ಅಮೆರಿಕದ ಏವಾ ಫಾರ್ಮಾ ಕಂಪನಿಯ ಮಾತ್ರೆ ತಯಾರಕಾ ಘಟಕ ಖರೀದಿಸಿದ ಬೆಂಗಳೂರಿನ ಬಯೋಕಾನ್

|

Updated on: Sep 04, 2023 | 10:31 AM

Biocon Buys Eywa Pharma's Manufacturing Facility: ಕಿರಣ್ ಮಜುಮ್ದಾರ್ ಷಾ ಮಾಲಕತ್ವದ ಬಯೋಕಾನ್ ಸಂಸ್ಥೆ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಏವಾ ಫಾರ್ಮಾದ ಮಾತ್ರೆ ತಯಾರಕಾ ಘಟಕವೊಂದನ್ನು 63 ಕೋಟಿ ರುಪಾಯಿಗೆ ಖರೀದಿಸಿದೆ. ಇದರೊಂದಿಗೆ ಬಯೋಕಾನ್ ಸಂಸ್ಥೆ ಒಂದು ವರ್ಷದಲ್ಲಿ 200 ಕೋಟಿ ಮಾತ್ರೆ ಮತ್ತು ಕ್ಯಾಪ್ಸೂಲ್​ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದಂತಾಗುತ್ತದೆ. ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಈ ಖರೀದಿ ಸಂಗತಿಯನ್ನು ಬಯೋಕಾನ್ ತಿಳಿಸಿದೆ.

ಅಮೆರಿಕದ ಏವಾ ಫಾರ್ಮಾ ಕಂಪನಿಯ ಮಾತ್ರೆ ತಯಾರಕಾ ಘಟಕ ಖರೀದಿಸಿದ ಬೆಂಗಳೂರಿನ ಬಯೋಕಾನ್
ಬಯೋಕಾನ್
Follow us on

ನ್ಯೂಜೆರ್ಸಿ, ಸೆಪ್ಟೆಂಬರ್ 4: ಬೆಂಗಳೂರು ಮೂಲದ ಫಾರ್ಮಾ ಕಂಪನಿ ಬಯೋಕಾನ್ ಇದೀಗ ಅಮೆರಿಕದ ಏವಾ ಫಾರ್ಮಾ ಸಂಸ್ಥೆಯ ಘಟಕವೊಂದನ್ನು ಖರೀದಿಸಿದೆ. ಬಯೋಕಾನ್ ಮಾಲಕತ್ವದ ಬಯೋಕಾನ್ ಜೆನೆರಿಕ್ಸ್ (Biocon Generics) 7.7 ಮಿಲಿಯನ್ ಡಾಲರ್ (ಸುಮಾರು 63 ಕೋಟಿ ರುಪಾಯಿ) ಮೊತ್ತಕ್ಕೆ ಏವಾ ಫಾರ್ಮಾದ (Eywa Pharma) ಉತ್ಪಾದನಾ ಘಟಕವನ್ನು ಪಡೆದಿದೆ. ಏವಾ ಫಾರ್ಮಾದ ಈ ಘಟಕ ಅಮೆರಿಕದ ನ್ಯೂಜೆರ್ಸಿಯ ಕ್ರಾನ್​ಬುರಿಯಲ್ಲಿದ್ದು, ಓರಲ್ ಸಾಲಿಡ್ ಡೋಸೇಜ್ ತಯಾರಿಕಾ ಸೌಲಭ್ಯವನ್ನು ಹೊಂದಿದೆ. ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಬಯೋಕಾನ್ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಈ ಡೀಲಿಂಗ್ ಬಳಿಕ ಅಮೆರಿಕದ ಈ ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಬಯೋಕಾನ್ ಜೆನೆರಿಕ್ಸ್​ನ ಆಡಳಿತಕ್ಕೆ ವರ್ಗವಾಗಲಿದ್ದಾರೆ.

ಔಷಧ ಉತ್ಪಾದನೆ ಪ್ರಮಾಣ ಹೆಚ್ಚಳ

ಏವಾ ಫಾರ್ಮಾದ ನ್ಯೂಜೆರ್ಸಿ ಘಟಕದ ಖರೀದಿಯಿಂದ ಬಯೋಕಾನ್​ನ ಔಷಧ ಉತ್ಪಾದನಾ ಸಾಮರ್ಥ್ಯಕ್ಕೆ ಪುಷ್ಟಿ ಸಿಗಲಿದೆ. ಒಂದು ವರ್ಷದಲ್ಲಿ 200 ಕೋಟಿ ಟ್ಯಾಬ್ಲೆಟ್ ಅಥವಾ ಕ್ಯಾಪ್ಸೂಲ್​ಗಳನ್ನು ತಯಾರಿಸುವಷ್ಟು ಮಟ್ಟಕ್ಕೆ ಸಾಮರ್ಥ್ಯ ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು

‘ಎಫ್​ಡಿಎ ಅನುಮೋದಿತ ಘಟಕವೊಂದನ್ನು ಅಮೆರಿಕದಲ್ಲಿ ನಾವು ಖರೀದಿಸಿದ್ದು ಇದೇ ಮೊದಲು. ಬಯೋಕಾನ್​ನ ಈಗಿನ ತಯಾರಿಕಾ ಸಾಮರ್ಥ್ಯಕ್ಕೆ ಇದರಿಂದ ಪುಷ್ಟಿ ಸಿಕ್ಕಂತಾಗುತ್ತದೆ. ಅಮೆರಿಕದಲ್ಲಿ ನಮ್ಮ ಹೆಜ್ಜೆ ಇನ್ನಷ್ಟು ದೃಢಗೊಳ್ಳುತ್ತದೆ’ ಎಂದು ಬಯೋಕಾನ್​ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿದ್ಧಾರ್ಥ್ ಮಿಟ್ಟಲ್ ಹೇಳಿದ್ದಾರೆ.

ಬಯೋಕಾನ್​ನ ಹೊಸ ಉತ್ಪನ್ನಗಳ ಓರಲ್ ಸಾಲಿಡ್ ಡೋಸೇಜ್ ತಯಾರಿಕೆಯ ಗುರಿಯನ್ನು ನಿರೀಕ್ಷೆಗೆ ಮೊದಲೇ ಮುಟ್ಟಲು ಸಾಧ್ಯವಾಗುತ್ತಿದೆ. ಓರಲ್ ಸಾಲಿಡ್ ಡೋಸೇಜ್ ಎಂದರೆ ಮಾತ್ರೆ, ಕ್ಯಾಪ್ಸೂಲ್​ಗಳು. ಏವಾ ಫಾರ್ಮಾದ ಈ ಘಟಕದಲ್ಲಿ ಮಾತ್ರೆ ಮತ್ತು ಕ್ಯಾಪ್ಸೂಲ್​ಗಳನ್ನು ತಯಾರಿಸುವ ಸೌಲಭ್ಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ