AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ಪತಂಜಲಿ ಫುಡ್ಸ್ ಬೋನಸ್ ಷೇರಿಗೆ ರೆಕಾರ್ಡ್ ಡೇಟ್, ಡಿವಿಡೆಂಡ್ ಡೇಟ್ ಪ್ರಕಟ

Patanjali Foods announces record date for its bonus shares: ಪತಂಜಲಿ ಫುಡ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತಿದೆ. ಇದರ ರೆಕಾರ್ಡ್ ಡೇಟ್ ಅನ್ನು ಇದೀಗ ಪ್ರಕಟಿಸಿದೆ. ಪ್ರತೀ ಒಂದು ಷೇರಿಗೆ ಎರಡು ಬೋನಸ್ ಷೇರುಗಳನ್ನು ನೀಡುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲೇ ಡಿವಿಡೆಂಡ್ ನೀಡಲಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಬೋನಸ್ ಷೇರುಗಳಿಗೆ ರೆಕಾರ್ಡ್ ಡೇಟ್ ನಿಗದಿ ಮಾಡಿದೆ.

Patanjali: ಪತಂಜಲಿ ಫುಡ್ಸ್ ಬೋನಸ್ ಷೇರಿಗೆ ರೆಕಾರ್ಡ್ ಡೇಟ್, ಡಿವಿಡೆಂಡ್ ಡೇಟ್ ಪ್ರಕಟ
ಪತಂಜಲಿ ಫುಡ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2025 | 4:43 PM

Share

ದೇಶದ ಪ್ರಸಿದ್ಧ FMCG ಕಂಪನಿ ಪತಂಜಲಿ ದೀಪಾವಳಿಗೂ ಮುನ್ನ ಷೇರುದಾರರಿಗೆ ಬಂಪರ್ ಉಡುಗೊರೆ ನೀಡಲಿದೆ. ಕಂಪನಿಯು ಹೂಡಿಕೆದಾರರಿಗೆ (Patanjali shareholders) 1 ಷೇರಿನ ಮೇಲೆ 2 ಷೇರುಗಳ ಬೋನಸ್ ನೀಡಲಿದೆ. ಇದಕ್ಕಾಗಿ ರೆಕಾರ್ಡ್ ಡೇಟ್ ಸಹ ಘೋಷಿಸಲಾಗಿದೆ. ಬಾಬಾ ರಾಮದೇವ್ ನೇತೃತ್ವದ ಕಂಪನಿಯಾದ ಪತಂಜಲಿ ಫುಡ್ಸ್ ಲಿಮಿಟೆಡ್ ಸಂಸ್ಥೆ ಬೋನಸ್ ಷೇರುಗಳಿಗಾಗಿ ರೆಕಾರ್ಡ್ ದಿನವನ್ನು 2025ರ ಸೆಪ್ಟೆಂಬರ್ 11ರ ದಿನಾಂಕವನ್ನು ಆಯ್ಕೆ ಮಾಡಿದೆ.

ಪತಂಜಲಿ ಫುಡ್ಸ್ ಲಿಮಿಟೆಡ್ ಪ್ರಸ್ತುತ ಬಿಎಸ್‌ಇಯಲ್ಲಿ ಲಿಸ್ಟ್ ಆಗಿದೆ. ಹೂಡಿಕೆದಾರರಿಗೆ ರೂ. 2 ಮುಖಬೆಲೆಯ ಒಂದು ಷೇರು ಮೇಲೆ 2 ಷೇರುಗಳನ್ನು ಬೋನಸ್ ಆಗಿ ನೀಡಲಾಗುವುದು ಎಂದು ಕಂಪನಿಯು ಇತ್ತೀಚೆಗೆ ಸಲ್ಲಿಸಿದ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ಇದಕ್ಕಾಗಿ ಕಂಪನಿಯು ಮುಂದಿನ ತಿಂಗಳು, ಅಂದರೆ ಸೆಪ್ಟೆಂಬರ್ 11, 2025 ರಂದು ದಾಖಲು ದಿನವಾಗಿ (ರೆಕಾರ್ಡ್ ಡೇಟ್) ನಿಗದಿಪಡಿಸಿದೆ.

ಇದೇ ವೇಳೆ, ಬೋನಸ್ ಷೇರುಗಳನ್ನು ನೀಡುವ ಮೊದಲು ಕಂಪನಿಯು ಲಾಭಾಂಶವನ್ನು (ಡಿವಿಡೆಂಡ್) ಸಹ ನೀಡುತ್ತಿದೆ. ಪತಂಜಲಿ ಇದಕ್ಕಾಗಿ ಸೆಪ್ಟೆಂಬರ್ 3ರ ದಿನಾಂಕವನ್ನು ನಿಗದಿಪಡಿಸಿದೆ. ಬಾಬಾ ರಾಮದೇವ್ ನೇತೃತ್ವದ ಈ ಕಂಪನಿಯು 1 ಷೇರಿಗೆ 2 ರೂ.ಗಳ ಲಾಭಾಂಶವನ್ನು ಸಹ ನೀಡುತ್ತಿದೆ. ಒಂದು ಷೇರಿನ ಅದರ ಮುಖಬೆಲೆ ಶೇ. 100ರಷ್ಟು ಹಣವನ್ನು ಡಿವಿಡೆಂಡ್ ಆಗಿ ನೀಡುತ್ತಿದೆ. ಈ ಹಿಂದೆ, 2024ರಲ್ಲಿ ಈ ಸಂಸ್ಥೆಯು ತನ್ನ ಹೂಡಿಕೆದಾರರಿಗೆ ಎರಡು ಬಾರಿ ಡಿವಿಡೆಂಡ್ ಬಿಡುಗಡೆ ಮಾಡಿತ್ತು. ಮೊದಲು 8 ರೂ.ಗಳ ಲಾಭಾಂಶ ಮತ್ತು ಎರಡನೇ ಬಾರಿಗೆ 14 ರೂ.ಗಳ ಲಾಭಾಂಶವನ್ನು ನೀಡಲಾಯಿತು.

ಇದನ್ನೂ ಓದಿ: ಜುಲೈನಲ್ಲಿ ಷೇರು ಧಮಾಕ ಸೃಷ್ಟಿಸಿರುವ ಪತಂಜಲಿ ಫೂಡ್ಸ್; ಅದರ ತ್ರೈಮಾಸಿಕ ವರದಿ ಎಲ್ಲರ ಚಿತ್ತ

ಪತಂಜಲಿ ಫುಡ್ಸ್ ಕಂಪನಿ ಫಲಿತಾಂಶಗಳು

ಪತಂಜಲಿ ಫುಡ್ಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ. ಕಂಪನಿಯು ಒಟ್ಟು 8,899.70 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 7,177.17 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಕಂಪನಿಯ ಒಟ್ಟು ಲಾಭ 1,259.19 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕಿಂತ 23.81% ಹೆಚ್ಚಾಗಿದೆ. ತೆರಿಗೆ ನಂತರದ ಲಾಭ (ಪಿಎಟಿ) 180.39 ಕೋಟಿ ರೂ.ಗಳಾಗಿದೆ.

ಬೇರೆ ಬೇರೆ ವಿಭಾಗದಿಂದ ಪತಂಜಲಿ ಗಳಿಸಿದ್ದು

  • ಆಹಾರ ಮತ್ತು ಇತರ FMCG ಉತ್ಪನ್ನಗಳಿಂದ 1,660.67 ಕೋಟಿ ರೂ.
  • ಹೋಮ್ ಮತ್ತು ಪರ್ಸನಲ್ ಕೇರ್​ನಿಂದ 639.02 ಕೋಟಿ ರೂ.
  • ಖಾದ್ಯ ತೈಲ ಮಾರಾಟದಿಂದ 6,685.86 ಕೋಟಿ ರೂ ಆದಾಯವನ್ನು ಪತಂಜಲಿ ಫುಡ್ಸ್ ಸಂಸ್ಥೆ ಗಳಿಸಿದೆ.

ಇದನ್ನೂ ಓದಿ: Patanjali-LIC: ಎಲ್​ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ

ಪತಂಜಲಿ ಕಂಪನಿ ಷೇರುಗಳ ಸ್ಥಿತಿ

ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಂಡಿತು. ಮಾರುಕಟ್ಟೆಯ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ 693.86 ಅಂಕಗಳ ಕುಸಿತದೊಂದಿಗೆ 81,306.85 ಕ್ಕೆ ಮುಕ್ತಾಯವಾಯಿತು. ಸೆನ್ಸೆಕ್ಸ್‌ನ ದೊಡ್ಡ ಷೇರುಗಳೂ ಕೂಡ ಸಾಕಷ್ಟು ಮಾರಾಟ ಕಂಡವು. ಈ ಕುಸಿತದ ಪರಿಣಾಮವು ಪತಂಜಲಿ ಫುಡ್ಸ್ ಮೇಲೂ ಬೀರಿತು. ಶುಕ್ರವಾರ ಅದರ ಷೇರುಬೆಲೆ ಶೇ. 0.47ರಷ್ಟು ಇಳಿಕೆ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ