
ನವದೆಹಲಿ, ಸೆಪ್ಟೆಂಬರ್ 28: ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಪ್ರಯತ್ನಗಳು ಹೆಚ್ಚುತ್ತಿವೆ. ಪಾಕಿಸ್ತಾನ ಮತ್ತು ಚೀನಾ ಗಡಿಭಾಗದುದ್ದಕ್ಕೂ ವಾಯು ರಕ್ಷಣೆ ಬಲಪಡಿಸಲು ಅನಂತ್ ಶಸ್ತ್ರ ಎನ್ನುವ ಏರ್ ಮಿಸೈಲ್ ಸಿಸ್ಟಂಗಳನ್ನು ಖರೀದಿಸುತ್ತಿದೆ ಭಾರತೀಯ ಸೇನೆ (Indian Army). ಐದರಿಂದ ಆರು ರೆಜಿಮೆಂಟ್ಗಳ ಅನಂತ ಶಸ್ತ್ರ ಕ್ಷಿಪಣಿ ಸಿಸ್ಟಂಗಳ ಖರೀದಿಗೆ ಗುತ್ತಿಗೆ ನೀಡಲಾಗಿದೆ.
ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ ಅನಂತ ಶಸ್ತ್ರ ಕ್ಷಿಪಣಿ ಗುತ್ತಿಗೆ ಸಿಕ್ಕಿದೆ. ಇದು 30,000 ಕೋಟಿ ರೂ ಮೌಲ್ಯದ ಬೃಹತ್ ಪ್ರಾಜೆಕ್ಟ್ ಆಗಿದೆ. ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಅನಂತ ಶಸ್ತ್ರವು ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ ಆಗಿದೆ.
ಇದನ್ನೂ ಓದಿ: ಈ ಯುದ್ಧದಲ್ಲಿ ಗೆದ್ದವರಿಂದ ಜಗತ್ತಿನ ಮುಂದಿನ ಅಧಿಪತ್ಯ: ರೇ ಡಾಲಿಯೋ
ಅನಂತ ಶಸ್ತ್ರ ಏರ್ ಡಿಫೆನ್ಸ್ ಸಿಸ್ಟಂಗಳು ಬಹಳ ನಿಖರವಾಗಿ ಗುರಿಗಳಿಗೆ ಹೊಡೆಯಲು ಸಮರ್ಥವಾಗಿವೆ. ಇವುಗಳ ಶ್ರೇಣಿ 30 ಕಿಮೀ ಇದೆ.
ಭಾರತದಲ್ಲಿ ಈಗಾಗಲೇ ದೇಶೀಯ ನಿರ್ಮಿತ ಉತ್ತಮ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಎಂಆರ್ಎಸ್ಎಎಂ, ಆಕಾಶ್ ಸಿಸ್ಟಂಗಳಿವೆ. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ನಲ್ಲಿ ಭಾರತದ ದೇಶೀಯ ಶಸ್ತ್ರಾಸ್ತ್ರಗಳು ಗಮನಾರ್ಹ ಪಾತ್ರ ವಹಿಸಿದ್ದವು.
ಎಂಆರ್ಎಸ್ಎಎಂ, ಆಕಾಶ್ ಅಷ್ಟೇ ಅಲ್ಲದೆ, ಸ್ಪೈಡರ್, ಸುದರ್ಶನ್ ಎಸ್-400 ಏರ್ ಡಿಫೆನ್ಸ್ ಸಿಸ್ಟಂಗಳು ಆಪರೇಷನ್ ಸಿಂದೂರ್ನಲ್ಲಿ ಮಿಂಚಿದ್ದವು. ಎಲ್-70, ಝಡ್ಯು-23 ಏರ್ ಡಿಫೆನ್ಸ್ ಗನ್ ಮೊದಲಾದವು ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ
ಈ ಸಮರ್ಥ ಏರ್ ಡಿಫೆನ್ಸ್ ವ್ಯವಸ್ಥೆಗೆ ಈಗ ಅನಂತ ಶಸ್ತ್ರ ಮತ್ತಷ್ಟು ಬಲ ಒದಗಿಸಲಿದೆ. ಹಾಗೆಯೇ, ಹೊಸ ರಾಡಾರ್ಗಳು, ಬಹಳ ಕಿರು ಶ್ರೇಣಿಯ ಏರ್ ಡಿಫೆನ್ಸ್ ಸಿಸ್ಟಂಗಳು, ಜಾಮರ್ಗಳು, ಲೇಸರ್ ಆಧಾರಿತ ಸಿಸ್ಟಂಗಳು ಇವೇ ಮುಂತಾದವನ್ನು ಭಾರತ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ