ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

BSNL 4G network: ಸತ್ತೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದಾಗಲೇ ಬಿಎಸ್ಸೆನ್ನೆಲ್ ಫೀನಿಕ್ಸ್​ನಂತೆ ಕಂಬ್ಯಾಕ್ ಮಾಡಿದೆ. 4ಜಿ ನೆಟ್ವರ್ಕ್ ಅನ್ನು ಬಹಳ ಬೇಗ ಅಳವಡಿಸುತ್ತಿದೆ. ಈಗಾಗಲೇ 50,000 ಟವರ್​ಗಳನ್ನು ಸ್ಥಾಪಿಸಿದೆ. ಈ ಪೈಕಿ ಜಿಯೋ, ಏರ್ಟೆಲ್, ವಿಐ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ 5,000 ಟವರ್ ಸ್ಥಾಪಿಸಿದೆ. ಜಿಯೋ, ಏರ್ಟೆಲ್​ನಿಂದ ಸಾಕಷ್ಟು ಗ್ರಾಹಕರು ಬಿಎಸ್ಸೆನ್ನೆಲ್​ಗೆ ವಲಸೆ ಬರುತ್ತಿದ್ದಾರೆ.

ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ಬಿಎಸ್ಸೆನ್ನೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 04, 2024 | 10:53 AM

ನವದೆಹಲಿ, ನವೆಂಬರ್ 4: ಹತ್ತು ವರ್ಷದ ಹಿಂದೆ ಟೆಲಿಕಾಂ ವಲಯಕ್ಕೆ ಜಿಯೋ ಎನ್ನುವ ಬಿರುಗಾಳಿ ಎದ್ದು ಡಿಜಿಟಲ್ ಕ್ರಾಂತಿಯೇ ಸೃಷ್ಟಿಯಾಗಲು ಎಡೆಯಾಗಿತ್ತು. ಈಗ ಅದೇ ರೀತಿಯಲ್ಲಿ ಮಿಂಚಿನ ಸಂಚಾರ ನಡೆಸುವ ಸರದಿ ಬಿಎಸ್ಸೆನ್ನೆಲ್​ನದ್ದು. ದುಬಾರಿ ಡಾಟಾ ಬಿಸಿ ಎದುರಿಸುತ್ತಿರುವ ಮೊಬೈಲ್ ಗ್ರಾಹಕರಿಗೆ ಅಗ್ಗದ ದರಗಳ ಬಿಎಸ್ಸೆನ್ನೆಲ್ ಪರ್ಯಾಯ ಆಯ್ಕೆ ಆಗಿದೆ. ಲಕ್ಷಾಂತರ ಗ್ರಾಹಕರು ಜಿಯೋ, ಏರ್ಟೆಲ್ ತೊರೆದು ಬಿಎಸ್ಸೆನ್ನೆಲ್ ಅಪ್ಪುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಹಳ ಕ್ಷಿಪ್ರ ವೇಗದಲ್ಲಿ 4ಜಿ ನೆಟ್ವರ್ಕ್ ಅಳವಡಿಸುತ್ತಿದೆ.

ಒಂದು ಲಕ್ಷಕ್ಕೂ ಹೆಚ್ಚು 4ಜಿ ಟವರ್​ಗಳನ್ನು ಸ್ಥಾಪಿಸುವ ಗುರಿ ಇಟ್ಟಿರುವ ಬಿಎಸ್ಸೆನ್ನೆಲ್, ಈಗಾಗಲೇ 50,000 ಟವರ್ ಸ್ಥಾಪಿಸಿದೆ. ಇದರಲ್ಲಿ 41,000 ಟವರ್​ಗಳು ಕಾರ್ಯಾಚರಣೆ ಹಂತ ಪ್ರವೇಶಿಸಿವೆ. ಇದೇ ವೇಳೆ, ಬಿಎಸ್ಸೆನ್ನೆಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವ ಟೆಲಿಕಾಂ ಆಪರೇಟರ್​ಗಳ ಉಪಸ್ಥಿತಿಯೇ ಇಲ್ಲದ ರಿಮೋಟ್ ಸ್ಥಳಗಳನ್ನು ಪ್ರವೇಸಿಸುತ್ತಿದೆ. ಇಂಥ ಪ್ರದೇಶಗಳಲ್ಲಿ 5,000 ಟವರ್​ಗಳನ್ನು ಭಾರತೀಯ ದೂರ ಸಂಚಾರ ನಿಗಮವು ಸ್ಥಾಪಿಸಿದೆ.

ಇದನ್ನೂ ಓದಿ: ರಫ್ತು ಮಾರುಕಟ್ಟೆಯಲ್ಲಿ ಭಾರತದ ವೃದ್ಧಿ; ಪೆಟ್ರೋಲಿಯಂ, ಹರಳು ಇತ್ಯಾದಿ ವಸ್ತುಗಳ ಭರ್ಜರಿ ರಫ್ತು

ಭಾರತದಲ್ಲಿ ಶೇ. 95ರಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಕವರೇಜ್ ಇದೆ. ಇನ್ನುಳಿದ ಶೇ. 5ರಷ್ಟು ಪ್ರದೇಶವನ್ನು ಬಿಎಸ್ಸೆನ್ನೆಲ್ ಟಾರ್ಗೆಟ್ ಮಾಡಿದೆ. ಇದರ ಜೊತೆಗೆ ಅದು ತನ್ನ ಅಗ್ಗದ ರೀಚಾರ್ಜ್ ದರಗಳನ್ನು ಕಡಿಮೆ ಮಾಡುವ ಯಾವ ಯೋಜನೆಯೂ ಹಾಕಿಕೊಂಡಿಲ್ಲ. ಇದು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ತಲೆ ನೋವು ತರುವ ಸಂಗತಿ.

ಕಳೆದ ಎರಡು ತಿಂಗಳಲ್ಲಿ ಬಿಎಸ್ಸೆನ್ನೆಲ್ ಸುಮಾರು 55 ಲಕ್ಷ ಹೊಸ ಬಳಕೆದಾರರನ್ನು ಪಡೆದಿದೆ. ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಎನಿಸಿದ ರಿಲಾಯನ್ಸ್ ಜಿಯೋ ಇದೇ ವೇಳೆ 40 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್ಸೆನ್ನೆಲ್​ಗೆ ಸಿಗುತ್ತಿರುವ ಹೊಸ ಗ್ರಾಹಕರಲ್ಲಿ ಹೆಚ್ಚಿನವರು ಜಿಯೋ ಮತ್ತು ಏರ್ಟೆಲ್​ನಿಂದ ವಲಸೆ ಹೋದವರೇ ಆಗಿದ್ದಾರೆ.

ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

ಜಿಯೋ ಮತ್ತು ಏರ್​ಟೆಲ್​ಗೆ ಮತ್ತಷ್ಟು ತಲೆನೋವು ಸಂಗತಿ ಎಂದರೆ ಬಿಎಸ್ಸೆನ್ನೆಲ್​ನ 5ಜಿ ಪ್ಲಾನ್. ಸದ್ಯ ಬಿಎಸ್ಸೆನ್ನೆಲ್ 4ಜಿ ನೆಟ್ವರ್ಕ್ ಅಭಿವೃದ್ಧಿಪಡಿಸುತ್ತಿದೆ. ಜಿಯೋ, ಏರ್ಟೆಲ್ ಮತ್ತು ವಿಐ ಸಂಸ್ಥೆಗಳು 5ಜಿ ಸರ್ವಿಸ್ ಆಫರ್ ಮಾಡುತ್ತಿವೆ. ಅಗಾಧ ವೇಗದ ಇಂಟರ್ನೆಟ್ ಅನ್ನು 5ಜಿ ಒದಗಿಸುತ್ತದೆ. ಹೀಗಾಗಿ, ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಎಣಿಕೆ ಇದೆ. ಆದರೆ, ಬಿಎಸ್ಸೆನ್ನೆಲ್ ಕೂಡ 5ಜಿ ಸರ್ವಿಸ್ ಆರಂಭಿಸಲಿದೆ. ಸ್ಥಳೀಯವಾಗಿ ಅಭಿವೃದ್ಧಿಯಾದ ತಂತ್ರಜ್ಞಾನ ಸಹಾಯದಿಂದ ಬಿಎಸ್ಸೆನ್ನೆಲ್ ತನ್ನ ನೆಟ್ವರ್ಕ್ ಅನ್ನು 5ಜಿಗೆ ಅಪ್​ಗ್ರೇಡ್ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ