Bank Holidays: ಮಾರ್ಚ್ ತಿಂಗಳು ಬ್ಯಾಂಕುಗಳಿಗೆ 12 ದಿನ ರಜೆ; ಯಾವ್ಯಾವ ದಿನ, ಇಲ್ಲಿದೆ ಪಟ್ಟಿ
March 2023, Bank Holidays List: ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳು 4 ಭಾನುವಾರ, 2 ಶನಿವಾರ ಸೇರಿ ಒಟ್ಟು 12 ದಿನಗಳು ಬಾಗಿಲು ಹಾಕಿರುತ್ತವೆ. ಯುಗಾದಿ, ಹೋಳಿ, ರಾಮನವಮಿ ಹಬ್ಬಗಳೂ ಮಾರ್ಚ್ ತಿಂಗಳಲ್ಲಿವೆ.
ಬೆಂಗಳೂರು: ಈ ಫೆಬ್ರುವರಿ 10 ದಿನಗಳಷ್ಟು ರಜೆ ಇದ್ದ ಬ್ಯಾಂಕುಗಳಿಗೆ ಮುಂದಿನ ತಿಂಗಳು, ಮಾರ್ಚ್ನಲ್ಲಿ (March 2023) 12 ದಿನಗಳ ರಜೆ ಇದೆ. ಇದರಲ್ಲಿ ಭಾನುವಾರದ ರಜೆಗಳು ಮತ್ತು 2ನೇ ಮತ್ತು 4ನೇ ಶನಿವಾರದ ರಜೆಗಳೂ (2nd and 4th Saturday) ಒಳಗೊಂಡಿವೆ. ಈ ನಿಯಮಿತ ರಜೆಗಳ ಜೊತೆಗೆ ಸಾರ್ವತ್ರಿಕ ರಜಾ ದಿನದಂದು ಬ್ಯಾಂಕುಗಳು ಮುಚ್ಚಿರುತ್ತದೆ. ಪ್ರಾದೇಶಿಕ ರಜೆಗಳು ಆಯಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ. ಈ ಪ್ರಾದೇಶಿಕ ರಜೆಗಳನ್ನು ಆರ್ಬಿಐ ಬದಲು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಮಾರ್ಚ್ ತಿಂಗಳಲ್ಲಿ ಪ್ರಾದೇಶಿಕ ರಜೆಗಳು ಹಲವಿವೆ. ಕರ್ನಾಟಕದಲ್ಲಿ ಯುಗಾದಿ, ಶ್ರೀರಾಮನವಮಿ ಹಬ್ಬಕ್ಕೆ ರಜೆ ಇದೆ. ಹಾಗೆಯೇ ಬಿಹಾರ, ಮಣಿಪುರಕ್ಕೆ ಅನ್ವಯವಾಗುವ ಹಬ್ಬಗಳೂ ಇವೆ.
ಮಾರ್ಚ್ ತಿಂಗಳು ಬ್ಯಾಂಕುಗಳಿಗೆ ರಜಾ ದಿನಗಳು:
ಮಾರ್ಚ್ 3, ಶುಕ್ರವಾರ: ಚಾಪಚರ್ ಕುಟ್ (ಮಣಿಪುರದಲ್ಲಿನ ಬ್ಯಾಂಕುಗಳಿಗೆ ರಜೆ)
ಮಾರ್ಚ್ 5, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 7, ಮಂಗಳವಾರ: ಹೋಳಿ ಹಬ್ಬ (ಹಲವು ರಾಜ್ಯಗಳಿಗೆ ಅನ್ವಯ)
ಮಾರ್ಚ್ 8, ಬುಧವಾರ: ಹೋಳಿ ಎರಡನೇ ದಿನ (ಕೆಲ ರಾಜ್ಯಗಳಲ್ಲಿ)
ಮಾರ್ಚ್ 9, ಗುರುವಾರ: ಹೋಳಿ ಹಬ್ಬ (ಬಿಹಾರ ರಾಜ್ಯದಲ್ಲಿ)
ಮಾರ್ಚ್ 11, ಶನಿವಾರ: ತಿಂಗಳ 2ನೇ ಶನಿವಾರ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 12, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 19, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 22, ಬುಧವಾರ: ಯುಗಾದಿ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ)
ಮಾರ್ಚ್ 25, ಶನಿವಾರ: 4ನೇ ಶನಿವಾರದ ರಜೆ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 26, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)
ಮಾರ್ಚ್ 30, ಗುರುವಾರ: ಶ್ರೀರಾಮನವಿ ಹಬ್ಬ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)
ಕರ್ನಾಟಕದಲ್ಲಿ ನಾಲ್ಕು ಭಾನುವಾರ, ಎರಡು ಶನಿವಾರ ಮತ್ತು ಎರಡು ಹಬ್ಬ ಸೇರಿ ಒಟ್ಟು 8 ದಿನಗಳ ಕಾಲ ಬ್ಯಾಂಕುಗಳು ಮಾರ್ಚ್ ತಿಂಗಳಲ್ಲಿ ಬಂದ್ ಆಗಿರುತ್ತವೆ. ಇದಲ್ಲದೇ ಬ್ಯಾಂಕ್ ನೌಕರರ ಮುಷ್ಕರದಂತಹ ಅನಿರೀಕ್ಷಿತವಾಗಿ ಒದಗಿಬರುವ ಬೆಳವಣಿಗೆಯೂ ಬ್ಯಾಂಕ್ ರಜೆಗೆ ಕಾರಣವಾಗಬಹುದು.
ಬ್ಯಾಂಕುಗಳು ಮುಚ್ಚಿದ್ದರೂ ಆನ್ಲೈನ್ ಬ್ಯಾಂಕಿಂಗ್ ಸದಾ ಲಭ್ಯ ಇರುತ್ತದೆ. ಬಹುತೇಕ ಎಟಿಎಂಗಳು 24 ಗಂಟೆ ಕಾರ್ಯನಿರ್ವಹಿಸುತ್ತಿರುತ್ತವೆ. ಬ್ಯಾಂಕ್ ಕಚೇರಿಗೆ ಹೋಗಿಯೇ ಮಾಡಬೇಕಾದ ಕೆಲಸಗಳಿಗೆ ಮಾತ್ರ ತೊಂದರೆ ಆಗುತ್ತದೆ. ಅಂಥವರಿಗೆ ಈ ಬ್ಯಾಂಕ್ ರಜಾದಿನದ ಪಟ್ಟಿ ಅನುಕೂಲವಾಗುತ್ತದೆ.
ಇನ್ನಷ್ಟು ವ್ಯವಹಾರ ಮತ್ತು ಬ್ಯಾಂಕಿಂಗ್ ಸುದ್ದಿಗಳಿಗೆ ಈ ಲಿಂಕ್ ಒತ್ತಿರಿ
Published On - 5:26 pm, Thu, 16 February 23