ಬಳ್ಳಾರಿಯಲ್ಲಿ ನೀರಿನ ಅಭಾವ: ಕುಡಿಯುವ ನೀರಿಗಾಗಿ ನದಿಯಲ್ಲೇ ಬೋರವೆಲ್ ಕೊರೆದ ಜನ
ಬಳ್ಳಾರಿಯಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ ಗ್ರಾಮಸ್ಥರು ವೇದಾವತಿ ನದಿಯಲ್ಲಿ ಬೋರ್‌ವೆಲ್‌ಗಳನ್ನು ಕೊರೆದಿದ್ದಾರೆ. ಬೇಸಿಗೆಯ ಬಿಸಿಲಿನಿಂದಾಗಿ ಭೂಗರ್ಭಜಲ ಮಟ್ಟ ಕುಸಿದಿದೆ ಮತ್ತು ಸಾಮಾನ್ಯ ಬೋರ್‌ವೆಲ್‌ಗಳು ಖಾಲಿಯಾಗಿವೆ. ರೂಪನಗುಡಿ, ಕಮ್ಮರಚೇಡ ಮತ್ತು ರಾರಾವಿ ಗ್ರಾಮಗಳಲ್ಲಿ ಪರಿಸ್ಥಿತಿ ತೀವ್ರವಾಗಿದೆ. ನದಿ ಒಣಗುತ್ತಿರುವುದು ಜನರು ಮತ್ತು ಜಾನುವಾರುಗಳಿಗೆ ಸಂಕಷ್ಟ ತಂದೊಡ್ಡಿದೆ.

ಬಳ್ಳಾರಿ, ಮಾರ್ಚ್ 23: ಜಮೀನುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರಿನ (water) ಪಾಯಿಂಟ್ ನೋಡಿ ಬೋರ್ವೆಲ್ ಹಾಕುವುದನ್ನ ನಾವೆಲ್ಲ ನೋಡಿದ್ದೆವೆ. ಆದರೆ ಇಲ್ಲೊಂದು ಕಡೆ ನದಿ ಒಡಲಿನಲ್ಲೇ ಬೋರವೆಲ್ ಕೊರಸಿ ಊರಿಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಬೇಸಿಗೆ ಆರಂಭದಲ್ಲಿಯೇ ಗಣಿನಾಡು ಬಳ್ಳಾರಿಯಲ್ಲಿ (Ballari) ನೀರಿನ ಅಭಾವ ಶುರುವಾಗಿದೆ. ಹೀಗಾಗಿ ವೇದಾವತಿ ನದಿಯ ಉದ್ದಕ್ಕೂ ಬೋರವೆಲ್ ಕೊರಸಿ ತಮ್ಮ ಗ್ರಾಮಗಳಿಗೆ, ಕೃಷಿ ಜಮೀನುಗಳಿಗೆ ನೀರು ಸರಬರಾಜು ಸಪ್ಲೈ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ವೇದಾವತಿ ನದಿಯಲ್ಲಿ ಬೋರವೆಲ್ ಕೊರೆತ
ಬೇಸಿಗೆ ಆರಂಭದಲ್ಲಿಯೇ ಗಣಿನಾಡು ಬಳ್ಳಾರಿಯಲ್ಲಿ ನೀರಿನ ಅಭಾವ ಶುರುವಾಗಿದೆ. ಅಂತರ್ಜಲ ಮಟ್ಟ ಕುಸಿತ ಹಿನ್ನೆಲೆ ಜಮೀನುಗಳಲ್ಲಿ ಹಾಗೂ ಖಾಲಿ ಜಾಗೆಗಳಲ್ಲಿದ್ದ ಬೋರವೆಲ್‌ಗಳು ಭತ್ತಿ ಹೋಗಿವೆ. ಹೀಗಾಗಿ ವೇದಾವತಿ ನದಿ ಒಡಲಲ್ಲೇ ಜನರು ಬೋರವೆಲ್ ಕೊರೆಸುತ್ತಿದ್ದಾರೆ. ರೂಪನಗುಡಿ ಹಾಗೂ ಕಮ್ಮರಚೇಡ್ ಗ್ರಾಮಗಳಿಗೆ ವೇದಾವತಿ ನದಿಯಲ್ಲಿ ಕೊರೆಸಿದ ಬೋರ್‌ಗಳಿಂದ ನೀರು ಸಪ್ಲೈ ಆಗುತ್ತಿದೆ. ಇನ್ನು ಆ ಬೋರಗಳಲ್ಲಿ ಸದ್ಯಕ್ಕೆ ಮೂರು ಇಂಚು ನೀರು ಬಿದ್ದಿದ್ದು ಅದೇ ನೀರನ್ನ ಗ್ರಾಮಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಆದರೆ ಆ ನೀರು ಜನಕ್ಕೆ, ಜಾನುವಾರಿಗೆ ಸಾಲುತ್ತಿಲ್ಲ. ರೂಪನಗುಡಿ ಗ್ರಾಮದಲ್ಲಿ 7000 ಜನ ಸಂಖ್ಯೆ ಇದೆ, ಕಮ್ಮರಚೇಡ್ ಗ್ರಾಮದಲ್ಲಿ 4000 ಕ್ಕೂ ಅಧಿಕ ಜನ ಸಂಖ್ಯೆ ಇದೆ. ಹೀಗಾಗಿ ಎರಡು ಬೋರಗಳ ಮೂಲಕ ನಿರಂತರ ನೀರನ್ನ ಹರಿಸಲಾಗುತ್ತಿದೆ. ಇಷ್ಟಿದ್ದರೂ ನೀರಿನ ಅಭಾವ ಇದೆ. ಹೀಗಾಗಿ ಬೇಸಿಗೆ ಮುಗಿಯೋವರಗೆ ಏನ ಗತಿ ಅನ್ನೊದು ಜನರ ಆತಂಕವಾಗಿದೆ.
ಇದನ್ನೂ ಓದಿ: ಅಂತಿಮ ಹಂತಕ್ಕೆ ಬಂದ ಸಿಗಂದೂರು ತೂಗು ಸೇತುವೆ: ದೇಶದ 7ನೇ ಅತಿದೊಡ್ಡ ಸೇತುವೆ ಹೇಗಿದೆ ನೋಡಿ
ನೀರಿನ ಅಭಾವ ಹಿನ್ನೆಲೆ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲೂ ಜನ ವೇದಾವತಿ ನದಿಯಲ್ಲಿ ಅನಿವಾರ್ಯವಾಗಿ ಬೋರವೆಲ್ ಕೊರೆಸುತ್ತಿದ್ದಾರೆ. ನದಿಯುದ್ದಕ್ಕೂ ಎಲ್ಲಿ ನೋಡಿದರು ಪೈಪ್‌ಗಳು ಕಾಣಸಿಗುತ್ತವೆ. ಇನ್ನೂ ವೇದಾವತಿ ನದಿ ನೀರನ್ನೆ ನಂಬಿ ಒಂದು ಲಕ್ಷಕ್ಕೂ ಅಧಿಕ ಎಕರೆ ಜಮೀನುಗಳಲ್ಲಿ ಭತ್ತ, ಮೆಕ್ಕೆಜೋಳ ಹೀಗೆ ಹಲವು ವಿಧಧ ಬೆಳೆ ಬೆಳೆಯಲಾಗಿದೆ. ಆದರೆ ನದಿಯಲ್ಲಿ ನೀರೇ ಇಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೂ ಜಾನವಾರಗಳದ್ದಂತು ನದಿಯಲ್ಲಿನ ಗುಂಡಿಗಳಲ್ಲಿ ನಿಂತ ನೀರನ್ನೆ ಹುಡಕಿಕೊಂಡು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಮುಗಿಯೋವರಗೆ ಇನ್ನೂ ಎಷ್ಟೆಲ್ಲಾ ಸಮಸ್ಯೆ ಅನುಭವಿಸಬೇಕೋ ಅನ್ನೊದು ಜನರಿಗೆ ಆತಂಕವಾಗಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕಾಲುವೆಗಳಿಗೆ ನೀರು ಬಿಡಿಸುವ ಕೆಲಸ ಮಾಡಬೇಕಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಇನ್ನೇನು ಫಸಲು ಬಿಡುತ್ತೆ ಅನ್ನೊ ಹೊತ್ತಲ್ಲಿ ನೀರಿಲ್ಲ. ಜೊತೆಗೆ ಕುಡಿಯಲು ನೀರನ ಅಭಾವ ಶುರುವಾಗಿದೆ ಅನ್ನೊದು ಜನರ ಒತ್ತಾಯವಾಗಿದೆ. ಜೊತೆಗೆ ಗ್ರಾಮ ಪಂಚಾಯತಿಗಳು ನದಿ ಒಡಲಲ್ಲಿ ಬೋರ ಕೊರಸಿ ನೀರು ಹರಿಸುತ್ತಿವೆ. ಇದು ಹೀಗೆ ಮುಂದುವರೆದರೆ ಕಷ್ಟ ಅನ್ನೊದು ಜನ್ರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಪ್ರವಾಸಿತಾಣ ನಂದಿಗಿರಿಧಾಮ 1 ತಿಂಗಳು ಬಂದ್: ವೀಕೆಂಡ್ನಲ್ಲಿ ಮಾತ್ರ ಓಪನ್..!
ಗಣಿನಾಡು ಬಳ್ಳಾರಿ ಹಾಗೂ ಸಿರಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ ಅಭಾವ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಎಲ್ಲೆಲ್ಲಿ ನೀರಿನ ಸಮಸ್ಯೆ ಅದನ್ನ ಬಗೆ ಹರಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.