Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಮಾರ್ಚ್ 24 ರಿಂದ 30 ರವರೆಗಿನ ವಾರ ಭವಿಷ್ಯ

Weekly Horoscope: ಮಾರ್ಚ್ 24 ರಿಂದ 30 ರವರೆಗಿನ ವಾರ ಭವಿಷ್ಯ

ವಿವೇಕ ಬಿರಾದಾರ
|

Updated on: Mar 23, 2025 | 6:55 AM

24 ರಿಂದ 30 ವರೆಗಿನ ರಾಶಿ ಭವಿಷ್ಯದಲ್ಲಿ ಮೇಷ ಮತ್ತು ವೃಷಭ ರಾಶಿಯವರಿಗೆ ಶುಭಫಲಗಳನ್ನು ತಿಳಿಸಲಾಗಿದೆ. ಮೇಷ ರಾಶಿಯವರಿಗೆ ಆಸೆ-ಆಕಾಂಕ್ಷೆಗಳು ಈಡೇರುವ ಸಾಧ್ಯತೆ ಇದೆ, ವೃಷಭ ರಾಶಿಯವರಿಗೆ ವಿವಾಹ ಯೋಗ ಮತ್ತು ವ್ಯಾಪಾರದಲ್ಲಿ ವಿಸ್ತರಣೆ ಸಾಧ್ಯ. ಆದರೆ ಎರಡೂ ರಾಶಿಯವರು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಾರ್ಚ್ 24ರಿಂದ 30 ರ ವರೆಗಿನ ವಾರದ ರಾಶಿ ಫಲಗಳನ್ನು ಈ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ವಾರ ಕ್ರೋದಿನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ ಮತ್ತು ಶಿಶಿರ ಋತುವಿನ ಅಂತ್ಯವಾಗಿದ್ದು ವಸಂತ ಋತು ಆರಂಭವಾಗುತ್ತದೆ. ಹೊನ್ನಾಳಿ ಮತ್ತು ಕುಂದೂರಿನಲ್ಲಿ ಆಂಜನೇಯಸ್ವಾಮಿ ಹಾಗೂ ಮಲ್ಲಿಕಾರ್ಜುನ ರಥೋತ್ಸವಗಳು ನಡೆಯಲಿವೆ. ರಾಹು, ಶುಕ್ರ, ಬುಧ ಮತ್ತು ರವಿ ಮೀನ ರಾಶಿಯಲ್ಲಿದ್ದಾರೆ. ಮಾರ್ಚ್ 29ರಂದು ಶನಿ ಮೀನ ರಾಶಿಗೆ ಪ್ರವೇಶಿಸಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮೇಷ ರಾಶಿಯವರಿಗೆ ಐದರಿಂದ ಆರು ಗ್ರಹಗಳ ಶುಭಫಲವಿದೆ. ಆಸೆ-ಆಕಾಂಕ್ಷೆಗಳು ಈಡೇರಿ, ಯಶಸ್ಸು, ಕೀರ್ತಿ ಮತ್ತು ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿ, ವ್ಯಾಪಾರದಲ್ಲಿ ಲಾಭ ಮತ್ತು ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಆದರೆ ಬಂಧುಗಳ ಜೊತೆ ಜಾಗರೂಕರಾಗಿರಬೇಕು.

ವೃಷಭ ರಾಶಿಯವರಿಗೆ ಆರು ರಿಂದ ಏಳು ಗ್ರಹಗಳ ಶುಭಫಲವಿದೆ. ಅವಿವಾಹಿತರಿಗೆ ವಿವಾಹ ಯೋಗ, ಕುಟುಂಬದಲ್ಲಿ ಬಾಂಧವ್ಯ ಹೆಚ್ಚಳ, ಮತ್ತು ವಿದೇಶದಿಂದ ಶುಭ ಸುದ್ದಿ ಸಿಗಬಹುದು. ಆರ್ಥಿಕ ತೊಂದರೆ ಮತ್ತು ಆರೋಗ್ಯದ ಬಗ್ಗೆ ಚಿಂತೆ ಇರಬಹುದು. ಪಾಲುದಾರಿಕೆಯಿಂದ ಲಾಭ ಮತ್ತು ವ್ಯಾಪಾರದಲ್ಲಿ ವಿಸ್ತರಣೆ ಸಾಧ್ಯ.