AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್​ನಿಂದ ಕಾಲಭೈರವ ಸಿದ್ಧ: ಇದು ಭಾರತದ ಮೊದಲ ದೇಶೀಯ ನಿರ್ಮಾಣದ MALE ಯುದ್ಧವಿಮಾನ

Flying Wedge Defence and Aerospace builds Kaala Bhairavas: ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ಕಾಲಭೈರವ ಎನ್ನುವ MALE ಕಾಂಬ್ಯಾಟ್ ಡ್ರೋನ್ ವಿಮಾನ ಸಿದ್ಧಗೊಳಿಸಿದೆ. ಈ ಶಕ್ತಿಶಾಲಿ ಸಮರ ವಿಮಾನವು ರಫ್ತಿಗೂ ಸಿದ್ಧವಾಗಿದೆ. ದಕ್ಷಿಣ ಏಷ್ಯನ್ ದೇಶವೊಂದು ಈಗಾಗಲೇ ಈ ಡ್ರೋನ್​ಗೆ ಆರ್ಡರ್ ನೀಡಿದೆ. ಅಮೆರಿಕದ ರೀಪರ್ ಡ್ರೋನ್ ಬೆಲೆ 1,000 ಕೋಟಿ ರೂ ಇದೆ. ಕಾಲಭೈರವಗಳಿಗೆ ಬಹಳ ಕಡಿಮೆ ಬೆಲೆ.

ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್​ನಿಂದ ಕಾಲಭೈರವ ಸಿದ್ಧ: ಇದು ಭಾರತದ ಮೊದಲ ದೇಶೀಯ ನಿರ್ಮಾಣದ MALE ಯುದ್ಧವಿಮಾನ
ಫ್ಲೈಯಿಂಗ್ ವೆಡ್ಜ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2025 | 1:37 PM

Share

ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ ಎಐ ಸಮರಾಸ್ತ್ರಗಳ ಕಂಪನಿ ಎನಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (FWDA- Flying Wedge Defence and Aerospace) ಇದೀಗ ಭಾರತದ ಮೊದಲ ಸ್ವಂತ ನಿರ್ಮಾಣದ ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ವಿಮಾನವನ್ನು ತಯಾರಿಸಿದೆ. MALE ಕಾಂಬ್ಯಾಟ್ ಏರ್ಕ್ರಾಫ್ಟ್ ವರ್ಗಕ್ಕೆ ಸೇರಿದ ಕಾಲಭೈರವ ಯುದ್ಧವಿಮಾನವು (Kaala Bhairava aircraft) ಪೂರ್ಣವಾಗಿ ತಯಾರಾಗಿದ್ದು ರಫ್ತಿಗೂ ಸಿದ್ಧವಾಗಿದೆ ಎಂದು ಎಫ್​ಡಬ್ಲ್ಯುಡಿಎ ಸಂಸ್ಥೆ ಹೇಳಿದೆ. ಕಾಲಭೈರವ ಸ್ಫೂರ್ತಿಯಲ್ಲಿ ಈ ಆಟೊನಾಮಸ್ ಕಾಂಬ್ಯಾಟ್ ಏರ್​ಕ್ರಾಫ್ಟ್​ನ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮಾಡಲಾಗಿದೆ.

ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ತೇಜಸ್​ಕಂಡ ಅವರು ಕಾರ್ಯಕ್ರಮವೊಂದರಲ್ಲಿ ಈ ಏರ್​ಕ್ರಾಫ್ಟ್ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದಾರೆ. ಯುದ್ಧ ಸಂದರ್ಭದಲ್ಲಿ ಬೇರೆ ದೇಶಗಳ ಮೇಲೆ ಡಿಜಿಟಲ್ ಅವಲಂಬನೆ ಎಷ್ಟು ಅಪಾಯಕಾರಿಯಾಗುತ್ತದೆ, ಹಾಗೂ ಆ ಅವಲಂಬನೆಯನ್ನು ತಪ್ಪಿಸಲು ಪೂರ್ಣ ಸ್ವಂತ ನಿರ್ಮಾಣದ ಶಸ್ತ್ರಾಸ್ತ್​ರಗಳು ಎಷ್ಟು ಮುಖ್ಯ ಎಂಬುದನ್ನು ಸುಹಾಸ್ ಹೇಳಿದ್ದಾರೆ.

3,000 ಕಿಮೀವರೆಗೂ ಹಾರಬಲ್ಲ ಯುದ್ಧವಿಮಾನ

ಫ್ಲೈಯಿಂಗ್ ವೆಡ್ಜ್ ನಿರ್ಮಿಸಿರುವ ಈ ಪುಟ್ಟ ಕಾಲಭೈರವ ಡ್ರೋನ್ ಯುದ್ಧವಿಮಾನವು 30 ಗಂಟೆಗಳ ಕಾಲ, ಹಾಗೂ 3,000 ಕಿಮೀ ದೂರ ಒಂದೇ ಸಮನೆ ಹಾಡಬಲ್ಲುದು.

ಇದನ್ನೂ ಓದಿ: ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್​ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ

ಅಮೆರಿಕದ ಜನರಲ್ ಅಟಾಮಿಕ್ಸ್ ಸಂಸ್ಥೆ ಎಂಕ್ಯೂ-1 ಪ್ರಿಡೇಟರ್ ಮತ್ತು ಇಸ್ರೇಲ್​ನ ಸರ್ಚರ್ ಡ್ರೋನ್ ವಿಮಾನಗಳಿಂದ ಕಾಲಭೈರವ ಡ್ರೋನ್ ವಿಮಾನಗಳು ಬಹಳ ಅಗ್ಗದ ಬೆಲೆ ಹೊಂದಿವೆ. ಒಂದು ಪ್ರಿಡೇಟ್ ನಿಯೋಜನೆ ಜಾಗದಲ್ಲಿ ಒಂದು ದೊಡ್ಡ ಕಾಲಭೈರವಗಳ ಪಡೆಯನ್ನೇ ನಿರ್ಮಿಸಬಹುದು. ಹೀಗಾಗಿ, ಯುದ್ಧ ಸಂದರ್ಭದಲ್ಲಿ ಕಾಲಭೈರವ ವಿಮಾನಗಳು ಉತ್ತಮ ದಾಳಿ ಸಂಯೋಜಿಸಲು ಶಕ್ತವಾಗಿರುತ್ತವೆ. ಇದು ಎಫ್​ಡಬ್ಲ್ಯುಡಿಎ ಸಂಸ್ಥೆಯ ಸಿಇಒ ಸುಹಾಸ್ ಅವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ