IPL 2025: ಸಿಡಿಲಬ್ಬರದ ಅರ್ಧಶತಕ; ಹೆಡ್ ಆಕ್ರಮಣಕ್ಕೆ ರಾಜಸ್ಥಾನ್ ವೇಗಿಗಳು ಹೈರಾಣು; ವಿಡಿಯೋ ನೋಡಿ
Sunrisers Hyderabad's Explosive Start: ಐಪಿಎಲ್ 2025ರ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತ ಸನ್‌ರೈಸರ್ಸ್, ಅದ್ಭುತ ಆರಂಭ ಪಡೆದುಕೊಂಡಿದೆ. ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಹೆಡ್ ಮತ್ತು ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಹೈದರಾಬಾದ್ ಮೊದಲ 6 ಓವರ್‌ಗಳಲ್ಲಿ 89 ರನ್ ಗಳಿಸಿತು. ಇದು ಪವರ್‌ಪ್ಲೇಯಲ್ಲಿನ ಮೂರನೇ ಅತಿ ಹೆಚ್ಚು ಮೊತ್ತವಾಗಿದೆ.
ಐಪಿಎಲ್ 2025 ರ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತಿರುವ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಎಂದಿನಂತೆ ತನ್ನ ಹೊಡಿಬಡಿ ಆಟದ ಮೂಲಕ ಮೈದಾನದಲ್ಲಿ ರನ್ಗಳ ಮಳೆ ಸುರಿಸುತ್ತಿದೆ. ಅದರಲ್ಲೂ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತೊಮ್ಮೆ ಎದುರಾಳಿ ತಂಡಕ್ಕೆ ತಲೆನೋವಾಗಿದ್ದು, ಬೌಂಡರಿ ಸಿಕ್ಸರ್ಗಳ ಮಳೆಗರೆಯುತ್ತಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದಿರುವ ಹೆಡ್ ಕೇವಲ 21 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ ಹೆಡ್ ಹಾಗೂ ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಹೈದರಾಬಾದ್ ತಂಡ ಮೊದಲ 6 ಓವರ್‌ಗಳಲ್ಲಿ 89 ರನ್ ಕಲೆಹಾಕಿದೆ. ಇದು ತಂಡವೊಂದು ಪವರ್‌ಪ್ಲೇನಲ್ಲಿ ಕಲೆಹಾಕಿದ ಮೂರನೇ ಅತ್ಯಧಿಕ ಮೊತ್ತವಾಗಿದೆ. ಮೊದಲೆರಡು ಅತ್ಯಧಿಕ ಪವರ್‌ಪ್ಲೇ ರನ್ಗಳನ್ನು ಸಹ ಹೈದರಾಬಾದ್ ತಂಡದಿಂದಲೇ ಸಿಡಿದಿವೆ.