
ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ ಎಐ ಸಮರಾಸ್ತ್ರಗಳ ಕಂಪನಿ ಎನಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (FWDA- Flying Wedge Defence and Aerospace) ಇದೀಗ ಭಾರತದ ಮೊದಲ ಸ್ವಂತ ನಿರ್ಮಾಣದ ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ವಿಮಾನವನ್ನು ತಯಾರಿಸಿದೆ. MALE ಕಾಂಬ್ಯಾಟ್ ಏರ್ಕ್ರಾಫ್ಟ್ ವರ್ಗಕ್ಕೆ ಸೇರಿದ ಕಾಲಭೈರವ ಯುದ್ಧವಿಮಾನವು (Kaala Bhairava aircraft) ಪೂರ್ಣವಾಗಿ ತಯಾರಾಗಿದ್ದು ರಫ್ತಿಗೂ ಸಿದ್ಧವಾಗಿದೆ ಎಂದು ಎಫ್ಡಬ್ಲ್ಯುಡಿಎ ಸಂಸ್ಥೆ ಹೇಳಿದೆ. ಕಾಲಭೈರವ ಸ್ಫೂರ್ತಿಯಲ್ಲಿ ಈ ಆಟೊನಾಮಸ್ ಕಾಂಬ್ಯಾಟ್ ಏರ್ಕ್ರಾಫ್ಟ್ನ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮಾಡಲಾಗಿದೆ.
ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ತೇಜಸ್ಕಂಡ ಅವರು ಕಾರ್ಯಕ್ರಮವೊಂದರಲ್ಲಿ ಈ ಏರ್ಕ್ರಾಫ್ಟ್ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದಾರೆ. ಯುದ್ಧ ಸಂದರ್ಭದಲ್ಲಿ ಬೇರೆ ದೇಶಗಳ ಮೇಲೆ ಡಿಜಿಟಲ್ ಅವಲಂಬನೆ ಎಷ್ಟು ಅಪಾಯಕಾರಿಯಾಗುತ್ತದೆ, ಹಾಗೂ ಆ ಅವಲಂಬನೆಯನ್ನು ತಪ್ಪಿಸಲು ಪೂರ್ಣ ಸ್ವಂತ ನಿರ್ಮಾಣದ ಶಸ್ತ್ರಾಸ್ತ್ರಗಳು ಎಷ್ಟು ಮುಖ್ಯ ಎಂಬುದನ್ನು ಸುಹಾಸ್ ಹೇಳಿದ್ದಾರೆ.
ಫ್ಲೈಯಿಂಗ್ ವೆಡ್ಜ್ ನಿರ್ಮಿಸಿರುವ ಈ ಪುಟ್ಟ ಕಾಲಭೈರವ ಡ್ರೋನ್ ಯುದ್ಧವಿಮಾನವು 30 ಗಂಟೆಗಳ ಕಾಲ, ಹಾಗೂ 3,000 ಕಿಮೀ ದೂರ ಒಂದೇ ಸಮನೆ ಹಾಡಬಲ್ಲುದು.
ಇದನ್ನೂ ಓದಿ: ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ
ಅಮೆರಿಕದ ಜನರಲ್ ಅಟಾಮಿಕ್ಸ್ ಸಂಸ್ಥೆ ಎಂಕ್ಯೂ-1 ಪ್ರಿಡೇಟರ್ ಮತ್ತು ಇಸ್ರೇಲ್ನ ಸರ್ಚರ್ ಡ್ರೋನ್ ವಿಮಾನಗಳಿಂದ ಕಾಲಭೈರವ ಡ್ರೋನ್ ವಿಮಾನಗಳು ಬಹಳ ಅಗ್ಗದ ಬೆಲೆ ಹೊಂದಿವೆ. ಒಂದು ಪ್ರಿಡೇಟ್ ನಿಯೋಜನೆ ಜಾಗದಲ್ಲಿ ಒಂದು ದೊಡ್ಡ ಕಾಲಭೈರವಗಳ ಪಡೆಯನ್ನೇ ನಿರ್ಮಿಸಬಹುದು. ಹೀಗಾಗಿ, ಯುದ್ಧ ಸಂದರ್ಭದಲ್ಲಿ ಕಾಲಭೈರವ ವಿಮಾನಗಳು ಉತ್ತಮ ದಾಳಿ ಸಂಯೋಜಿಸಲು ಶಕ್ತವಾಗಿರುತ್ತವೆ. ಇದು ಎಫ್ಡಬ್ಲ್ಯುಡಿಎ ಸಂಸ್ಥೆಯ ಸಿಇಒ ಸುಹಾಸ್ ಅವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ