Chip Enabled e-Passport: ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್?

|

Updated on: Jul 12, 2023 | 12:19 PM

Passport Revolution By PSP 2.0: ಭಾರತದಲ್ಲಿ ಈಗ ಹೊಸ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆ ಜಾರಿಗೆ ಬರಲಿದ್ದು, ಬೆಂಗಳೂರನಲ್ಲಿ ಮೊದಲ ಪ್ರಾಯೋಗಿಕ ಚಾಲನೆ ಪಡೆಯಲಿದೆ. ಚಿಪ್ ಇರುವ ಇ-ಪಾಸ್​ಪೋರ್ಟ್ ವ್ಯವಸ್ಥೆ ಬರಲಿದೆ.

Chip Enabled e-Passport: ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್?
ಪಾಸ್​ಪೋರ್ಟ್
Follow us on

ಬೆಂಗಳೂರು: ಶೀಘ್ರದಲ್ಲೇ ಜಾರಿಯಾಗಲಿರುವ ಎರಡನೇ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆಯಿಂದ (PSP v2.0- Passport Seva Programme) ಪಾಸ್​ಪೋರ್ಟ್ ವಿತರಣಾ ಸೇವೆಯಲ್ಲಿ ಬಹಳ ದೊಡ್ಡ ಪರಿವರ್ತನೆಗಳಾಗುವ ಸಾಧ್ಯತೆ ಇದೆ. ಪಾಸ್​ಪೋರ್ಟ್ ಸೇವಾ ಯೋಜನೆಯ ಭಾಗವಾಗಿ ಚಿಪ್ ಜೋಡಿತ ಇಪಾಸ್​ಪೋರ್ಟ್ ಬರಲಿದ್ದು, ಪಾಸ್​ಪೋರ್ಟ್ ವಿತರಣೆಯ ಸಮಯ ಅರ್ಧದಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಹೊಸ ಪಾಸ್​ಪೋರ್ಟ್ ಸೇವಾ ಯೋಜನೆಯ ಪ್ರಯೋಗ ಮೊದಲು ಬೆಂಗಳೂರಿನಲ್ಲೇ ಆಗುತ್ತಿರುವುದು ವಿಶೇಷ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆ ತಾಂತ್ರಿಕವಾಗಿ ಅಭಿವೃದ್ಧಿಪಡಿಸಿರುವ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆ ಬೆಂಗಳೂರಿನ ಎರಡು ಪಾಸ್​ಪೋರ್ಟ್ ಸೇವಾ ಕೇಂದ್ರಗಳಲ್ಲಿ ಅಳವಡಿಕೆ ಆಗಲಿದೆ. ಈ ಎರಡು ಸೆಂಟರ್​ಗಳಲ್ಲಿ ಸಾಫ್ಟ್​ವೇರ್ ಅಪ್​ಗ್ರೇಡ್ ಇತ್ಯಾದಿ ಸೌಕರ್ಯ ವ್ಯವಸ್ಥೆ ಬದಲಿಸಲಾಗುತ್ತಿದೆ. ಇದು ಈ ವರ್ಷದೊಳಗೆ ಮುಗಿಯುವ ನಿರೀಕ್ಷೆ ಇದೆ. ಒಂದು ಅಂದಾಜು ಪ್ರಕಾರ ಈ ನವೆಂಬರ್ ಅಥವಾ ಡಿಸೆಂಬರ್​ವೊಳಗೆ ಹೊಸ ಆವೃತ್ತಿಯ ಸಾಫ್ಟ್​ವೇರ್ ಅಳವಡಿಕೆ ಆಗಲಿದೆ.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

15 ವರ್ಷಗಳ ಮುನ್ನ ಪಾಸ್​ಪೋರ್ಟ್ ಮಾಡಿಸಲು ತಿಂಗಳುಗಳೇ ಆಗುತ್ತಿದ್ದವು. ನಂತರ ಕ್ರಮೇಣವಾಗಿ ಪಾಸ್​ಪೋರ್ಟ್ ನೀಡುವ ವ್ಯವಸ್ಥೆಯನ್ನು ಸರಳಗೊಳಿಸುತ್ತಾ ಬರಲಾಗಿದೆ. ಸದ್ಯ ನಾಲ್ಕೈದು ಕೆಲಸದ ದಿನಗಳಲ್ಲಿ ಪಾಸ್​ಪೋರ್ಟ್ ಸಿಗುತ್ತದೆ. ಈಗ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆ ಅಳವಡಿಕೆ ಆದರೆ ಎರಡು ಅಥವಾ ಮೂರು ದಿನದೊಳಗೆ ಪಾಸ್​ಪೋರ್ಟ್ ಸಿಗಬಹುದು.

2010ರಲ್ಲೂ ಬೆಂಗಳೂರೇ, 2023ರಲ್ಲೂ ಬೆಂಗಳೂರೇ

ಕುತೂಹಲವೆಂದರೆ ಪಾಸ್​ಪೋರ್ಟ್ ಸೇವಾ ಪ್ರೋಗ್ರಾಮ್ 2012ರಲ್ಲಿ ಜಾರಿಗೆ ಬಂದಿತ್ತು. ಆದರೆ, ಅದಕ್ಕೆ ಮುನ್ನ 2010ರ ಮೇ ತಿಂಗಳಲ್ಲಿ ಬೆಂಗಳೂರು ಮತ್ತು ಚಂಡೀಗಡದಲ್ಲಿ ಇದರ ಪ್ರಾಯೋಗಿಕ ಯೋಜನೆ ನಡೆಸಲಾಗಿತ್ತು. ಅಲ್ಲಿ ಯಶಸ್ವಿಯಾದ ಬಳಿಕ 2012ರಲ್ಲಿ ದೇಶಾದ್ಯಂತ ಚಾಲನೆಗೊಳಿಸಲಾಯಿತು.

ಇದನ್ನೂ ಓದಿStrict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಈಗ ಎರಡನೇ ಆವೃತ್ತಿಯ ಪಾಸ್​ಪೋರ್ಟ್ ಸೇವಾ ಯೋಜನೆಯ ಪೈಲಟ್ ಪ್ರಾಜೆಕ್ಟ್ ಬೆಂಗಳೂರಿನಲ್ಲಿ ಮೊದಲು ನಡೆಯಲಿದೆ. ಬೆಂಗಳೂರಿನಲ್ಲಿ ಎರಡು ಪಾಸ್​ಪೋರ್ಟ್ ಸೇವಾ ಕೇಂದ್ರಗಳಿವೆ. ಲಾಲ್​ಬಾಗ್ ರಸ್ತೆಯಲ್ಲಿ ಒಂದು, ಮಾರತಹಳ್ಳಿಯಲ್ಲಿ ಇನ್ನೊಂದು ಇದೆ. ಲಾಲ್​ಬಾಗ್ ರಸ್ತೆಯಲ್ಲಿರುವ ಪಾಸ್​ಪೋರ್ಟ್ ಸೆಂಟರ್​ನಲ್ಲಿ 1,700 ಅರ್ಜಿಗಳು ಬರುತ್ತವೆ. ಮಾರತ್ತಹಳ್ಳಿಯಲ್ಲಿರುವ ಪಾಸ್​ಪೋರ್ಟ್ ಸೇವಾ ಕೇಂದ್ರದಲ್ಲಿ 900 ಅರ್ಜಿಗಳು ಬರುತ್ತವೆ.

ಬೆಂಗಳೂರನಲ್ಲಿ ಪ್ರಯೋಗ ಯಶಸ್ವಿಯಾದ ಬಳಿಕ ಹೊಸ ಪಾಸ್​ಪೋರ್ಟ್ ಸೇವಾ ಯೋಜನೆಯನ್ನು ದೇಶಾದ್ಯಂತ ಎಲ್ಲಾ ಪಾಸ್​ಪೋರ್ಟ್ ಸೇವಾ ಕೇಂದ್ರಗಳಲ್ಲೂ ವಿಸ್ತರಿಸಲಾಗುತ್ತದೆ. 2014ರಲ್ಲಿ ಭಾರತದಲ್ಲಿ 77 ಪಾಸ್​ಪೋರ್ಟ್ ಸೇವಾ ಕೇಂದ್ರಗಳಿದ್ದವು. ಈಗ 9 ವರ್ಷದಲ್ಲಿ ಏಳು ಪಟ್ಟು ಹೆಚ್ಚಾಗಿದ್ದು, 523 ಸರ್ವಿಸ್ ಸೆಂಟರ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ