- Kannada News Photo gallery Cricket photos IPL 2025: Stellar Performances by Krunal Pandya, Ishan Kishan and Noor Ahmad
IPL 2025: ತಂಡ ಬದಲಿಸಿದ ಕೂಡಲೇ ಬದಲಾಯ್ತು ಈ ಮೂವರು ಕ್ರಿಕೆಟಿಗರ ಲಕ್
IPL 2025: ಐಪಿಎಲ್ 2025 ರ ಆರಂಭಿಕ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ, ಇಶಾನ್ ಕಿಶನ್ ಮತ್ತು ನೂರ್ ಅಹ್ಮದ್ ಅವರ ಅದ್ಭುತ ಪ್ರದರ್ಶನ ಗಮನ ಸೆಳೆದಿದೆ. ಹೊಸ ತಂಡಗಳಿಗೆ ಸೇರ್ಪಡೆಯಾದ ಈ ಮೂವರು ಆಟಗಾರರು ತಮ್ಮ ಅದ್ಭುತ ಕೌಶಲ್ಯದಿಂದ ಪಂದ್ಯ ವಿಜೇತ ಪ್ರದರ್ಶನ ನೀಡಿದ್ದಾರೆ. ಕೃನಾಲ್ ಅವರ ಬೌಲಿಂಗ್, ಇಶಾನ್ ಅವರ ಶತಕ ಮತ್ತು ನೂರ್ ಅವರ ವಿಕೆಟ್ ಪಡೆಯುವ ಸಾಮರ್ಥ್ಯ ಈ ಸೀಸನ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬುದು ಸ್ಪಷ್ಟ.
Updated on: Mar 24, 2025 | 6:14 PM

ಈ ಬಾರಿಯ ಐಪಿಎಲ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಅದರಲ್ಲಿ ಪ್ರಮುಖವಾದದ್ದು, ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರರು ಕೂಡ ಬದಲಾಗಿದ್ದಾರೆ. ವರ್ಷಗಳವರೆಗೆ ಒಂದೇ ತಂಡದಲ್ಲಿ ಆಡಿದ್ದ ಆಟಗಾರರು ಈ ಬಾರಿ ಹೊಸ ತಂಡದ ಪರ ಆಡುತ್ತಿದ್ದಾರೆ. ಅಂತಹ ಆಟಗಾರರಲ್ಲಿ ಪ್ರಮುಖವಾಗಿ ಈ ಮೂವರು ಆಟಗಾರರ ತಂಡದ ಬದಲಾದಂತೆ ಅವರ ಲಕ್ ಕೂಡ ಬದಲಾಗಿದೆ.

ಪ್ರಸ್ತುತ ಐಪಿಎಲ್ 2025 ರಲ್ಲಿ ಆಡಿದ ಮೊದಲ 3 ಪಂದ್ಯಗಳಲ್ಲಿ ಮೂವರು ಆಟಗಾರರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮೂವರು ಆಟಗಾರರು ಈ ಸೀಸನ್‌ನಲ್ಲಿ ಹೊಸ ತಂಡದ ಪರ ಆಡುತ್ತಿದ್ದು, ತಾವು ಆಡಿದ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆ ಮೂವರು ಆಟಗಾರರಲ್ಲಿ ಕೃನಾಲ್ ಪಾಂಡ್ಯ, ಇಶಾನ್ ಕಿಶನ್ ಮತ್ತು ನೂರ್ ಅಹ್ಮದ್ ಸೇರಿದ್ದಾರೆ.

ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದರಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನ ನೀಡಿದರು. ಅವರು 4 ಓವರ್‌ಗಳಲ್ಲಿ 29 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಕೃನಾಲ್ ಅವರ ಈ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಕೃನಾಲ್ ಕಳೆದ ಆವೃತ್ತಿಯಲ್ಲಿ ಲಕ್ನೋ ಪರ ಆಡಿದ್ದರು. ಇದು ಆರ್‌ಸಿಬಿ ಪರ ಅವರ ಮೊದಲ ಆವೃತ್ತಿಯಾಗಿದೆ.

ಐಪಿಎಲ್ 2025 ರ ಎರಡನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಹೈದರಾಬಾದ್ 44 ರನ್‌ಗಳಿಂದ ದೊಡ್ಡ ಗೆಲುವು ಸಾಧಿಸಿತು. ಸನ್‌ರೈಸರ್ಸ್‌ನ ಈ ದೊಡ್ಡ ಗೆಲುವಿನ ನಾಯಕ ಇಶಾನ್ ಕಿಶನ್. ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಐಪಿಎಲ್‌ನಲ್ಲಿ ಇಶಾನ್ ಕಿಶನ್ ಅವರ ಮೊದಲ ಶತಕವೂ ಆಗಿದೆ. ಕಿಶನ್ ಕಳೆದ ಸೀಸನ್‌ನಲ್ಲಿ ಮುಂಬೈ ಪರ ಆಡಿದ್ದರು. ಈ ಬಾರಿ ಹೈದರಾಬಾದ್ ಪರ ಆಡುತ್ತಿದ್ದಾರೆ.

ಐಪಿಎಲ್ 2025 ರ ಮೂರನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಿಎಸ್‌ಕೆ, ಮುಂಬೈ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಹಳದಿ ಜೆರ್ಸಿ ತಂಡದ ಈ ಗೆಲುವಿನ ನಾಯಕ ಹಿರೋ ನೂರ್ ಅಹ್ಮದ್. ಅವರು ತಮ್ಮ 4 ಓವರ್‌ಗಳಲ್ಲಿ ಕೇವಲ 18 ರನ್‌ಗಳನ್ನು ನೀಡಿ ಮುಂಬೈ ಪರ 4 ವಿಕೆಟ್‌ಗಳನ್ನು ಕಬಳಿಸಿದರು. ನೂರ್ ಅಹ್ಮದ್ ಕಳೆದ ಸೀಸನ್‌ನಲ್ಲಿ ಗುಜರಾತ್ ಪರ ಆಡಿದ್ದರು.
























