AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

470 Airbus and Boeing Planes For Air India: ಫ್ರಾನ್ಸ್​ನ ಏರ್​ಬಸ್ ಮತ್ತು ಅಮೆರಿಕದ ಬೋಯಿಂಗ್ ಸಂಸ್ಥೆಗಳಿಂದ ಟಾಟಾ ಒಡೆತನದ ಏರ್ ಇಂಡಿಯಾ ಒಟ್ಟು 470 ವಿಮಾನಗಳ ಖರೀದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಹಾಗೆಯೇ ರಾಲ್ಸ್ ರಾಯ್ಸ್ ಎಂಜಿನ್​ಗಳನ್ನೂ ಖರೀದಿಸುತ್ತಿದೆ. ಜಾಗತಿಕ ಏವಿಯೇಶನ್ ಇತಿಹಾಸದಲ್ಲಿ ನಡೆದ ಬೃಹತ್ ಖರೀದಿ ಡೀಲ್ ಇದು ಎನ್ನಲಾಗಿದೆ.

Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ
ಬೋಯಿಂಗ್ ವಿಮಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 15, 2023 | 8:03 AM

Share

ನವದೆಹಲಿ: ಫ್ರಾನ್ಸ್ ದೇಶದ ಏರ್​ಬಸ್ ಸಂಸ್ಥೆಯಿಂದ (Airbus) 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಭಾರತದ ಏರ್ ಇಂಡಿಯಾ ಸಂಸ್ಥೆ (Air India) ಇದೀಗ ಅಮೆರಿಕದ 220 ಬೋಯಿಂಗ್ ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿದೆ. ಭಾರತದ ಅತಿದೊಡ್ಡ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ಒಟ್ಟು 470 ವಿಮಾನಗಳನ್ನು ಖರೀದಿಸುತ್ತಿರುವುದು ಬಹಳ ದೊಡ್ಡ ಬೆಳವಣಿಗೆ ಎನಿಸಿದೆ. ವೈಮಾನಿಕ ಇತಿಹಾಸದಲ್ಲೇ ಒಂದು ಸಂಸ್ಥೆ ಇಷ್ಟು ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಬೋಯಿಂಗ್ ಸಂಸ್ಥೆಯ 220 ವಿಮಾನಗಳನ್ನು ಖರೀದಿಸಲು 34 ಬಿಲಿಯನ್ ಡಾಲರ್ (2.8 ಲಕ್ಷ ಕೋಟಿ ರೂ) ಮೊತ್ತಕ್ಕೆ ಏರ್ ಇಂಡಿಯಾ ಡೀಲ್ ಮಾಡಿಕೊಂಡಿದೆ. ಇದು ರಿಯಾಯಿತಿ ಇತ್ಯಾದಿಯನ್ನು ಹೊರತುಪಡಿಸಿದ ಮೊತ್ತವಾಗಿದೆ. ಬೋಯಿಂಗ್​ನ 190 ಬಿ737 ಮ್ಯಾಕ್ಸ್ ಮತ್ತು 20 ಬಿ777ಎಕ್ಸ್ ವಿಮಾನಗಳು ಸೇರಿವೆ. ಈ ಒಪ್ಪಂದದ ಪ್ರಕಾರ, ಈಗಿರುವ ಬೆಲೆಯಲ್ಲೇ ಮುಂದೆ 70ಕ್ಕೂ ಹೆಚ್ಚು ವಿಮಾನಗಳನ್ನು ಬೋಯಿಂಗ್​ನಿಂದ ಖರೀದಿಸುವ ಅವಕಾಶ ಏರ್ ಇಂಡಿಯಾಗೆ ಇದೆ. ಅದೂ ಸೇರಿ ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಒಪ್ಪಂದ ಮೊತ್ತ 45.9 ಬಿಲಿಯನ್ ಡಾಲರ್ (ಸುಮಾರು 3.8 ಲಕ್ಷ ಕೋಟಿ ರೂಪಾಯಿ) ಆಗುತ್ತದೆ.

ಇದೇ ವೇಳೆ, ಟಾಟಾ ಒಡೆತನದ ಏರ್ ಇಂಡಿಯಾ ಸಂಸ್ಥೆ ಫ್ರಾನ್ಸ್ ಮೂಲದ ಏರ್​ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ದೊಡ್ಡ ಗಾತ್ರದ 40 350 ಏರ್​ಬಸ್ ವಿಮಾನಗಳು ಒಳಗೊಂಡಿವೆ. ಈ ಬೃಹತ್ ವಿಮಾನಗಳು ದೂರಪ್ರಯಾಣಕ್ಕೆ ಹೇಳಿಮಾಡಿಸಿದವಾಗಿವೆ.

ಏರ್​ಬಸ್ ಮತ್ತು ಬೋಯಿಂಗ್​ಗಳಿಂದ ಏರ್​ಇಂಡಿಯಾ ಒಟ್ಟು 470 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಂತಾಗಿದೆ. ಇದು ಜಾಗತಿಕ ವೈಮಾನಿಕ ಇತಿಹಾಸದಲ್ಲೇ ಅತಿ ದೊಡ್ಡ ಡೀಲ್ ಎನಿಸಿದೆ. ಎರಡೂ ಒಪ್ಪಂದಗಳ ಒಟ್ಟು ಮೊತ್ತ 85 ಬಿಲಿಯನ್ ಡಾಲರ್. ಅಂದರೆ ಸುಮಾರು 7 ಲಕ್ಷ ಕೋಟಿ ರೂಪಾಯಿ. 2013ರಲ್ಲಿ ಎಮಿರೇಟ್ಸ್ ಏರ್​ಲೈನ್ ಸಂಸ್ಥೆ 75 ಬಿಲಿಯನ್ ಡಾಲರ್ ಮೊತ್ತಕ್ಕೆ ಬೋಯಿಂಗ್ ವಿಮಾನಗಳನ್ನು ಖರೀದಿಸಿತ್ತು. ಈಗ ಏರ್ ಇಂಡಿಯಾ ಸಂಸ್ಥೆ ಆ ದಾಖಲೆಯನ್ನು ಅಳಿಸಿಹಾಕಿದೆ.

ಫ್ರಾನ್ಸ್, ಅಮೆರಿಕಕ್ಕೆ ಖುಷಿಯೋ ಖುಷಿ

ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸುತ್ತಿರುವುದು ಸಣ್ಣ ವಿಷಯವಲ್ಲ. ಈ ವಿಮಾನಗಳ ಉತ್ಪಾದನೆ ನಡೆಯುವ ಫ್ರಾನ್ಸ್ ಮತ್ತು ಅಮೆರಿಕದ ಆರ್ಥಿಕತೆಗೆ ಬಹಳ ಪುಷ್ಟಿ ಸಿಗುತ್ತದೆ. ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಅಮೆರಿಕದಲ್ಲಿ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಅಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಏರ್ ಇಂಡಿಯಾ ಬೋಯಿಂಗ್ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವುದು.

ಈ ಒಪ್ಪಂದದಿಂದಾಗಿ ಅಮೆರಿಕದ 44 ಜಿಲ್ಲೆಗಳಾದ್ಯಂತ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈ ಉದ್ಯೋಗಕ್ಕಾಗಿ ನಾಲ್ಕು ವರ್ಷದ ಡಿಗ್ರಿ ಓದುವ ಅಗತ್ಯ ಇರುವುದಿಲ್ಲ ಎಂದು ಸ್ವತಃ ಜೋ ಬೈಡನ್ ಅವರೇ ಹೇಳಿಕೆ ನೀಡಿದ್ದಾರೆ.

ಏರ್ ಇಂಡಿಯಾ ಇಷ್ಟಕ್ಕೆ ಸೀಮಿತಗೊಂಡಿಲ್ಲ. ರೋಲ್ಸ್ ರಾಯ್ಸ್ ಕಂಪನಿಯಿಂದ 68 ಟ್ರೆಂಟ್ ಎಕ್ಸ್​ಡಬ್ಲ್ಯೂಬಿ-97 ಎಂಜಿನ್​ಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಈ ಎಂಜಿನ್​ಗಳು ಏರ್​ಬಸ್ ವಿಮಾನಗಳ ಚಾಲನೆಗೆ ಬಳಸಿಕೊಳ್ಳಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಈ ಎಂಜಿನ್​ಗಳನ್ನು ಒಂದು ಕಂಪನಿ ಖರೀದಿಸುತ್ತಿರುವುದು ಇದೇ ಮೊದಲು. ಏರ್ ಇಂಡಿಯಾ ಇದೀಗ ಟ್ರೆಂಟ್ ಎಕ್ಸ್​ಡಬ್ಲ್ಯೂಬಿ-97 ಎಂಜಿನ್​ನ ಅತಿದೊಡ್ಡ ಆಪರೇಟರ್ ಎನಿಸಲಿದೆ.

ಭಾರತಕ್ಕೆ ಅಗತ್ಯವಿದೆಯಾ ಈ ಖರೀದಿ?

ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ ಸುಮಾರು 7 ಲಕ್ಷ ಕೋಟಿ ರೂ ಕೊಟ್ಟು ವಿಮಾನಗಳನ್ನು ಖರೀದಿಸುತ್ತಿರುವುದು ವ್ಯರ್ಥ ಖರ್ಚಾ ಎಂಬ ಪ್ರಶ್ನೆ ಮೂಡಬಹುದು. ಭಾರತದ ವೈಮಾನಿಕ ಕ್ಷೇತ್ರ ಬಹಳ ಗಣನೀಯವಾಗಿ ಬೆಳೆಯುತ್ತಿದೆ. ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಫ್ರಾನ್ಸ್ ಅಧ್ಯಕ್ಷರ ಜೊತೆ ಆನ್​ಲೈನ್ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಮುಂದಿನ 15 ವರ್ಷದಲ್ಲಿ ಇನ್ನೂ 2000 ಕ್ಕೂ ಹೆಚ್ಚು ವಿಮಾನಗಳು ಬೇಕಾಗಬಹುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಏರ್ ಇಂಡಿಯಾ ಸುಮಾರು 500 ವಿಮಾನಗಳನ್ನು ಖರೀದಿಸುತ್ತಿರುವುದು ಉತ್ತಮ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ.

Published On - 8:03 am, Wed, 15 February 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ