IPL 2025 SRH: ಈ ಬಾರಿಯ ನಮ್ಮ ಟಾರ್ಗೆಟ್ 300 ರನ್ಸ್
IPL 2025 SRH vs RR: ಸನ್ರೈಸರ್ಸ್ ಹೈದರಾಬಾದ್ ತಂಡವು ಇಂದಿನಿಂದ (ಮಾ.23) ಐಪಿಎಲ್ ಸೀಸನ್-18 ಅಭಿಯಾನ ಆರಂಭಿಸಲಿದೆ. ಹೈದರಾಬಾದ್ನಲ್ಲಿ ಜರುಗಲಿರುವ ಮೊದಲ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.
Updated on: Mar 23, 2025 | 2:08 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಮೂರು 250 ಸ್ಕೋರ್ ಗಳಿಸಿರುವ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಹೊಸ ಗುರಿ 300 ರನ್ಗಳು. ಇದನ್ನು ಹೇಳಿದ್ದು ಮತ್ಯಾರೂ ಅಲ್ಲ, ಎಸ್ಆರ್ಹೆಚ್ ತಂಡದ ಸ್ಪೋಟಕ ಆರಂಭಿಕ ಟ್ರಾವಿಸ್ ಹೆಡ್ ಹಾಗೂ ಮಧ್ಯಮದ ಕ್ರಮಾಂಕದ ಸಿಡಿಲಮರಿ ಹೆನ್ರಿಕ್ ಕ್ಲಾಸೆನ್.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು 287 ರನ್ ಬಾರಿಸಿ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿತ್ತು. ಇದೀಗ ಎಸ್ಆರ್ಹೆಚ್ ತಂಡವು 300 ರನ್ಗಳ ಗುರಿಯೊಂದಿಗೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಮೂಲಕ ಈ ಬಾರಿ ಮುನ್ನೂರು ರನ್‌ಗಳನ್ನು ಕಲೆಹಾಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆರ್ಸಿಬಿ ವಿರುದ್ಧ 287, ಮುಂಬೈ ಇಂಡಿಯನ್ಸ್ ವಿರುದ್ಧ 277 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಬಾರಿಸಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಗುರಿ 300 ರನ್. ಇದು ಅಸಾಧ್ಯವೇನಲ್ಲ. ಎಲ್ಲರೂ ಮುನ್ನೂರು ರನ್ಗಳ ಟಾರ್ಗೆಟ್ ವೀಕ್ಷಿಸಲು ಬಯಸುತ್ತಾರೆ. ಹೀಗಾಗಿ ನಾವು ಅದನ್ನು ಸಾಧಿಸುವ ವಿಶ್ವಾಸವಿದೆ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.

ಇನ್ನು ನಮ್ಮ ಬ್ಯಾಟಿಂಗ್ ಲೈನಪ್ ತುಂಬಾ ಬಲಿಷ್ಠವಾಗಿದ್ದು, ಖಂಡಿತವಾಗಿಯೂ 300 ರನ್‌ಗಳನ್ನು ತಲುಪಲು ಉತ್ತಮ ಅವಕಾಶವಿದೆ. ಅದರಂತೆ ಈ ಬಾರಿ ನಾವು ಮುನ್ನೂರಕ್ಕೂ ಅಧಿಕ ರನ್ ಕಲೆಹಾಕುವ ವಿಶ್ವಾಸವಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಸಹ ಹೇಳಿದ್ದಾರೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಪಡೆಯಿಂದ 300+ ರನ್ಗಳು ಮೂಡಿಬಂದರೂ ಅಚ್ಚರಿಪಡಬೇಕಿಲ್ಲ.

SRH ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಇಶಾನ್ ಕಿಶನ್, ರಾಹುಲ್ ಚಹರ್, ಆ್ಯಡಂ ಝಂಪಾ, ಅಥರ್ವ ಟೈಡೆ, ಅಭಿನವ್ ಮನೋಹರ್, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಅನಿಕೇತ್ ವರ್ಮಾ, ಇಶಾನ್ ಮಲಿಂಗ.



















