Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 1000 ರನ್, ಸ್ಫೋಟಕ ಅರ್ಧಶತಕ..! 400ನೇ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ಆರ್ಭಟ; ವಿಡಿಯೋ

IPL 2025: 1000 ರನ್, ಸ್ಫೋಟಕ ಅರ್ಧಶತಕ..! 400ನೇ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ಆರ್ಭಟ; ವಿಡಿಯೋ

ಪೃಥ್ವಿಶಂಕರ
|

Updated on:Mar 22, 2025 | 11:22 PM

Virat Kohli Achieves Milestone: ವಿರಾಟ್ ಕೊಹ್ಲಿ ಅವರು 2025ರ ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧ ತಮ್ಮ 400ನೇ ಟಿ20 ಪಂದ್ಯವನ್ನು ಆಡಿದ್ದು, ಈ ಮೈಲಿಗಲ್ಲನ್ನು ಮುಟ್ಟಿದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ಅವರು 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕೆಕೆಆರ್ ವಿರುದ್ಧ 1000 ರನ್ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಕೊಹ್ಲಿ ನಾಲ್ಕು ವಿಭಿನ್ನ ಐಪಿಎಲ್ ತಂಡಗಳ ವಿರುದ್ಧ 1000ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ.

ಕೆಕೆಆರ್ ವಿರುದ್ಧ ನಡೆದ 2025 ರ ಐಪಿಎಲ್​ನ ಮೊದಲ ಪಂದ್ಯ ವಿರಾಟ್​ ಕೊಹ್ಲಿಗೆ ಐತಿಹಾಸಿಕ ಪಂದ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ. ರೋಹಿತ್ ಈ ಸ್ವರೂಪದಲ್ಲಿ 448 ಪಂದ್ಯಗಳನ್ನು ಆಡಿದ್ದರೆ, ಕಾರ್ತಿಕ್ 412 ಪಂದ್ಯಗಳನ್ನು ಆಡಿದ್ದಾರೆ. ತಮ್ಮ 400ನೇ ಟಿ20 ಪಂದ್ಯವನ್ನು ಇನ್ನಷ್ಟು ಸ್ಮರಣೀಯಗೊಳಿಸಿರುವ ವಿರಾಟ್ ಕೊಹ್ಲಿ ಕೇವಲ 30 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಪೂರೈಸಿದ್ದಲ್ಲದೆ ಅಜೇಯ 59 ರನ್ ಕೂಡ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಏತನ್ಮಧ್ಯೆ, ಈ ಅರ್ಧಶತಕದೊಂದಿಗೆ ವಿರಾಟ್ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ 1000 ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆಯನ್ನು ಬರೆದಿದ್ದಾರೆ. ಡೇವಿಡ್ ವಾರ್ನರ್ ಮತ್ತು ರೋಹಿತ್ ನಂತರ ಈ ಸಾಧನೆ ಮಾಡಿ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದರೊಂದಿಗೆ ಕೊಹ್ಲಿ ನಾಲ್ಕು ವಿಭಿನ್ನ ಐಪಿಎಲ್ ತಂಡಗಳಾದ ಸಿಎಸ್‌ಕೆ, ಡಿಸಿ, ಕೆಕೆಆರ್ ಮತ್ತು ಪಿಬಿಕೆಎಸ್ ವಿರುದ್ಧ 1000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.

Published on: Mar 22, 2025 11:20 PM