ನವದೆಹಲಿ, ನವೆಂಬರ್ 5: ಸರ್ಕಾರಿ ಸ್ವಾಮ್ಯದ ಭಾರತೀಯ ದೂರ ಸಂಚಾರಿ ನಿಗಮ (ಬಿಎಸ್ಎನ್ಎಲ್) ಬಹಳ ವೇಗವಾಗಿ ಕಂಬ್ಯಾಕ್ ಮಾಡುತ್ತಿದೆ. ಒಗ್ಗಟ್ಟಿನಿಂದ ರೀಚಾರ್ಜ್ ದರಗಳನ್ನು ಏರಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಅ ಸಂಸ್ಥೆಗಳಿಗೆ ಬಿಎಸ್ಸೆನ್ನೆಲ್ ಸಖತ್ ಪೈಪೋಟಿ ನೀಡುತ್ತಿದೆ. 5ಜಿಗೆ ಇನ್ನೂ ಇಳಿದಿಲ್ಲವಾದರೂ 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಆಫರ್ ಮಾಡುತ್ತಿರುವ ಬಿಎಸ್ಸೆನ್ನೆಲ್ಗೆ ಈಗ ಅದರ ಅಗ್ಗದ ರೀಚಾರ್ಜ್ ದರಗಳೇ ಟ್ರಂಪ್ ಕಾರ್ಡ್ ಎನಿಸಿವೆ. ಅದರ ಎಲ್ಲಾ ರೀಚಾರ್ಜ್ ದರಗಳೂ ಆಕರ್ಷಕವಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಸಾಕಷ್ಟು ಗ್ರಾಹಕರು ಬಿಎಸ್ಸೆನ್ನೆಲ್ ಕಡೆಗೆ ವಲಸೆ ಹೋಗುವಂತೆ ಮಾಡಿವೆ.
ಬಿಎಸ್ಎನ್ಎಲ್ನ ಜನಪ್ರಿಯ ರೀಚಾರ್ಜ್ ಪ್ಲಾನ್ಗಳಲ್ಲಿ 397 ರೂನದ್ದು ಒಂದು. ಪ್ರತಿಸ್ಪರ್ಧಿ ಕಂಪನಿಗಳು ಇದೇ ಬೆಲೆ ರೀಚಾರ್ಜ್ ದರ ಹೊಂದಿದ್ದರೂ ಅದರ ವ್ಯಾಲಿಡಿಟಿ 28 ದಿನ ಅಥವಾ 30 ದಿನ ಮಾತ್ರವೇ ಇರುವುದು. ಆದರೆ, ಬಿಎಸ್ಸೆನ್ನೆಲ್ನ 397 ರೂ ಪ್ಲಾನ್ ಬರೋಬ್ಬರಿ 150 ದಿನಗಳ ಅವಧಿಯವರೆಗೆ ಇದೆ. ಹೆಚ್ಚೂಕಡಿಮೆ ಐದು ತಿಂಗಳ ಕಾಲ ನೀವು ಸರ್ವಿಸ್ ಪಡೆಯಬಹುದು. ಒಂದು ತಿಂಗಳಿಗೆ ನಿಮಗೆ ಆಗುವ ವೆಚ್ಚ 80 ರೂಗಿಂತಲೂ ಕಡಿಮೆಯೇ.
ಇದನ್ನೂ ಓದಿ: ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?
ಆದರೆ, ಗಮನಿಸಬೇಕಾದ ಸಂಗತಿ ಎಂದರೆ ನಿಮಗೆ 150 ದಿನಗಳ ಕಾಲ ಎಲ್ಲಾ ಸರ್ವಿಸ್ ಲಭ್ಯ ಇರೋದಿಲ್ಲ. ಈ 150 ದಿನ ನಿಮಗೆ ಇನ್ಕಮಿಂಗ್ ಕಾಲ್ಗೆ ಯಾವ ತಡೆಯೂ ಇರುವುದಿಲ್ಲ. ಆದರೆ, 30 ದಿನಗಳಾದ ಬಳಿಕ ಇಂಟರ್ನೆಟ್ ಸ್ಟೀಡ್ 40 ಕೆಬಿಪಿಎಸ್ಗೆ ಇಳಿಯುತ್ತದೆ. ಉಚಿತ ಎಸ್ಸೆಮ್ಮೆಸ್ ಇರೋದಿಲ್ಲ.
ಬಿಎಸ್ಸೆನ್ನೆಲ್ನ 397 ರೂ ರೀಚಾರ್ಜ್ ಪ್ಲಾನ್ 150 ದಿನ ವ್ಯಾಲಿಡಿಟಿ ಇದೆ. ಆದರೆ, ಮೊದಲ 30 ದಿನ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಇರುತ್ತದೆ. ಇನ್ನು, ಮೊದಲ 30 ದಿನಗಳ ಕಾಲ ದಿನಕ್ಕೆ 2 ಜಿಬಿಯಂತೆ 4ಜಿ ಡಾಟಾ ಸೌಲಭ್ಯ ಇರುತ್ತದೆ. 30 ದಿನ ಕಳೆದ ಬಳಿಕ 4ಜಿ ಡಾಟಾ ನಿಂತು ಹೋಗುತ್ತದೆ. 64 ಕೆಬಿಪಿಎಸ್ ಸ್ಪೀಡ್ನ ಡಾಟಾ ಮಾತ್ರ ಸಿಗುತ್ತದೆ. ಬ್ಯಾಕಪ್ಗಾಗಿ ಹೆಚ್ಚುವರಿ ಸಿಮ್ ಇಟ್ಟುಕೊಂಡಿರುವ ವ್ಯಕ್ತಿಗಳಿಗೆ ಈ ಪ್ಲಾನ್ ವರ್ಕೌಟ್ ಆಗುತ್ತದೆ.
ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ಬಿಎಸ್ಸೆನ್ನೆಲ್ ಒಂದು ಲಕ್ಷ ಹೊಸ ಮೊಬೈಲ್ ಟವರ್ಗಳನ್ನು ನಿರ್ಮಿಸುತ್ತಿದೆ. ಇದರಲ್ಲಿ 35,000 ಟವರ್ಗಳ ಸ್ಥಾಪನೆ ಪೂರ್ಣಗೊಂಡು ಕಾರ್ಯಾಚರಣೆಯಲ್ಲಿವೆ. ಟಿಸಿಎಸ್ ನೆರವಿನಿಂದ ಬಿಎಸ್ಸೆನ್ನೆಲ್ ಸದ್ಯ 4ಜಿ ನೆಟ್ವರ್ಕ್ ಅಳವಡಿಸುತ್ತಿದೆ. ಬಹಳ ಶೀಘ್ರದಲ್ಲಿ 5ಜಿ ನೆಟ್ವರ್ಕ್ಗೂ ಅದು ಅಪ್ಗ್ರೇಡ್ ಆಗುತ್ತಿದೆ. ಹಾಗೇನಾದರೂ ಆದಲ್ಲಿ ಜಿಯೋ, ಏರ್ಟೆಲ್ ಮತ್ತು ವಿಐ ಸಂಸ್ಥೆಗಳಿಗೆ ನಡುಕ ಸೃಷ್ಟಿಯಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ