Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs RR Highlights, IPL 2025: ರಾಜಸ್ಥಾನ್ ವಿರುದ್ಧ 44 ರನ್​ಗಳಿಂದ ಗೆದ್ದ ಹೈದರಾಬಾದ್

ಪೃಥ್ವಿಶಂಕರ
|

Updated on:Mar 23, 2025 | 9:49 PM

Sunrisers Hyderabad vs Rajasthan Royals Highlights in Kannada: ಐಪಿಎಲ್ 2025 ರ ಎರಡನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡವು ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ 286 ರನ್ ಗಳಿಸಿದರೆ, ಇದಕ್ಕೆ ಪ್ರತಿಯಾಗಿ ರಾಜಸ್ಥಾನ ತಂಡ 242 ರನ್ ಗಳಿಸಲಷ್ಟೇ ಶಕ್ತವಾಯಿತು.

SRH vs RR Highlights, IPL 2025: ರಾಜಸ್ಥಾನ್ ವಿರುದ್ಧ 44 ರನ್​ಗಳಿಂದ ಗೆದ್ದ ಹೈದರಾಬಾದ್
Sunrisers Hyderabad

ಸನ್‌ರೈಸರ್ಸ್ ಹೈದರಾಬಾದ್ ತಂಡ 2025 ರ ಐಪಿಎಲ್​ನ ಗೆಲುವಿನೊಂದಿಗೆ ಆರಂಭಿಸಿದೆ. ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದ ಹೈದರಾಬಾದ್ 44 ರನ್​ಗಳ ಸುಲಭ ಜಯ ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಪರ ಇಶಾನ್ ಕಿಶನ್ ಕೇವಲ 47 ಎಸೆತಗಳಲ್ಲಿ 225 ಸ್ಟ್ರೈಕ್ ರೇಟ್‌ನಲ್ಲಿ 6 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳ ಸಹಿತ 107 ರನ್ ಗಳಿಸಿದರು. ಕಿಶನ್ ಅವರ ಈ ಬಿರುಗಾಳಿಯ ಇನ್ನಿಂಗ್ಸ್‌ನಿಂದಾಗಿ, ಹೈದರಾಬಾದ್ ತಂಡವು 287 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ ಕೂಡ ಗೆಲುವಿಗಾಗಿ ಹೋರಾಟ ನೀಡಿತ್ತಾದರೂ, ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್​ಗಳಲ್ಲಿ ರಾಜಸ್ಥಾನ್​ 242 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 23 Mar 2025 07:31 PM (IST)

    SRH vs RR: ಹೈದರಾಬಾದ್‌ಗೆ ಸುಲಭ ಗೆಲುವು

    ಹೊಸ ಸೀಸನ್​ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ಸುಲಭವಾಗಿ ಗೆದ್ದಿದೆ. ಹೈದರಾಬಾದ್ ತಂಡದ 286 ರನ್‌ಗಳಿಗೆ ಉತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 242 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ ಹೈದರಾಬಾದ್ ತಂಡವು ಪಂದ್ಯವನ್ನು 44 ರನ್‌ಗಳಿಂದ ಗೆದ್ದುಕೊಂಡಿತು.

  • 23 Mar 2025 07:23 PM (IST)

    SRH vs RR: 200 ರನ್ ಪೂರ್ಣ

    ರಾಜಸ್ಥಾನದ ಸೋಲು ಖಚಿತವಾಗಿರಬಹುದು, ಆದರೆ ತಂಡವು ಸೋಲಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಶುಭಂ ದುಬೆ-ಶಿಮ್ರಾನ್ ಹೆಟ್ಮೆಯರ್ ಜೋಡಿ 21 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200 ದಾಟಿಸಿದರು.

  • 23 Mar 2025 07:10 PM (IST)

    SRH vs RR: ಸ್ಯಾಮ್ಸನ್ ಮತ್ತು ಜುರೆಲ್ ಔಟ್

    ರಾಜಸ್ಥಾನ ತಂಡ ಸತತ ಓವರ್‌ಗಳಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕಳೆದುಕೊಂಡಿದೆ. 14ನೇ ಓವರ್ ನಲ್ಲಿ ಸಂಜು ಸ್ಯಾಮ್ಸನ್ (66) ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದರೆ, ಮುಂದಿನ ಓವರ್ ನಲ್ಲಿ ಧ್ರುವ್ ಜುರೆಲ್ (70) ಅವರನ್ನು ಆಡಮ್ ಜಂಪಾ ಔಟ್ ಮಾಡಿದರು.

  • 23 Mar 2025 06:58 PM (IST)

    SRH vs RR: ಜುರೈಲ್ ಅರ್ಧಶತಕ

    ಸಂಜು ಸ್ಯಾಮ್ಸನ್ ನಂತರ, ಧ್ರುವ್ ಜುರೆಲ್ ಕೂಡ ಅರ್ಧಶತಕ ಗಳಿಸಿದರು. ಜುರೈಲ್ ಕೇವಲ 28 ಎಸೆತಗಳಲ್ಲಿ ಈ ಅರ್ಧಶತಕ ಗಳಿಸಿದ್ದಾರೆ. ಜುರೈಲ್ ಸಿಕ್ಸರ್ ಮೂಲಕ ಈ ಅದ್ಭುತ ಸಾಧನೆ ಮಾಡಿದರು. ಸಿಮರ್‌ಜೀತ್ ಸಿಂಗ್ ಅವರ ಈ ಓವರ್‌ನಲ್ಲಿ ಅವರು ಸತತ 3 ಸಿಕ್ಸರ್‌ಗಳನ್ನು ಬಾರಿಸಿದರು.

  • 23 Mar 2025 06:51 PM (IST)

    SRH vs RR: ಸ್ಯಾಮ್ಸನ್ ಅರ್ಧಶತಕ

    ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸಂಜು ಸ್ಯಾಮ್ಸನ್ ಸ್ಫೋಟಕ ಅರ್ಧಶತಕ ಗಳಿಸಿದರು. ಸ್ಯಾಮ್ಸನ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಂಡದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.

  • 23 Mar 2025 06:35 PM (IST)

    SRH vs RR: ಸ್ಯಾಮ್ಸನ್-ಜುರಲ್ ಜೊತೆಯಾಟ

    ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಮತ್ತು ಇಬ್ಬರ ನಡುವೆ ಕೇವಲ 24 ಎಸೆತಗಳಲ್ಲಿ ಅರ್ಧಶತಕದ ಪಾಲುದಾರಿಕೆ ಇದ್ದು, ಇದು ರಾಜಸ್ಥಾನವನ್ನು 100 ರನ್‌ಗಳ ಗಡಿ ದಾಟಿಸಿದೆ.

  • 23 Mar 2025 06:19 PM (IST)

    SRH vs RR: ಪವರ್‌ಪ್ಲೇನಲ್ಲಿ 77 ರನ್‌

    ರಾಜಸ್ಥಾನ್ ರಾಯಲ್ಸ್ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಪವರ್ ಪ್ಲೇನಲ್ಲಿ 77 ರನ್‌ಗಳನ್ನು ಗಳಿಸಿದೆ. ಆರನೇ ಓವರ್‌ನಲ್ಲಿ ಬಂದ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಧ್ರುವ್ ಜುರೆಲ್ ಮತ್ತು ಸ್ಯಾಮ್ಸನ್ 20 ರನ್ ಗಳಿಸಿದರು.

  • 23 Mar 2025 06:18 PM (IST)

    SRH vs RR: ಮೂರನೇ ವಿಕೆಟ್

    ರಾಜಸ್ಥಾನ್ ರಾಯಲ್ಸ್ ಕೂಡ ಮೂರನೇ ವಿಕೆಟ್ ಕಳೆದುಕೊಂಡಿದ್ದು, ನಿತೀಶ್ ರಾಣಾ ಪೆವಿಲಿಯನ್‌ಗೆ ಮರಳಿದ್ದಾರೆ. ಐದನೇ ಓವರ್‌ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಈ ವಿಕೆಟ್ ಉರುಳಿಸಿದರು.

  • 23 Mar 2025 06:00 PM (IST)

    SRH vs RR: ಒಂದೇ ಓವರ್​ನಲ್ಲಿ 2 ವಿಕೆಟ್

    ಸಿಮರ್‌ಜೀತ್ ಸಿಂಗ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಡಬಲ್ ಏಟು ನೀಡಿದ್ದಾರೆ. ಅವರು ಮೊದಲು ಯಶಸ್ವಿ ಜೈಸ್ವಾಲ್ ಅವರನ್ನು 1 ರನ್ ವೈಯಕ್ತಿಕ ಸ್ಕೋರ್‌ಗೆ ಔಟ್ ಮಾಡಿದರು. ಅದಾದ ನಂತರ, ನಾಯಕ ರಿಯಾನ್ ಪರಾಗ್ ಕೂಡ 4 ರನ್ ಗಳಿಸಿ ನಿರ್ಗಮಿಸಿದರು.

  • 23 Mar 2025 05:54 PM (IST)

    SRH vs RR: ಸಂಜು ಉತ್ತಮ ಆರಂಭ

    ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಸ್ಯಾಮ್ಸನ್ ಮತ್ತು ಯಶಸ್ವಿ ಆರಂಭಿಕರಾಗಿ ಕಣಕ್ಕಿಳಿದು ಮೊದಲ ಓವರ್‌ನಲ್ಲಿ ಇಬ್ಬರೂ 16 ರನ್ ಗಳಿಸಿದರು. ಸ್ಯಾಮ್ಸನ್ ಸಿಕ್ಸರ್‌ನೊಂದಿಗೆ ತನ್ನ ಖಾತೆಯನ್ನು ತೆರೆದರು.

  • 23 Mar 2025 05:32 PM (IST)

    SRH vs RR: 287 ರನ್​ಗಳ ಗುರಿ

    ಇಶಾನ್ ಕಿಶನ್ ಅವರ ಶತಕದ ಬಲದಿಂದ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2025 ರ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್‌ಗೆ 286 ರನ್ ಗಳಿಸಿದೆ. ಈ ಮೂಲಕ ರಾಜಸ್ಥಾನ ತಂಡಕ್ಕೆ 287 ರನ್‌ಗಳ ಗುರಿಯನ್ನು ನೀಡಿದೆ.

  • 23 Mar 2025 05:25 PM (IST)

    SRH vs RR: ಇಶಾನ್ ಕಿಶನ್ ಶತಕ

    ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ರಾಜಸ್ಥಾನ ರಾಯಲ್ಸ್ ವಿರುದ್ಧ 45 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇದು ಹೈದರಾಬಾದ್ ಜೊತೆಗಿನ ಇಶಾನ್ ಅವರ ಮೊದಲ ಸೀಸನ್ ಆಗಿದ್ದು, ಮೊದಲ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದು ಐಪಿಎಲ್ 2025 ರ ಮೊದಲ ಶತಕವೂ ಆಗಿದೆ. ಕುತೂಹಲಕಾರಿ ವಿಷಯವೆಂದರೆ ಐಪಿಎಲ್ 18 ನೇ ಋತುವಿನ ಎರಡನೇ ಪಂದ್ಯದಲ್ಲಿ ಶತಕ ದಾಖಲಾಗಿದೆ. ಈ ಪಂದ್ಯದಲ್ಲಿ ಇಶಾನ್ ಸ್ಫೋಟಕ ಬ್ಯಾಟಿಂಗ್ ಮಾಡುವುದರಿಂದ ಹೈದರಾಬಾದ್ ತಂಡದ ಸ್ಕೋರ್ 270 ದಾಟಿದೆ.

  • 23 Mar 2025 05:23 PM (IST)

    SRH vs RR: ಆರ್ಚರ್ ದುಬಾರಿ ಸ್ಪೆಲ್

    12.50 ಕೋಟಿ ರೂ. ಮೌಲ್ಯದ ಬೌಲರ್ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಎಸೆದಿದ್ದಾರೆ. ಅವರು 4 ಓವರ್‌ಗಳಲ್ಲಿ 76 ರನ್‌ಗಳನ್ನು ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಈ ವಿಷಯದಲ್ಲಿ ಅವರು 4 ಓವರ್‌ಗಳಲ್ಲಿ 73 ರನ್ ನೀಡಿದ್ದ ಮೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.

  • 23 Mar 2025 05:23 PM (IST)

    SRH vs RR: ಶತಕದತ್ತ ಸಾಗುತ್ತಿರುವ ಇಶಾನ್ ಕಿಶನ್

    ಇಶಾನ್ ಕಿಶನ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಚೊಚ್ಚಲ ಐಪಿಎಲ್ ಶತಕ ಗಳಿಸುವ ನಿರೀಕ್ಷೆಯಿದೆ. ಸನ್‌ರೈಸರ್ಸ್ ತಂಡದ ಸ್ಕೋರ್ 250 ರನ್‌ಗಳ ಗಡಿ ದಾಟಿದೆ.

  • 23 Mar 2025 05:03 PM (IST)

    SRH vs RR: 200 ರನ್ ಪೂರ್ಣ

    ಟ್ರಾವಿಸ್ ಹೆಡ್ ಔಟ್ ಆದ ನಂತರ, ನಿತೀಶ್ ರೆಡ್ಡಿ ಜೊತೆಗೂಡಿ ಇಶಾನ್ ಕಿಶನ್ ಜವಾಬ್ದಾರಿ ವಹಿಸಿಕೊಂಡರು, ಹೈದರಾಬಾದ್ ತಂಡದ ಸ್ಕೋರ್ 14 ಓವರ್‌ಗಳಲ್ಲಿ 2 ವಿಕೆಟ್‌ಗೆ 200 ರನ್ ದಾಟಿದೆ. ಇಶಾನ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಶಾನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಮೂರನೇ ವಿಕೆಟ್‌ಗೆ ನಿತೀಶ್ ಜೊತೆ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದ್ದಾರೆ.

  • 23 Mar 2025 04:47 PM (IST)

    SRH vs RR: ಕಿಶನ್ 25 ಎಸೆತಗಳಲ್ಲಿ ಅರ್ಧಶತಕ

    ಐಪಿಎಲ್ 2025 ರಲ್ಲಿ ಹೊಸ ತಂಡದ ಪರ ಆಡುತ್ತಿರುವ ಇಶಾನ್ ಕಿಶನ್ ಮೊದಲ ಪಂದ್ಯದಲ್ಲೇ ಸಂಚಲನ ಸೃಷ್ಟಿಸಿದ್ದಾರೆ. ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಕೇವಲ 25 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಪೂರೈಸಿದರು.

  • 23 Mar 2025 04:28 PM (IST)

    SRH vs RR: ಹೆಡ್ ಔಟ್

    31 ಎಸೆತಗಳಲ್ಲಿ 67 ರನ್ ಗಳಿಸಿದ ಟ್ರಾವಿಸ್ ಹೆಡ್ ವಿಕೆಟ್ ಪಡೆದ ನಂತರ ರಾಜಸ್ಥಾನ್ ರಾಯಲ್ಸ್ ನಿಟ್ಟುಸಿರು ಬಿಟ್ಟಿದೆ. ಈ ಅವಧಿಯಲ್ಲಿ, ಹೆಡ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು, ಇದು ಈ ಸೀಸನ್​ನ ಅತ್ಯಂತ ವೇಗದ ಅರ್ಧಶತಕವಾಗಿತ್ತು.

  • 23 Mar 2025 04:07 PM (IST)

    SRH vs RR: ಪವರ್‌ಪ್ಲೇನಲ್ಲಿ 89 ರನ್‌

    ಪವರ್‌ಪ್ಲೇನಲ್ಲಿ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್‌ಗೆ 94 ರನ್ ಗಳಿಸಿದೆ. ಇಶಾನ್ ಕಿಶನ್ 9 ಎಸೆತಗಳಲ್ಲಿ 20 ರನ್. ಹೆಡ್ 18 ಎಸೆತಗಳಲ್ಲಿ 46 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಅಭಿಷೇಕ್ ಶರ್ಮಾ 24 ರನ್ ಗಳಿಸಿ ಔಟಾದರು.

  • 23 Mar 2025 03:53 PM (IST)

    SRH vs RR: ಅಭಿಷೇಕ್ ಔಟ್

    ಸನ್‌ರೈಸರ್ಸ್‌ನ ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 45 ರನ್‌ಗಳನ್ನು ಸೇರಿಸಿದರು. ಇದರಲ್ಲಿ ಅಭಿಷೇಕ್ ಶರ್ಮಾ 24 ರನ್ ಗಳ ಕೊಡುಗೆ ನೀಡಿದ್ದು, ಮಹಿಷ್ ಟೀಕ್ಷ್ಣಗೆ ಬಲಿಯಾದರು.

  • 23 Mar 2025 03:43 PM (IST)

    SRH vs RR: ಉತ್ತಮ ಆರಂಭ

    ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಆರಂಭ ಕಂಡಿದೆ. ಫಜಲ್ಹಕ್ ಫಾರೂಕಿ ಎಸೆದ ಮೊದಲ ಓವರ್‌ನಲ್ಲಿ ಅಭಿಷೇಕ್ ಮತ್ತು ಹೆಡ್ ಅವರ ಆರಂಭಿಕ ಜೋಡಿ ಸ್ಕೋರ್‌ಬೋರ್ಡ್‌ಗೆ 10 ರನ್‌ಗಳನ್ನು ಸೇರಿಸಿತು.

  • 23 Mar 2025 03:17 PM (IST)

    SRH vs RR: ಹೈದರಾಬಾದ್ ತಂಡ

    ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸಿಮರ್ಜಿತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.

  • 23 Mar 2025 03:16 PM (IST)

    SRH vs RR: ರಾಜಸ್ಥಾನ ತಂಡ

    ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೈರ್, ಶುಭಂ ದುಬೆ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.

  • 23 Mar 2025 03:02 PM (IST)

    SRH vs RR: ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲಿದೆ

Published On - Mar 23,2025 3:01 PM

Follow us
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?