Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ

RBI Clarification: ಕೆಲ ನೋಟುಗಳ ಸೀರಿಯಲ್ ನಂಬರ್​ನಲ್ಲಿ ಸ್ಟಾರ್ ಚಿಹ್ನೆ ಇರುವುದು ಕಂಡು ಬಂದು ಜನರಿಗೆ ಅನುಮಾನ ಹುಟ್ಟಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಆರ್​ಬಿಐ, * ಚಿಹ್ನೆ ಇರುವ ನೋಟುಗಳು ಅಮಾನ್ಯವಲ್ಲ ಎಂದು ಹೇಳಿದೆ.

Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ
ಸ್ಟಾರ್ ಗುರುತು (*) ಇರುವ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2023 | 6:54 PM

ನವದೆಹಲಿ, ಜುಲೈ 27: ನಾಣ್ಯ, ನೋಟುಗಳ (Coins and Bank Notes) ವಿಚಾರದಲ್ಲಿ ಜನರಿಗೆ ಒಂದು ರೀತಿಯಲ್ಲಿ ಸದಾ ಅನುಮಾನಗಳೇ ತುಂಬಿರುತ್ತವೆ. 10 ರುಪಾಯಿ ನಾಣ್ಯ, 5 ರುಪಾಯಿ ನೋಟು ಇತ್ಯಾದಿಯನ್ನು ಜನರೂ ಮುಟ್ಟೋದಿಲ್ಲ, ಅಂಗಡಿಯವರೂ ಸ್ವೀಕರಿಸಲ್ಲ. ಸೋಷಿಯಲ್ ಮೀಡಿಯಾ, ವಾಟ್ಸಾಪ್ ಇತ್ಯಾದಿ ಕಡೆ, ಹಾಗೆಯೇ ಕೆಲವೊಮ್ಮೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಂದ ಪ್ರಸಾರವಾಗುವ ತಪ್ಪು ಮಾಹಿತಿ ಇದಕ್ಕೆ ಕಾರಣವಾಗಿರುತ್ತದೆ. ಸ್ಟಾರ್ (*) ಚಿಹ್ನೆ ಇರುವ ಕರೆನ್ಸಿ ನೋಟುಗಳ (Star Notes) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆಯಾಗುತ್ತದೆ.

ನೋಟಿನ ಸೀರಿಯಲ್ ನಂಬರ್​ನಲ್ಲಿ ಸ್ಟಾರ್ ಗುರುತು (*) ಇರುವ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿವೆ. ಈ ನೋಟುಗಳನ್ನು ಅಮಾನ್ಯವಾಗಿವೆ ಎಂದು ಕೆಲ ಗುಂಪುಗಳು ವಾದಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು ಸ್ಟಾರ್ (*) ಚಿಹ್ನೆ ಇರುವ ನೋಟು ಸಂಪೂರ್ಣ ಸಿಂಧುವಾಗಿದ್ದು ಯಾವುದೇ ನೋಟಿನಂತೆ ಚಲಾವಣೆ ಮಾಡಬಹುದು ಎಂದು ಹೇಳಿದೆ.

ನೋಟುಗಳಲ್ಲಿ ಸ್ಟಾರ್ ಚಿಹ್ನೆ ಎಲ್ಲಿರುತ್ತದೆ?

ಯಾವುದೇ ನೋಟಿನಲ್ಲೂ ನೀವು ಸೀರಿಯಲ್ ನಂಬರ್ ಅನ್ನು ನೋಡಬಹುದು. ಈ ನಂಬರ್​ನಲ್ಲಿ ಮೊದಲಿಗೆ 3 ಅಂಕಿಗಳ ಆಲ್ಫಾನ್ಯೂಮರಿಕ್ ಸಂಖ್ಯೆಯ ಪ್ರಿಫಿಕ್ಸ್ ಇರುತ್ತದೆ. ಅದಾದ ಬಳಿಕ ಸೀರಿಯಲ್ ನಂಬರ್ ಇರುತ್ತದೆ. ಕೆಲ ನೋಟುಗಳಲ್ಲಿ ಪ್ರಿಫಿಕ್ಸ್ ಮತ್ತು ಸೀರಿಯಲ್ ನಂಬರ್ ಮಧ್ಯೆ * ಚಿಹ್ನೆ ದಾಖಲಾಗಿರುತ್ತದೆ.

ಇದನ್ನೂ ಓದಿ: Bank Holidays In August: ಬ್ಯಾಂಕುಗಳಿಗೆ ಆಗಸ್ಟ್ ತಿಂಗಳಲ್ಲಿ ರಜಾ ದಿನಗಳೆಷ್ಟು? ಒಟ್ಟು 14, ಕರ್ನಾಟಕದಲ್ಲಿ 7; ಇಲ್ಲಿದೆ ಪಟ್ಟಿ

ನೋಟುಗಳಲ್ಲಿ ಸ್ಟಾರ್ ಚಿಹ್ನೆ ಯಾಕೆ ಹಾಕಲಾಗಿರುತ್ತದೆ?

ಆರ್​ಬಿಐ ಹೇಳಿರುವ ಪ್ರಕಾರ, ನೋಟುಗಳನ್ನು ಮುದ್ರಿಸುವಾಗ ಕೆಲವು ದೋಷದಿಂದ ಕೂಡಿರಬಹುದು. ಸೀರಿಯಲ್ ನಂಬರ್ ಪ್ರಕಾರ ಬಂಡಲ್​ಗಳಲ್ಲಿ ನೋಟುಗಳಿರುತ್ತವೆ. ದೋಷಯುಕ್ತ ನೋಟುಗಳಿದ್ದಲ್ಲಿ ಅದಕ್ಕೆ ಬದಲಿಯಾಗಿ ಬೇರೆ ನೋಟು ಮುದ್ರಿಸಿ ಬಂಡಲ್​ಗೆ ಸೇರಿಸಲಾಗುತ್ತದೆ. ಈ ಬದಲೀ ನೋಟುಗಳ ಸೀರಿಯಲ್ ನಂಬರ್ ಮಧ್ಯೆ * ಗುರುತನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್