ಭಾರತ್ ಬ್ರ್ಯಾಂಡ್ ಎರಡನೇ ಹಂತದ ಸೇಲ್ಸ್ ಆರಂಭ; ಸಬ್ಸಿಡಿ ದರದಲ್ಲಿ ಗೋಧಿಹಿಟ್ಟು ಮತ್ತು ಅಕ್ಕಿ ಮಾರಾಟ

Bharat brand retail sales: ಭಾರತ್ ಬ್ರ್ಯಾಂಡ್ ಎರಡನೇ ಹಂತದ ರೀಟೇಲ್ ಮಾರಾಟ ಆರಂಭವಾಗಿದೆ. ಸದ್ಯ ಗೋಧಿಹಿಟ್ಟು ಮತ್ತು ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ಹೆಸರುಬೇಳೆ, ಕಡಲೆ ಬೇಳೆಯನ್ನೂ ಮಾರುವ ಯೋಜನೆ ಇದೆ. 2023ರ ಅಕ್ಟೋಬರ್​ನಿಂದ 2024ರ ಜೂನ್​ವರೆಗೆ ನಡೆಸಿದ ಮೊದಲ ಹಂತದ ಮಾರಾಟ ಯಶಸ್ವಿಯಾಗಿತ್ತು.

ಭಾರತ್ ಬ್ರ್ಯಾಂಡ್ ಎರಡನೇ ಹಂತದ ಸೇಲ್ಸ್ ಆರಂಭ; ಸಬ್ಸಿಡಿ ದರದಲ್ಲಿ ಗೋಧಿಹಿಟ್ಟು ಮತ್ತು ಅಕ್ಕಿ ಮಾರಾಟ
ಅಕ್ಕಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2024 | 3:14 PM

ನವದೆಹಲಿ, ನವೆಂಬರ್ 5: ಅಗತ್ಯ ಆಹಾರವಸ್ತುಗಳ ಬೆಲೆ ಏರಿಕೆ ಬಿಸಿ ತಾಗದಿರಲು ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಚಿಲ್ಲರೆ ಮಾರಾಟ ಯೋಜನೆ ಕೈಗೊಂಡಿದೆ. 2023ರ ಅಕ್ಟೋಬರ್​ನಲ್ಲಿ ಮೊದಲ ಹಂತದ ರೀಟೇಲ್ ಸೇಲ್ಸ್ ಯೋಜನೆ ಆರಂಭವಾಗಿತ್ತು. ಈಗ ಎರಡನೇ ಹಂತದ ಸಬ್ಸಿಡಿ ಮಾರಾಟ ಆರಂಭಗೊಂಡಿದೆ. ಗೋಧಿ ಹಿಟ್ಟು, ಅಕ್ಕಿ ಮೊದಲಾದ ಆಹಾರವಸ್ತುಗಳನ್ನು ಈ ಎರಡನೇ ಹಂತದಲ್ಲಿ ಸರ್ಕಾರ ಮಾರುತ್ತಿದೆ. ಕಿಲೋಗೆ 30 ರೂನಂತೆ ಐದು ಕಿಲೋ ಗೋಧಿ ಹಿಟ್ಟಿನ ಪ್ಯಾಕೆಟ್​ಗಳು ಖರೀದಿಗೆ ಲಭ್ಯ ಇವೆ. ಹಾಗೆಯೇ, ಕಿಲೋಗೆ 34 ರೂಗಳಂತೆ 10 ಕಿಲೋ ಅಕ್ಕಿ ಚೀಲ ವಿತರಿಸಲಾಗುತ್ತಿದೆ.

ಸರ್ಕಾರದ ವಿವಿಧ ಆಹಾರ ಮಾರಾಟ ಕೇಂದ್ರಗಳ ಮೂಲಕ ಇವುಗಳನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ‘ಗ್ರಾಹಕರಿಗೆ ಅನುಕೂಲ ಮಾಡಲು ಕೈಗೊಂಡಿರುವ ತಾತ್ಕಾಲಿಕ ಯೋಜನೆ ಇದು,’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಇದನ್ನೂ ಓದಿ: ಪಿಂಚಣಿದಾರರೆ ಗಮನಿಸಿ, ಈ ವರ್ಷದ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ ತಿಂಗಳು ಗಡುವು

ಈ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟ ಯೋಜನೆಯಲ್ಲಿ ಕೇಂದ್ರ ಆಹಾರ ನಿಗಮದಿಂದ 3.69 ಲಕ್ಷ ಟನ್ ಗೋಧಿ ಮತ್ತು 2.91 ಲಕ್ಷ ಟನ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇವುಗಳು ಖಾಲಿಯಾಗುವವರೆಗೂ ಸಬ್ಸಿಡಿ ದರದಲ್ಲಿ ಮಾರಾಟ ಮುಂದುವರಿಯಲಿದೆ. ಅದಾದ ಬಳಿಕ ಅಗತ್ಯ ಎನಿಸಿದಲ್ಲಿ ಮತ್ತಷ್ಟು ಗೋದಿ ಮತ್ತು ಅಕ್ಕಿಯನ್ನು ಸೇರಿಸಬಹುದು.

2023ರ ಅಕ್ಟೋಬರ್​ನಿಂದ ಹಿಡಿದು 2024ರ ಜೂನ್​ವರೆಗೆ ಸರ್ಕಾರವು ಭಾರತ್ ಬ್ರ್ಯಾಂಡ್​ನಲ್ಲಿ ಮೊದಲ ಹಂತದ ಸಬ್ಸಿಡಿ ಸೇಲ್ಸ್ ಕೈಗೊಂಡಿತ್ತು. ಆಗ ಗೋಧಿಹಿಟ್ಟನ್ನು ಕಿಲೋಗೆ 27.5 ರೂ ಮತ್ತು ಅಕ್ಕಿಯನ್ನು 29 ರೂಗೆ ಮಾರಾಟ ಮಾಡಿತ್ತು. ಒಂಬತ್ತು ತಿಂಗಳಲ್ಲಿ 15.20 ಲಕ್ಷ ಟನ್​ನ ಗೋಧಿ ಹಿಟ್ಟು, 14.58 ಲಕ್ಷ ಟನ್​ನ ಅಕ್ಕಿಯನ್ನು ವಿತರಿಸಲಾಗಿತ್ತು.

ಇದನ್ನೂ ಓದಿ: ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?

ಈಗ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಸೇಲ್ಸ್​ನಲ್ಲಿ ಗೋಧಿ ಹಿಟ್ಟು, ಅಕ್ಕಿ ಜೊತೆಗೆ ಕಡಲೆಬೇಳೆ, ಹೆಸರುಬೇಳೆಯ ಮಾರಾಟವೂ ಆಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 55ರಿಂದ 60 ರೂ ಇದೆ. ಗೋಧಿ ಹಿಟ್ಟು 45-50 ರೂ, ಕಡಲೆಬೇಳೆ 90-100 ರೂ, ಹೆಸರು ಬೇಳೆ 120-130 ರೂ ಇದೆ. ಸರ್ಕಾರದ ಸಬ್ಸಿಡಿಯಲ್ಲಿ ಅಕ್ಕಿ 34 ರೂ, ಗೋಧಿಹಿಟ್ಟು 30 ರೂ, ಕಡಲೆಬೇಳೆ 70 ರೂ, ಮತ್ತು ಹೆಸರುಬೇಳೆ 107 ರೂಗೆ ಮಾರಾಟವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ