ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ

ಬ್ಯಾಂಕ್​ನಲ್ಲಿ ಸಾಲ ಪಡೆದು ಅದನ್ನು ಪೂರ್ಣವಾಗಿ ಮರುಪಾವತಿ ಬಳಿಕ ಈ ಅಗತ್ಯ ದಾಖಲೆಗಳನ್ನು ಮರಳಿ ಪಡೆಯುವುದು ಬಹಳ ಮುಖ್ಯ. ಇಲ್ಲದಿದ್ದರೆ ಮುಂದೊಂದು ದಿನ ಇದರಿಂದಲೇ ನಿಮಗೆ ಸಮಸ್ಯೆಯಾಗೋದು ಖಂಡಿತ. ಹಾಗಾದ್ರೆ ನೀವು ಸಾಲ ತೀರಿಸಿದ ಬಳಿಕ ನೀವು ಹಿಂಪಡೆಯಬೇಕಾದ ಮಹತ್ವ ದಾಖಲೆಗಳ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ

ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ
ಸಾಂದರ್ಭಿಕ ಚಿತ್ರ
Image Credit source: Priyanka Parashar/Mint via Getty Images

Updated on: Jul 14, 2026 | 5:46 PM

ಮುಖ್ಯಾಂಶಗಳು

  • ಸಾಲ ಪಡೆಯುವಾಗ ಕೆಲ ಅಗತ್ಯ ದಾಖಲೆಗಳನ್ನು ಬ್ಯಾಂಕ್‌ಗೆ ಕೋಟ್ಟಿರುತ್ತಾರೆ.
  • ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ಮರಳಿ ಪಡೆಯಿರಿ.
  • ಅಗತ್ಯ ದಾಖಲೆಗಳನ್ನು ಬ್ಯಾಂಕ್‌ನಿಂದ ಪಡೆಯದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚು

ಸಾಲ (Loan) ಮಾಡಿಯಾದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಆದರೆ ಸಾಲ ಮಾಡಿ ಅದನ್ನು ತೀರಿಸುವವರೆಗೆ ನೆಮ್ಮದಿಯೇ ಇರಲ್ಲ. ಒಮ್ಮೆ ಸಾಲ ಮರುಪಾವತಿ ಮಾಡಿದ್ರೆ ಅದೇನೋ ಮನಸ್ಸಿಗೆ ಸಮಾಧಾನ. ಬ್ಯಾಂಕ್ ಸಾಲ ತೀರಿಸಿದ ಬಳಿಕ ಎಲ್ಲಾ ಕೆಲಸ ಆಯ್ತು, ಇನ್ನು ಆರಾಮಾಗಿ ಇರಬಹುದು ಅಂದು ಕೊಂಡಿದ್ದೀರಾ. ಆದರೆ ನೀವು  ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಸಾಲ ಮುಕ್ತಾಯ ಪತ್ರ, ನಿರಪೇಕ್ಷಣಾ ಪ್ರಮಾಣಪತ್ರ ಸೇರಿದಂತೆ ಇನ್ನಿತ್ತರ ಅಗತ್ಯ ದಾಖಲೆಗಳನ್ನು (documents) ಬ್ಯಾಂಕ್‌ನಿಂದ ಪಡೆದುಕೊಳ್ಳುವುದನ್ನು ಮಾತ್ರ ಮರೆಯದಿರಿ.

ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಪಡೆಯಬೇಕು?

ಮೂಲ ದಾಖಲೆಗಳ ಮರುಪಾವತಿ: ಸಾಲ ಪಡೆಯುವಾಗ ನೀವು ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಆಸ್ತಿ ಪತ್ರಗಳು, ಸೇಲ್ ಡೀಡ್, ಅಗ್ರಿಮೆಂಟ್ ಮುಂತಾದ ಎಲ್ಲಾ ಮೂಲ ದಾಖಲೆಗಳನ್ನು ತಪ್ಪದೇ ಪಡೆದುಕೊಳ್ಳಿ.

ನಿರಪೇಕ್ಷಣಾ ಪತ್ರ ಅಥವಾ ನೋ ಡ್ಯೂ ಸರ್ಟಿಫಿಕೇಟ್: ಸಾಲ ತೀರಿಸಿದ ಬಳಿಕ ನೀವು ಬ್ಯಾಂಕಿನಿಂದ ನೋ ಡ್ಯೂ ಸರ್ಟಿಫಿಕೇಟ್ ಪಡೆಯಬೇಕು. ಇದು ನೀವು ಸಾಲವನ್ನು ಸಂಪೂರ್ಣವಾಗಿ ತೀರಿಸಲಾಗಿದೆ ಹಾಗೂ ನಿಮ್ಮ ಮೇಲೆ ಯಾವುದೇ ಬಾಕಿ ಇಲ್ಲ ಎಂದು ದೃಢೀಕರಿಸುವ ದಾಖಲೆಯಾಗಿದೆ.

ಬ್ಲ್ಯಾಂಕ್ ಚೆಕ್ ವಾಪಸ್ ಪಡೆದುಕೊಳ್ಳಿ: ಬ್ಯಾಂಕಿನವರು ಸಾಲ ನೀಡುವ ವೇಳೆ ನಿಮ್ಮಿಂದ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳುತ್ತಾರೆ. ಸಾಲ ತೀರಿಸಿದ ಕೂಡಲೇ ಆ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳಿ. ಈ ಚೆಕ್ ಗಳು ದುರ್ಬಳಕೆ ಆಗುವುದನ್ನು ತಪ್ಪಿಸುತ್ತದೆ.

ಕ್ರೆಡಿಟ್ ಸ್ಕೋರ್ ಪರಿಷ್ಕರಿಸಿಕೊಳ್ಳಿ: ಸಾಲ ಮುಕ್ತಾಯಗೊಂಡ ಬಳಿಕ ನೀವು ನಿಮ್ಮ ಸಿಬಿಲ್ ವರದಿಯಲ್ಲಿ ಸಾಲದ ಸ್ಥಿತಿಯು ಮುಕ್ತಾಯಗೊಂಡಿದೆ ಎಂದು ನವೀಕೃತವಾಗಿದೆಯೇ ಒಮ್ಮೆ ನೋಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಖಾತೆ ಮುಚ್ಚುವಿಕೆ ಹೇಳಿಕೆ: ಸಾಲದ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿಸುವ ಅಧಿಕೃತ ಹೇಳಿಕೆಯಾಗಿದೆ. ಇದನ್ನು ನೀವು ಸಾಲ ತೀರಿಸಿದ ತಕ್ಷಣ ಹೇಳಿಕೆಯನ್ನು ಬ್ಯಾಂಕ್‌ನಿಂದ ಪಡೆದುಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಯಾಕೆ ಮರಳಿ ಪಡೆಯಬೇಕು?

ಉತ್ತರ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಪಡೆಯದೇ ಇದ್ದಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಪ್ರಶ್ನೆ: ಮೂಲ ದಾಖಲೆಗಳು ಎಂದರೇನು?

ಉತ್ತರ: ನೀವು ಸಾಲ ಪಡೆಯುವಾಗ ಅಡಮಾನವಿಟ್ಟ ಆಸ್ತಿ ಪತ್ರಗಳು, ಸೇಲ್ ಡೀಡ್ ಹಾಗೂ ಅಗ್ರಿಮೆಂಟ್ ಮುಂತಾದ ದಾಖಲೆಗಳೇ ಮೂಲದಾಖಲೆಗಳಾಗಿವೆ.

ಪ್ರಶ್ನೆ: ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಮರಳಿ ಪಡೆಯಬೇಕು?

ಉತ್ತರ: ಸಾಲ ತೀರಿಸಿದ ಬಳಿಕ ನಿರಪೇಕ್ಷಣಾ ಪತ್ರ, ಮೂಲ ದಾಖಲೆ ಪತ್ರ, ಕ್ರೆಡಿಟ್ ಸ್ಕೋರ್, ಬ್ಲ್ಯಾಂಕ್ ಚೆಕ್ ವಾಪಸ್, ಖಾತೆ ಮುಚ್ಚುವಿಕೆ ಹೇಳಿಕೆ ಈ ದಾಖಲೆಗಳನ್ನು ಕೇಳಿ ಪಡೆಯಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 5:33 pm, Tue, 14 July 26

Follow Us