Bank Holidays: ಮಾರ್ಚ್ ತಿಂಗಳು ಬ್ಯಾಂಕುಗಳಿಗೆ 12 ದಿನ ರಜೆ; ಯಾವ್ಯಾವ ದಿನ, ಇಲ್ಲಿದೆ ಪಟ್ಟಿ

| Updated By: Digi Tech Desk

Updated on: Feb 16, 2023 | 6:05 PM

March 2023, Bank Holidays List: ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳು 4 ಭಾನುವಾರ, 2 ಶನಿವಾರ ಸೇರಿ ಒಟ್ಟು 12 ದಿನಗಳು ಬಾಗಿಲು ಹಾಕಿರುತ್ತವೆ. ಯುಗಾದಿ, ಹೋಳಿ, ರಾಮನವಮಿ ಹಬ್ಬಗಳೂ ಮಾರ್ಚ್ ತಿಂಗಳಲ್ಲಿವೆ.

Bank Holidays: ಮಾರ್ಚ್ ತಿಂಗಳು ಬ್ಯಾಂಕುಗಳಿಗೆ 12 ದಿನ ರಜೆ; ಯಾವ್ಯಾವ ದಿನ, ಇಲ್ಲಿದೆ ಪಟ್ಟಿ
ಆರ್​ಬಿಐ
Follow us on

ಬೆಂಗಳೂರು: ಈ ಫೆಬ್ರುವರಿ 10 ದಿನಗಳಷ್ಟು ರಜೆ ಇದ್ದ ಬ್ಯಾಂಕುಗಳಿಗೆ ಮುಂದಿನ ತಿಂಗಳು, ಮಾರ್ಚ್​ನಲ್ಲಿ (March 2023) 12 ದಿನಗಳ ರಜೆ ಇದೆ. ಇದರಲ್ಲಿ ಭಾನುವಾರದ ರಜೆಗಳು ಮತ್ತು 2ನೇ ಮತ್ತು 4ನೇ ಶನಿವಾರದ ರಜೆಗಳೂ (2nd and 4th Saturday) ಒಳಗೊಂಡಿವೆ. ಈ ನಿಯಮಿತ ರಜೆಗಳ ಜೊತೆಗೆ ಸಾರ್ವತ್ರಿಕ ರಜಾ ದಿನದಂದು ಬ್ಯಾಂಕುಗಳು ಮುಚ್ಚಿರುತ್ತದೆ. ಪ್ರಾದೇಶಿಕ ರಜೆಗಳು ಆಯಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ. ಈ ಪ್ರಾದೇಶಿಕ ರಜೆಗಳನ್ನು ಆರ್​ಬಿಐ ಬದಲು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಮಾರ್ಚ್ ತಿಂಗಳಲ್ಲಿ ಪ್ರಾದೇಶಿಕ ರಜೆಗಳು ಹಲವಿವೆ. ಕರ್ನಾಟಕದಲ್ಲಿ ಯುಗಾದಿ, ಶ್ರೀರಾಮನವಮಿ ಹಬ್ಬಕ್ಕೆ ರಜೆ ಇದೆ. ಹಾಗೆಯೇ ಬಿಹಾರ, ಮಣಿಪುರಕ್ಕೆ ಅನ್ವಯವಾಗುವ ಹಬ್ಬಗಳೂ ಇವೆ.

ಮಾರ್ಚ್ ತಿಂಗಳು ಬ್ಯಾಂಕುಗಳಿಗೆ ರಜಾ ದಿನಗಳು:

ಮಾರ್ಚ್ 3, ಶುಕ್ರವಾರ: ಚಾಪಚರ್ ಕುಟ್ (ಮಣಿಪುರದಲ್ಲಿನ ಬ್ಯಾಂಕುಗಳಿಗೆ ರಜೆ)

ಮಾರ್ಚ್ 5, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 7, ಮಂಗಳವಾರ: ಹೋಳಿ ಹಬ್ಬ (ಹಲವು ರಾಜ್ಯಗಳಿಗೆ ಅನ್ವಯ)

ಮಾರ್ಚ್ 8, ಬುಧವಾರ: ಹೋಳಿ ಎರಡನೇ ದಿನ (ಕೆಲ ರಾಜ್ಯಗಳಲ್ಲಿ)

ಮಾರ್ಚ್ 9, ಗುರುವಾರ: ಹೋಳಿ ಹಬ್ಬ (ಬಿಹಾರ ರಾಜ್ಯದಲ್ಲಿ)

ಮಾರ್ಚ್ 11, ಶನಿವಾರ: ತಿಂಗಳ 2ನೇ ಶನಿವಾರ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 12, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 19, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 22, ಬುಧವಾರ: ಯುಗಾದಿ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ)

ಮಾರ್ಚ್ 25, ಶನಿವಾರ: 4ನೇ ಶನಿವಾರದ ರಜೆ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 26, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

ಮಾರ್ಚ್ 30, ಗುರುವಾರ: ಶ್ರೀರಾಮನವಿ ಹಬ್ಬ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)

ಇದನ್ನೂ ಓದಿ: Karnataka Budget: ಗೃಹಿಣಿಯರಿಗೆ ಗೌರವಧನ; ರೈತರಿಗೆ ಶೂನ್ಯಬಡ್ಡಿಗೆ ಹೆಚ್ಚು ಸಾಲ: ಬೊಮ್ಮಾಯಿ ಬಜೆಟ್​ನಲ್ಲಿ ಏನೆಲ್ಲಾ ಘೋಷಣೆಯಾಗಬಹುದು?

ಕರ್ನಾಟಕದಲ್ಲಿ ನಾಲ್ಕು ಭಾನುವಾರ, ಎರಡು ಶನಿವಾರ ಮತ್ತು ಎರಡು ಹಬ್ಬ ಸೇರಿ ಒಟ್ಟು 8 ದಿನಗಳ ಕಾಲ ಬ್ಯಾಂಕುಗಳು ಮಾರ್ಚ್ ತಿಂಗಳಲ್ಲಿ ಬಂದ್ ಆಗಿರುತ್ತವೆ. ಇದಲ್ಲದೇ ಬ್ಯಾಂಕ್ ನೌಕರರ ಮುಷ್ಕರದಂತಹ ಅನಿರೀಕ್ಷಿತವಾಗಿ ಒದಗಿಬರುವ ಬೆಳವಣಿಗೆಯೂ ಬ್ಯಾಂಕ್ ರಜೆಗೆ ಕಾರಣವಾಗಬಹುದು.

ಬ್ಯಾಂಕುಗಳು ಮುಚ್ಚಿದ್ದರೂ ಆನ್​ಲೈನ್ ಬ್ಯಾಂಕಿಂಗ್ ಸದಾ ಲಭ್ಯ ಇರುತ್ತದೆ. ಬಹುತೇಕ ಎಟಿಎಂಗಳು 24 ಗಂಟೆ ಕಾರ್ಯನಿರ್ವಹಿಸುತ್ತಿರುತ್ತವೆ. ಬ್ಯಾಂಕ್ ಕಚೇರಿಗೆ ಹೋಗಿಯೇ ಮಾಡಬೇಕಾದ ಕೆಲಸಗಳಿಗೆ ಮಾತ್ರ ತೊಂದರೆ ಆಗುತ್ತದೆ. ಅಂಥವರಿಗೆ ಈ ಬ್ಯಾಂಕ್ ರಜಾದಿನದ ಪಟ್ಟಿ ಅನುಕೂಲವಾಗುತ್ತದೆ.

ಇನ್ನಷ್ಟು ವ್ಯವಹಾರ ಮತ್ತು ಬ್ಯಾಂಕಿಂಗ್ ಸುದ್ದಿಗಳಿಗೆ ಈ ಲಿಂಕ್ ಒತ್ತಿರಿ

Published On - 5:26 pm, Thu, 16 February 23