ತಿಂಗಳಿಗೊಮ್ಮೆಯಾದರೂ ಬ್ಯಾಂಕ್​ ಸ್ಟೇಟ್​ಮೆಂಟ್ ಪರಿಶೀಲಿಸಬೇಕು; ಯಾಕೆಂಬುದು ಇಲ್ಲಿದೆ ನೋಡಿ

ಬ್ಯಾಂಕ್ ಸ್ಟೇಟ್​ಮೆಂಟ್ ಎಂಬುದು ನಮ್ಮ ಬ್ಯಾಂಕ್ ಖಾತೆಯಲ್ಲಿ ನಡೆದ ವಹಿವಾಟಿಗೆ ಸಂಬಂಧಿಸಿದ ವಿವರವಾದ ಮಾಹಿತಿ. ಯಾವಾಗ ಎಷ್ಟು ಹಣ ಡ್ರಾ ಆಗಿದೆ, ವರ್ಗಾವಣೆಯಾಗಿದೆ, ಎಷ್ಟು ಹಣ ಸ್ವೀಕರಿಸಲಾಗಿದೆ ಎಂಬ ವಿವರ ದಿನಾಂಕ, ಸಮಯ, ವಹಿವಾಟಿನ ವಿವರ ಸಮೇತ ಬ್ಯಾಂಕ್ ಸ್ಟೇಟ್​ಮೆಂಟ್​​ನಲ್ಲಿರುತ್ತದೆ.

Ganapathi Sharma
|

Updated on: Feb 15, 2023 | 10:44 AM

Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಡಿಜಿಟಲ್ ಪಾವತಿಯ ಈ ಕಾಲದಲ್ಲಿ ಹೆಚ್ಚಿನೆಲ್ಲಾ ಹಣಕಾಸು ವ್ಯವಹಾರಗಳೂ ಆನ್​ಲೈನ್​ನಲ್ಲೇ ನಡೆಯುತ್ತದೆ. ಆದರೆ, ಬ್ಯಾಂಕ್ ಸ್ಟೇಟ್​ಮೆಂಟ್ ಆಗಾಗ ಪರಿಶೀಲಿಸುತ್ತಿರುವವರ ಸಂಖ್ಯೆ ಕಡಿಮೆ.

1 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಕನಿಷ್ಠ ತಿಂಗಳಿಗೊಮ್ಮೆಯಾದರೂ ಬ್ಯಾಂಕ್ ಸ್ಟೇಟ್​ಮೆಂಟ್ ಪರಿಶೀಲಿಸುತ್ತಿರಬೇಕು ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಬ್ಯಾಂಕ್​ಗಳು ಪ್ರತಿ ತಿಂಗಳು ಸ್ಟೇಟ್​ಮೆಂಟ್ ಅನ್ನು ಗ್ರಾಹಕರ ಇ-ಮೇಲ್ ಐಡಿಗೆ ಕಳುಹಿಸುತ್ತವೆ. ಇದರ ಮೇಲೊಮ್ಮೆ ಕಣ್ಣಾಡಿಸಲೇಬೇಕು. ಯಾಕೆ ಎಂಬುದಕ್ಕೆ ಕೆಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

2 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹಣಕಾಸು ಅಕ್ರಮಗಳು ಜಾಸ್ತಿಯಾಗುತ್ತಿವೆ. ಒಂದು ವೇಳೆ ಹಾಗೇನಾದರೂ ಅಕ್ರಮ ನಡೆದಿದ್ದಲ್ಲಿ ಸ್ಟೇಟ್​​​ಮೆಂಟ್​ ನೋಡಿದರೆ ಗೊತ್ತಾಗುವ ಸಾಧ್ಯತೆ ಇದೆ. ತಕ್ಷಣವೇ ಬ್ಯಾಂಕ್​ಗೆ ಮಾಹಿತಿ ನೀಡಬಹುದು.

3 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಹಣ ಖರ್ಚಾಗುತ್ತಿರುವುದರ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳಲೂ ಬ್ಯಾಂಕ್​ ಸ್ಟೇಟ್​ಮೆಂಟ್ ಪರಿಶೀಲಿಸುವುದರಿಂದ ಪ್ರಯೋಜನವಾಗಲಿದೆ. ಪ್ರತಿಯೊಂದು ಖರ್ಚು ವೆಚ್ಚದ ಬಗ್ಗೆಯೂ ಲೆಕ್ಕ ಬರೆದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕ್​ ಸ್ಟೇಟ್​​ಮೆಂಟ್​​ನಲ್ಲಿ ಎಲ್ಲ ವಿವರಗಳೂ ದೊರೆಯುತ್ತವೆ.

4 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಬ್ಯಾಂಕ್​ಗಳು ಯಾವ ಸೇವೆಗೆ ಎಷ್ಟು ಶುಲ್ಕ ವಿಧಿಸಿವೆ, ಆ ಸೇವೆಗಳು ನಮಗೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಸ್ಟೇಟ್​​ಮೆಂಟ್ ಪರಿಶೀಲಿಸುವುದು ಅಗತ್ಯ. ಇಲ್ಲವಾದಲ್ಲಿ ನಮಗೆ ಬೇಡವಾದ ಸೇವೆಗಳಿಗೂ ಶುಲ್ಕ ಪಾವತಿಸಿಕೊಂಡು ವ್ಯರ್ಥವಾಗಿ ಹಣ ಪೋಲಾಗಬಹುದು.

5 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ತಿಂಗಳ ಖರ್ಚು ವೆಚ್ಚಗಳ ಅಂದಾಜು ಲೆಕ್ಕಾಚಾರ ಮೊದಲೇ ಹಾಕಿಡಲು, ಅದಕ್ಕೆ ಪೂರಕವಾಗಿ ನಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲು ಬ್ಯಾಂಕ್​ ಸ್ಟೇಟ್​​ಮೆಂಟ್​ ನೋಡುವುದರಿಂದ ಪ್ರಯೋಜನವಾಗಲಿದೆ.

6 / 7
Why check Bank Statement Every Month five Reasons You Must To spot avoid fraudulent transactions To monitor the fees collected by the banks and other reasons

ಹೆಚ್ಚಿನವರು ವಿವಿಧ ಬ್ಯಾಂಕ್​ಗಳ ಖಾತೆಗಳಲ್ಲಿ ಸ್ವಲ್ಪ ಸ್ವಲ್ಪ ಹಣ ಇಟ್ಟಿರುತ್ತಾರೆ. ಹೀಗೆ ಇರುವ ನಿಷ್ಕ್ರಿಯ ಮೊತ್ತವನ್ನು ಗಮನಿಸಿ ಹೆಚ್ಚು ಲಾಭ ದೊರೆಯಬಹುದಾದ ಹೂಡಿಕೆ ಮಾಡಲು ಸ್ಟೇಟ್​​ಮೆಂಟ್​ ಗಮನಿಸುವುದರಿಂದ ಪಚ್ರಯೋಜನವಾಗಲಿದೆ.

7 / 7
Follow us
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ