Air India: 850 ವಿಮಾನಗಳ ಖರೀದಿಗೆ ಅವಕಾಶ ಪಡೆದ ಏರ್ ಇಂಡಿಯಾ; ಇದು ಜಾಗತಿಕ ದಾಖಲೆ

Air India Ordered Planes Are 840: ಬೋಯಿಂಗ್ ಮತ್ತು ಏರ್​ಬಸ್​ನಿಂದ ಏರ್ ಇಂಡಿಯಾ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮತ್ತು 370 ಹೆಚ್ಚುವರಿ ವಿಮಾನಗಳ ಖರೀದಿಗೆ ಅವಕಾಶ ಪಡೆದಿದೆ. ಇದು ವಿಶ್ವದಾಖಲೆ ಎನಿಸಿದೆ.

Air India: 850 ವಿಮಾನಗಳ ಖರೀದಿಗೆ ಅವಕಾಶ ಪಡೆದ ಏರ್ ಇಂಡಿಯಾ; ಇದು ಜಾಗತಿಕ ದಾಖಲೆ
ಏರ್ ಇಂಡಿಯಾ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 16, 2023 | 4:06 PM

ನವದೆಹಲಿ: ಜಾಗತಿಕ ವೈಮಾನಿಕ ಇತಿಹಾಸದಲ್ಲೇ (Global Aviation History) ಅತಿದೊಡ್ಡ ವಿಮಾನ ಖರೀದಿ ಒಪ್ಪಂದಗಳಿಗೆ ಏರ್ ಇಂಡಿಯಾ (Air India) ನಿನ್ನೆ ಸಹಿಹಾಕಿತ್ತು. ಅಮೆರಿಕದ ಬೋಯಿಂಗ್​ನಿಂದ (Boeing Aircraft) 220 ಮತ್ತು ಫ್ರಾನ್ಸ್​ನ ಏರ್​ಬಸ್​ನಿಂದ (Airbus of France) 250 ಸೇರಿ ಒಟ್ಟು 470 ವಿಮಾನಗಳನ್ನು ಟಾಟಾ ಒಡೆತನದ ಸಂಸ್ಥೆ ಖರೀದಿ ಮಾಡುತ್ತಿದೆ. ಇದು ಹೊಸ ದಾಖಲೆ ಎನಿಸಿದೆ. 2011ರಲ್ಲಿ ಅಮೆರಿಕನ್ ಏರ್​ಲೈನ್ಸ್ ಸಂಸ್ಥೆ 460 ವಿಮಾನಗಳನ್ನು ಖರೀದಿಸಿತ್ತು. 2019ರಲ್ಲಿ ಇಂಡಿಗೋ ಏರ್​ಲೈನ್ಸ್ 300 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ಇದೂವರೆಗಿನ ಭಾರತೀಯ ದಾಖಲೆಯಾಗಿತ್ತು. ಈಗ ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಸಂಸ್ಥೆ ಭಾರತೀಯ ದಾಖಲೆ ಮಾತ್ರವಲ್ಲ ವಿಶ್ವದಾಖಲೆಯನ್ನೂ ಅಳಿಸಿಹಾಕಿದೆ.

ಗಮನಾರ್ಹ ಎಂದರೆ, ಬೋಯಿಂಗ್ ಮತ್ತು ಏರ್​ಬಸ್​ನಿಂದ ಏರ್ ಇಂಡಿಯಾ 470 ವಿಮಾನಗಳ ಖರೀದಿಸಲು ಆರ್ಡರ್ ಕೊಟ್ಟಿದೆ. ಆದರೆ, ಇವುಗಳಿಂದ ಇದೇ ದರಗಳಲ್ಲಿ ಇನ್ನೂ ಹೆಚ್ಚು 370 ವಿಮಾನಗಳನ್ನು ಖರೀದಿಸುವ ಅವಕಾಶ ಹೊಂದಿದೆ. ಮುಂದಿನ ಒಂದು ದಶಕದಲ್ಲಿ ಬೋಯಿಂಗ್ ಮತ್ತು ಏರ್​ಬಸ್ ಸಂಸ್ಥೆಗಳು ಇವತ್ತಿನ ದರದಲ್ಲಿ ಏರ್ ಇಂಡಿಯಾಗೆ ತಮ್ಮ ವಿಮಾನಗಳನ್ನು ಮಾರಲು ಒಪ್ಪಿಕೊಂಡಿವೆ. ಅದೂ ಏರ್ ಇಂಡಿಯಾ ಇಚ್ಛಿಸಿದಲ್ಲಿ ಮಾತ್ರ. ಒಟ್ಟೂ 840 ವಿಮಾನಗಳನ್ನು ಏರ್ ಇಂಡಿಯಾ ಖರೀದಿಸಬಹುದು.

ಇದನ್ನೂ ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

ಭಾರತಕ್ಕೆ ಮುಂದಿನ ವರ್ಷಗಳಲ್ಲಿ 2000ದಷ್ಟು ಹೊಸ ವಿಮಾನಗಳು ಅಗತ್ಯ ಇವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮಾಡಿಕೊಂಡಿರುವ ಈ ಒಪ್ಪಂದವನ್ನು ಬಹಳಷ್ಟು ಉದ್ಯಮಿಗಳು ಸ್ವಾಗತಿಸಿದ್ದಾರೆ.

ಏರ್ ಇಂಡಿಯಾ ಸಂಸ್ಥೆ ಸದ್ಯ 140 ವಿಮಾನಗಳನ್ನು ಹೊಂದಿದೆ. ಅದರ ದೇಶೀಯ ಹಾರಾಟ ಸೇವೆಗೆ ಹೆಚ್ಚಾಗಿ ಏರ್​ಬಸ್ ವಿಮಾನಗಳನ್ನು ಬಳಸಲಾಗುತ್ತಿದೆ. ಅಂತಾರಾಷ್ಟ್ರೀಯ ಸೇವೆಗೆ ಬೋಯಿಂಗ್ ವಿಮಾನಗಳಿವೆ. ಅದರ ಅನೇಕ ವಿಮಾನಗಳು ಹಳೆಯದಾಗಿದ್ದು, ಅವುಗಳ ಸೇವೆ ಸ್ಥಗಿತಗೊಳಿಸುವ ಕಾಲ ಸಮೀಪಿಸಿದೆ. ಅದಕ್ಕಾಗಿಯೇ ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸಲು ಮುಂದಾಗಿದೆ.

ಇದನ್ನೂ ಓದಿ: BBC: ಬಿಬಿಸಿ ಕಚೇರಿಯಲ್ಲಿ ಐಟಿ ಸರ್ವೆಯ ಮರ್ಮವೇನು? ಟ್ರಾನ್ಸ್​ಫರ್ ಪ್ರೈಸಿಂಗ್​ನಿಂದ ಜಾಗತಿಕವಾಗಿ ಆಗುವ ತೆರಿಗೆನಷ್ಟ ಎಷ್ಟು?

ಏರ್ ಇಂಡಿಯಾ ಒಪ್ಪಂದ ಇಷ್ಟಕ್ಕೆ ಸೀಮಿತವಾಗಿಲ್ಲ. ಸಿಎಫ್​ಎಂ ಇಂಟರ್ನ್ಯಾಷನಲ್, ರಾಲ್ಸ್ ರಾಯ್ಸ್ ಮತ್ತು ಜಿಇ ಏರೋಸ್ಪೇಸ್ ಕಂಪನಿಗಳೊಂದಿಗೆ ಎಂಜಿನ್ ಮೈಂಟೆನೆನ್ಸ್​ಗೆ ದೀರ್ಘಾವಧಿ ಒಪ್ಪಂದಕ್ಕೆ ಏರ್ ಇಂಡಿಯಾ ಸಹಿಹಾಕಿದೆ. ಏರ್​ಬಸ್ ವಿಮಾನಗಳ ಎಂಜಿನ್ ರಾಲ್ಸ್ ರಾಯ್ಸ್​ನದ್ದಾಗಿದೆ. ಜಾಗತಿಕವಾಗಿ ಹೆಚ್ಚಿನ ವಿಮಾನಗಳಿಗೆ ಇವೇ ಎಂಜಿನ್ ಬಳಸಲಾಗುತ್ತದೆ. ಹೀಗಾಗಿ, ಏರ್ ಇಂಡಿಯಾಗೆ ಸಿಕ್ಕಿರುವ ಡೀಲ್ ಬಹಳ ಉತ್ತಮ ಎಂದೇ ಪರಿಣಿತರು ಬಣ್ಣಿಸುತ್ತಾರೆ.

Published On - 4:02 pm, Thu, 16 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್