Sign In

By signing in or creating an account, you agree with Associated Broadcasting Company's Terms & Conditions and Privacy Policy.

Travis Head: ಬರೋಬ್ಬರಿ 105 ಮೀಟರ್: ಟ್ರಾವಿಸ್ ಹೆಡ್ ಸ್ಫೋಟಕ ಸಿಕ್ಸ್​ ಕಂಡು ಶಾಕ್ ಆದ ಇಡೀ ಸ್ಟೇಡಿಯಂ

SRH vs RR, IPL 2025: ಐಪಿಎಲ್ 2025ರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪವರ್‌ ಪ್ಲೇನ 5 ನೇ ಓವರ್ ಅನ್ನು ಜೋಫ್ರಾ ಆರ್ಚರ್ ಬೌಲ್ ಮಾಡಿದರು, ಇದು ಪಂದ್ಯದಲ್ಲಿ ಅವರ ಮೊದಲ ಓವರ್ ಆಗಿತ್ತು. ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಟ್ರಾವಿಸ್ ಹೆಡ್ ಮೊದಲ ಓವರ್‌ನ ಮೊದಲ ಚೆಂಡನ್ನು ಬೌಂಡರಿಗೆ ಹೊಡೆದರು. ಎರಡನೇ ಎಸೆತದಲ್ಲಿ ಬಂದಿದ್ದು ಸ್ಫೋಟಕ ಸಿಕ್ಸ್. ಈ ಚೆಂಡು ಕ್ರೀಸ್‌ನಿಂದ ಬರೋಬ್ಬರಿ 105 ಮೀಟರ್ ದೂರದಲ್ಲಿ ಬಿತ್ತು.

Travis Head: ಬರೋಬ್ಬರಿ 105 ಮೀಟರ್: ಟ್ರಾವಿಸ್ ಹೆಡ್ ಸ್ಫೋಟಕ ಸಿಕ್ಸ್​ ಕಂಡು ಶಾಕ್ ಆದ ಇಡೀ ಸ್ಟೇಡಿಯಂ
Travis Head 105m Six
Follow us
Vinay Bhat
|

Updated on:Mar 23, 2025 | 6:19 PM

ಬೆಂಗಳೂರು (ಮಾ, 23): ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ರಾಜಸ್ಥಾನ್ ರಾಯಲ್ಸ್ (SRH vs RR) ತಂಡದ ಬೌಲಿಂಗ್ ಲೈನ್‌ಅಪ್ ಅನ್ನು ಛಿದ್ರಗೊಳಿಸಿದರು. ಆಸ್ಟ್ರೇಲಿಯಾದ ದೈತ್ಯ ಆಟಗಾರ ಹೆಡ್, 2024 ರ ಸೀಸನ್ ಅನ್ನು ಎಲ್ಲಿ ಕೊನೆಗೊಳಿಸಿದ್ದರೊ ಅಲ್ಲಿಂದಲೇ 2025 ರ ಐಪಿಎಲ್ ಸೀಸನ್ ಅನ್ನು ಪ್ರಾರಂಭಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಬೌಲರ್‌ಗಳನ್ನು ಸದೆಬಡಿದ ಹೆಡ್ ಈ ಋತುವಿನ ಅತ್ಯಂತ ವೇಗದ ಅರ್ಧಶತಕ ಗಳಿಸಿದರು. ಇದೇ ಸಮಯದಲ್ಲಿ, ಅವರು ಜೋಫ್ರಾ ಆರ್ಚರ್ ಬೌಲಿಂಗ್​ನಲ್ಲಿ ಸ್ಫೋಟಕ ಸಿಕ್ಸ್ ಸಿಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.

ಟ್ರಾವಿಸ್ ಹೆಡ್ ಬ್ಯಾಟ್​ನಿಂದ ಬಂತು 105 ಮೀಟರ್ ಉದ್ದದ ಸಿಕ್ಸ್:

ಪವರ್‌ ಪ್ಲೇನ 5 ನೇ ಓವರ್ ಅನ್ನು ಜೋಫ್ರಾ ಆರ್ಚರ್ ಬೌಲ್ ಮಾಡಿದರು, ಇದು ಪಂದ್ಯದಲ್ಲಿ ಅವರ ಮೊದಲ ಓವರ್ ಆಗಿತ್ತು. ಹೆಡ್ ಮೊದಲ ಓವರ್‌ನ ಮೊದಲ ಚೆಂಡನ್ನು ಬೌಂಡರಿಗೆ ಹೊಡೆದರು. ಎರಡನೇ ಎಸೆತದಲ್ಲಿ ಬಂದಿದ್ದು ಸ್ಫೋಟಕ ಸಿಕ್ಸ್. ಈ ಚೆಂಡು ಕ್ರೀಸ್‌ನಿಂದ ಬರೋಬ್ಬರಿ 105 ಮೀಟರ್ ದೂರದಲ್ಲಿ ಬಿತ್ತು. ಈ ಸಿಕ್ಸ್‌ ಕಂಡು ಜೋಫ್ರಾ ಆರ್ಚರ್ ಕೂಡ ಶಾಕ್ ಆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಐಪಿಎಲ್ ವೇಳೆ ಭದ್ರತಾ ಲೋಪ ಎಸಗುವ ಅಭಿಮಾನಿಗಳೇ ಎಚ್ಚರ ..!
Image
31 ಎಸೆತಗಳಲ್ಲಿ 69 ರನ್ ಚಚ್ಚಿದ ಟ್ರಾವಿಸ್ ಹೆಡ್
Image
ಕಿವೀಸ್ ವಿರುದ್ಧ 115 ರನ್​​ಗಳಿಂದ ಸೋತ ಪಾಕಿಸ್ತಾನ
Image
ರಾಜಸ್ಥಾನ್ ವಿರುದ್ಧ 44 ರನ್​ಗಳಿಂದ ಗೆದ್ದ ಹೈದರಾಬಾದ್

ಟ್ರಾವಿಸ್ ಹೆಡ್ ಸಿಡಿಸಿದ ಸಿಕ್ಸ್​ನ ವಿಡಿಯೋ ಇಲ್ಲಿದೆ:

ಪವರ್ ಪ್ಲೇನ ಕೊನೆಯ ಓವರ್​ನಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಹೆಡ್, ಜೋಫ್ರಾ ಆರ್ಚರ್ ತಮ್ಮ ಮೊದಲ ಓವರ್​ನಲ್ಲೇ 23 ರನ್‌ಗಳನ್ನು ಹರಿಬಿಟ್ಟರು. ಓಪನರ್​ಗಳಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭದಲ್ಲಿ 45 ರನ್ ಸೇರಿಸಿದರು. ನಂತರ, ಅವರು ಇಶಾನ್ ಕಿಶನ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಕೇವಲ 39 ಎಸೆತಗಳಲ್ಲಿ 85 ರನ್ ಗಳಿಸಿದರು, ಇದರಲ್ಲಿ ಅವರ ಕೊಡುಗೆ 22 ಎಸೆತಗಳಲ್ಲಿ 48 ರನ್‌ಗಳು.

IPL 2025: ವಿರಾಟ್ ಕೊಹ್ಲಿ ಅಭಿಮಾನಿಯನ್ನು ಜೈಲಿಗಟ್ಟಿದ ಕೋಲ್ಕತ್ತಾ ಪೊಲೀಸರು

ಐಪಿಎಲ್ 2025 ರಲ್ಲಿ ಹೆಡ್ ಅತ್ಯಂತ ವೇಗದ ಅರ್ಧಶತಕ:

ಹೆಡ್ ಅವರ ಒಟ್ಟು ಇನ್ನಿಂಗ್ಸ್ 31 ಎಸೆತಗಳನ್ನು ಒಳಗೊಂಡಿತ್ತು, ಇದರಲ್ಲಿ ಅವರು 216 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 67 ರನ್ ಗಳಿಸಿದರು, ಇದರಲ್ಲಿ 9 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿವೆ. ಈ ಇನ್ನಿಂಗ್ಸ್‌ನಲ್ಲಿ, ಹೆಡ್ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು, ಇದು ಐಪಿಎಲ್ 2025 ರಲ್ಲಿ ಇದುವರೆಗಿನ ವೇಗದ ಅರ್ಧಶತಕವಾಗಿದೆ. ಇದೇ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಶತಕ ಕೂಡ ಸಿಡಿಸಿದರು. ಕೇವಲ 47 ಎಸೆತಗಳಲ್ಲಿ 11 ಫೋರ್, 6 ಸಿಕ್ಸರ್ ಚಚ್ಚಿ ಅಜೇಯ 107 ರನ್ ಬಾರಿಸಿದರು.

ಕಿಶನ್ ಅವರ 106, ಹೆಡ್ 67, ಹೆನ್ರಿಚ್ ಕ್ಲಾಸೆನ್ 34 ಹಾಗೂ ನಿತೀಶ್ ರೆಡ್ಡಿ ಅವರ 30 ರನ್​ಗಳ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲೇ ಒಂದು ತಂಡ ಗಳಿಸಿದ ಎರಡನೇ ಅತಿ ದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಇದೇ ಎಸ್​ಆರ್​ಹೆಚ್ ತಂಡ 2024ರಲ್ಲಿ ಆರ್​​ಸಿಬಿ ವಿರುದ್ಧ 287 ರನ್ ಚಚ್ಚಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Sun, 23 March 25

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ