- Kannada News Photo gallery Cricket photos IPL 2025: Jofra Archer concedes the most expensive spell in IPL History
Jofra Archer: 4 ಸಿಕ್ಸ್, 11 ಫೋರ್: ಕೇವಲ 24 ಎಸೆತಗಳಲ್ಲಿ 76 ರನ್ಗಳು
IPL 2025 SRH vs RR: ಐಪಿಎಲ್ ಇತಿಹಾಸದ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಕೂಡ ಸನ್ರೈಸರ್ಸ್ ಹೈದರಾಬಾದ್ ಪಾಲಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಹೆಚ್ 20 ಓವರ್ಗಳಲ್ಲಿ 286 ರನ್ ಕಲೆಹಾಕಿದೆ. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 242 ರನ್ಗಳಿಸಿ 44 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Updated on:Mar 24, 2025 | 10:24 AM

IPL 2025: 24 ಎಸೆತಗಳಲ್ಲಿ 76 ರನ್. ಇದು ಹೊಡೆದಿದ್ದಲ್ಲ. ಹೊಡೆಸಿಕೊಂಡಿದ್ದು. ಹೌದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಸ್ಪೆಲ್ ಮಾಡಿದ ಅತ್ಯಂತ ಹೀನಾಯ ದಾಖಲೆಯೊಂದು ಜೋಫ್ರಾ ಆರ್ಚರ್ ಪಾಲಾಗಿದೆ. ಅದು ಕೂಡ 4 ಓವರ್ಗಳಲ್ಲಿ ಬರೋಬ್ಬರಿ 76 ರನ್ ನೀಡುವ ಮೂಲಕ...!

ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಆರ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು.

ರಾಜಸ್ಥಾನ್ ರಾಯಲ್ಸ್ ಪರ ಪ್ರಮುಖ ವೇಗಿಯಾಗಿ ಕಣಕ್ಕಿಳಿದ ಜೋಫ್ರಾ ಆರ್ಚರ್ ಅವರನ್ನು ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಚೆಂಡಾಡಿದ್ದಾರೆ. ಪರಿಣಾಮ 4 ಓವರ್ಗಳಲ್ಲಿ ಆರ್ಚರ್ 4 ಸಿಕ್ಸ್ ಹಾಗೂ 11 ಫೋರ್ಗಳನ್ನು ನೀಡಿದ್ದಾರೆ. ಈ ಮೂಲಕ ಒಟ್ಟು 76 ರನ್ ಬಿಟ್ಟುಕೊಡುವ ಮೂಲಕ ಅನಗತ್ಯ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಮೋಹಿತ್ ಶರ್ಮಾ ಹೆಸರಿನಲ್ಲಿತ್ತು. ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಮೋಹಿತ್ 4 ಓವರ್ಗಳಲ್ಲಿ 73 ರನ್ ನೀಡಿ ಐಪಿಎಲ್ ಇತಿಹಾಸದಲ್ಲೇ ದುಬಾರಿ ಸ್ಪೆಲ್ ಎಸೆದ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಜೋಫ್ರಾ ಆರ್ಚರ್ ತಮ್ಮದಾಗಿಸಿಕೊಂಡಿದ್ದಾರೆ. ಅದು ಸಹ 4 ಓವರ್ಗಳಲ್ಲಿ 76 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯದೇ. ಇತ್ತ ಜೋಫ್ರಾ ಆರ್ಚರ್ನಂತಹ ಅನುಭವಿ ಬೌಲರ್ನನ್ನು ಬೆಂಡೆತ್ತುವ ಮೂಲಕ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 286 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದು ವಿಶೇಷ.
Published On - 10:23 am, Mon, 24 March 25



















