ITR and Penalty: ಐಟಿಆರ್ ಸಲ್ಲಿಸುವಾಗ ಸುಳ್ಳು ದಾಖಲೆ ತೋರಿಸೀರಿ ಜೋಕೆ..! ಎರಡು ಪಟ್ಟು ದಂಡ ವಸೂಲಿ ಮಾಡುತ್ತೆ ಆದಾಯ ತೆರಿಗೆ ಇಲಾಖೆ

Income Tax Return and Fake Documents: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ರೆಂಟ್ ರೆಸಿಪ್ಟ್, ಡೊನೇಶನ್ ಇತ್ಯಾದಿ ವೆಚ್ಚ ದಾಖಲೆಗಳನ್ನು ತೋರಿಸುವುದು ಸಾಮಾನ್ಯ. ಅನೇಕರು ಇದನ್ನು ದುರುಪಯೋಗಿಸಿಕೊಳ್ಳುತ್ತಿರುವುದರಿಂದ ಇಲಾಖೆ ನಿಮಗೂ ನೋಟೀಸ್ ಕೊಡಬಹುದು. ಎಚ್ಚರ ಇರಲಿ...

ITR and Penalty: ಐಟಿಆರ್ ಸಲ್ಲಿಸುವಾಗ ಸುಳ್ಳು ದಾಖಲೆ ತೋರಿಸೀರಿ ಜೋಕೆ..! ಎರಡು ಪಟ್ಟು ದಂಡ ವಸೂಲಿ ಮಾಡುತ್ತೆ ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ
Follow us
|

Updated on: Jul 27, 2023 | 4:25 PM

ಒಂದು ವರ್ಷದಲ್ಲಿ ನಮ್ಮ ಆಯ ಮತ್ತು ವ್ಯಯವನ್ನು ಅಂದರೆ ಆದಾಯ ಮತ್ತು ಖರ್ಚನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ (IT Returns) ಸಲ್ಲಿಸುವ ಮೂಲಕ ಆದಾಯ ತೆರಿಗೆ ಇಲಾಖೆಗೆ ತೋರಿಸುತ್ತೇವೆ. ಕಡಿತಗೊಂಡಿರುವ ತೆರಿಗೆಯನ್ನು ಮರಳಿ ಕ್ಲೇಮ್ ಮಾಡಲು ಇಲಾಖೆ ಹಲವು ಅವಕಾಶಗಳನ್ನು ಕೊಟ್ಟಿದೆ. ಕೆಲ ಸೇವಿಂಗ್ ಸ್ಕೀಮ್​ಗಳು, ಮನೆ ಬಾಡಿಗೆ, ದೇಣಿಗೆ (Donations) ಇತ್ಯಾದಿಗೆ ಮಾಡುವ ಖರ್ಚನ್ನು ತೋರಿಸಿದರೆ ಒಂದಷ್ಟು ತೆರಿಗೆ ಹಣವನ್ನು ಮರಳಿ ಪಡೆಯಬಹುದು. ಆದರೆ ಬಹಳಷ್ಟು ತೆರಿಗೆ ಪಾವತಿದಾರರು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಆದಾಯ ತೆರಿಗೆ ಇಲಾಖೆಯ ಅನುಮಾನ. ನಕಲಿ ರೆಂಟ್ ರೆಸಿಪ್ಟ್​ಗಳು, ನಕಲಿ ಡೊನೇಶನ್​ಗಳು ಇತ್ಯಾದಿ ನಕಲಿ ದಾಖಲೆಗಳನ್ನು ಐಟಿಆರ್​ನಲ್ಲಿ ತೋರಿಸಲಾಗುತ್ತಿದೆ. ಇಂಥ ಐಟಿಆರ್​ಗಳ ಮೇಲೆ ಗಮನ ಇಟ್ಟಿರುವ ಐಟಿ ಇಲಾಖೆ, ವಿವಿಧ ಹಂತಗಳಲ್ಲಿ ಪರಿಶೀಲನೆ ಮಾಡುತ್ತಿದೆ.

ಬಾಡಿಗೆ ಹಣಕ್ಕೆ ತೆರಿಗೆ ವಿನಾಯಿತಿ

ಸಂಬಳಕ್ಕೆ ಕೆಲಸ ಮಾಡುವ ತೆರಿಗೆ ಪಾವತಿದಾರರು ಬಾಡಿಗೆ ಮನೆಯಲ್ಲಿದ್ದರೆ ಬಾಡಿಗೆ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್ 10(13ಎ) ಪ್ರಕಾರ ಮನೆ ಬಾಡಿಗೆ ಒಂದು ಲಕ್ಷ ರೂಗಿಂತ ಹೆಚ್ಚು ಇದ್ದರೆ ಮಾಲೀಕರ ಪ್ಯಾನ್ ನಂಬರ್ ನಮೂದಿಸಬೇಕು. 1 ಲಕ್ಷ ರೂ ಒಳಗಿದ್ದರೆ ಪ್ಯಾನ್ ನಂಬರ್ ಕೊಡುವ ಅವಶ್ಯಕತೆ ಇಲ್ಲ.

ಈ ಕಾನೂನನ್ನು ಹಲವು ತೆರಿಗೆಪಾವತಿದಾರರು ದುರುಪಯೋಗಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಇಂಥ ತೆರಿಗೆ ಪಾವತಿದಾರರಿಗೆ ಇಲಾಖೆಯಿಂದ ನೋಟೀಸ್ ಬಂದಿದೆ. ಸರಿಯಾದ ದಾಖಲೆಗಳು ಇದ್ದರೆ ಬಚಾವ್. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾದೀತು.

ಇದನ್ನೂ ಓದಿ: IT Refund: ಐಟಿ ರಿಟರ್ನ್ ಫೈಲ್ ಮಾಡಿದರೂ ರೀಫಂಡ್ ಬಂದಿಲ್ಲವಾ? ಸಮಸ್ಯೆ ಪತ್ತೆಹಚ್ಚಿ ಬಗೆಹರಿಸುವುದು ಹೇಗೆ?

ತೆರಿಗೆ ಮೊತ್ತದ ಎರಡು ಪಟ್ಟು ಹಣ ದಂಡ?

ನಕಲಿ ಮನೆ ಬಾಡಿಗೆ ತೋರಿಸಲಾಗುತ್ತಿದೆ ಎಂದು ಇಲಾಖೆಗೆ ಅನಿಸಿದಲ್ಲಿ ಆಗ ಸಮಗ್ರವಾಗಿ ತನಿಖೆ ನಡೆಸುತ್ತದೆ. ಬಾಹ್ಯ ಮೂಲಗಳಿಂದ ವ್ಯಕ್ತಿಯ ಬಗ್ಗೆ ವಿವರ ಪಡೆದು, ಐಟಿಆರ್​ನಲ್ಲಿರುವ ಮಾಹಿತಿಯೊಂದಿಗೆ ತುಲನೆ ಮಾಡಲಾಗುತ್ತದೆ. ಅದರಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದು ಕಂಡುಬಂದರೆ ಅವರಿಗೆ ನೋಟೀಸ್ ನೀಡಲಾಗುತ್ತದೆ.

ಆದಾಯವನ್ನು ಮುಚ್ಚಿಟ್ಟುಕೊಳ್ಳಲಾಗಿರುವುದು ಕಂಡು ಬಂದಲ್ಲಿ, ಆದಾಯಕ್ಕೆ ಕಟ್ಟಬೇಕಿರುವ ತೆರಿಗೆಯ ಎರಡು ಪಟ್ಟು ಹಣವನ್ನು ದಂಡವಾಗಿ ಕಟ್ಟಿಸಿಕೊಳ್ಳುವ ಅಧಿಕಾರ ಐಟಿ ಇಲಾಖೆಗೆ ಇರುತ್ತದೆ.

ಇದನ್ನೂ ಓದಿ: ITR: ಐಟಿಆರ್ ಫೈಲ್ ಮಾಡುತ್ತಿದ್ದೀರಾ? ಈ ಕೊನೆಯ ಹಂತ ಮರೆಯದಿರಿ; ಇವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ರೀಫಂಡ್ ಸಿಗಲ್ಲ

ಐಟಿ ಇಲಾಖೆ ರಾಡಾರ್​ಗೆ ಗುರಿಯಾಗದಿರಲು ಈ ಮುನ್ನೆಚ್ಚರಿಕೆಗಳು ಇರಲಿ

  1. ಐಟಿಆರ್ ಸಲ್ಲಿಸುವ ವೇಳೆ ಯಾವ ಆದಾಯವನ್ನೂ ಮುಚ್ಚಿಡಬೇಡಿ
  2. ಅನಗತ್ಯವಾಗಿ ಯಾವ ತೆರಿಗೆಯನ್ನೂ ತಪ್ಪಿಸಬೇಡಿ
  3. ಬಾಡಿಗೆ ಮನೆಯಲ್ಲಿದ್ದರೆ ಕರಾರು ಪತ್ರ ಅಪ್​ಡೇಟ್ ಆಗಿರಲಿ
  4. ಬಾಡಿಗೆಯನ್ನು ಕ್ಯಾಷ್​ನಿಂದ ಕೊಡುವ ಬದಲು ಆನ್​ಲೈನ್ ಅಥವಾ ಚೆಕ್ ಮೂಲಕ ಕೊಡಿ
  5. 1 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಬಾಡಿಗೆ ಇದ್ದರೆ ಮಾಲೀಕರ ಪ್ಯಾನ್ ನಂಬರ್ ನಮೂದಿಸಿ
  6. ಮಾಲೀಕರ ಬಳಿ ಪ್ಯಾನ್ ನಂಬರ್ ಇಲ್ಲವಾದರೆ ಪ್ಯಾನ್ ಡಿಕ್ಲರೇಶನ್ ಪಡೆಯಿರಿ
  7. ನೀರಿನ ಬಿಲ್, ಕರೆಂಟ್ ಬಿಲ್ ಇತ್ಯಾದಿ ದಾಖಲೆಗಳನ್ನು ಇಟ್ಟುಕೊಂಡಿರಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್