IPL 2025: ಸ್ಫೋಟಕ ಶತಕ; ಎಸ್ಆರ್ಹೆಚ್ ಸೇರಿದೊಡನೆ ಸುನಾಮಿ ಎಬ್ಬಿಸಿದ ಕಿಶನ್..!
Ishan Kishan's IPL 2025 Century: ಐಪಿಎಲ್ 2025 ರಲ್ಲಿ ಹೊಸ ತಂಡ ಸೇರಿದ ಇಶಾನ್ ಕಿಶನ್ ತಮ್ಮ ಮೊದಲ ಪಂದ್ಯದಲ್ಲೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಶತಕ ಸಿಡಿಸಿದ್ದಾರೆ. 45 ಎಸೆತಗಳಲ್ಲಿ ಶತಕ ಗಳಿಸಿ ತಮ್ಮ ಪ್ರತಿಭೆಯನ್ನು ಮೆರೆದ ಇಶಾನ್, 47 ಎಸೆತಗಳಲ್ಲಿ 106 ರನ್ ಗಳಿಸಿದರು. ಒಂದು ವರ್ಷದಿಂದ ಟೀಂ ಇಂಡಿಯಾದಿಂದ ದೂರ ಉಳಿದಿರುವ ಇಶಾನ್‌ನ ಈ ಪ್ರದರ್ಶನ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಇದು ಅವರ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಕೂಡ ಆಗಿದೆ.
ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಐಪಿಎಲ್ 2025 ರಲ್ಲಿ ಹೊಸ ತಂಡ ಸೇರಿದ ತಕ್ಷಣ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಿಂದ ದೂರವಿದ್ದ ಇಶಾನ್ ಕಿಶನ್, ಐಪಿಎಲ್ 2025 ರ ತಮ್ಮ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇಶಾನ್ ತಾನು ಎಂತಹ ಪ್ರತಿಭೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಇಶಾನ್ 19 ನೇ ಓವರ್‌ನಲ್ಲಿ 2 ರನ್‌ಗಳನ್ನು ತೆಗೆದುಕೊಳ್ಳುವ ಮೂಲಕ ಐಪಿಎಲ್ 2025 ರ ಮೊದಲ ಹಾಗೂ ಅವರ ಐಪಿಎಲ್ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಕಿಶನ್ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 106 ರನ್ ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ