಭೆಗಳ ಸಮೂಹ ಇದೆ. ಆದರೆ, ಅವಶ್ಯಕ ಕೌಶಲ್ಯಗಳಿರುವ ಉದ್ಯೋಗಿಗಳ ಕೊರತೆ 2027-28ರ ವರ್ಷಕ್ಕೆ 80 ಲಕ್ಷದಷ್ಟಿರಬಹುದು ಎನ್ನುವ ಅಂದಾಜಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್