150 ದಿನಗಳ ವ್ಯಾಲಿಡಿಟಿಯ ಬಿಎಸ್ಸೆನ್ನೆಲ್ ರೀಚಾರ್ಜ್ ಪ್ಲಾನ್; ಬೆಲೆ 400 ರೂಗಿಂತ ಕಡಿಮೆ

BSNL Rs 397 recharge plan: ಬಿಎಸ್ಸೆನ್ನೆಲ್​ನ ಎಲ್ಲಾ ರೀಚಾರ್ಜ್ ದರಗಳೂ ಆಕರ್ಷಕವಾಗಿವೆ. ಅವರವರ ಅಗತ್ಯಗಳಿಗೆ ತಕ್ಕಂತೆ ರೀಚಾರ್ಜ್ ಪ್ಲಾನ್​ಗಳನ್ನು ಹೊಂದಿದೆ. ಅದರ 397 ರೂ ರೀಚಾರ್ಜ್ ಪ್ಲಾನ್ 150 ದಿನ ವ್ಯಾಲಿಡಿಟಿ ಹೊಂದಿದೆ. ಮೊದಲ 30 ದಿನ ಅನ್​ಲಿಮಿಟೆಡ್ ವಾಯ್ಸ್ ಕಾಲ್ ಇರುತ್ತದೆ. ದಿನಕ್ಕೆ 2ಜಿಬಿ ಡಾಟಾ ಇರುತ್ತದೆ. ಆದರೆ, 30 ದಿನಗಳ ಬಳಿಕ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ.

150 ದಿನಗಳ ವ್ಯಾಲಿಡಿಟಿಯ ಬಿಎಸ್ಸೆನ್ನೆಲ್ ರೀಚಾರ್ಜ್ ಪ್ಲಾನ್; ಬೆಲೆ 400 ರೂಗಿಂತ ಕಡಿಮೆ
ಬಿಎಸ್ಸೆನ್ನೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2024 | 12:51 PM

ನವದೆಹಲಿ, ನವೆಂಬರ್ 5: ಸರ್ಕಾರಿ ಸ್ವಾಮ್ಯದ ಭಾರತೀಯ ದೂರ ಸಂಚಾರಿ ನಿಗಮ (ಬಿಎಸ್​ಎನ್​ಎಲ್) ಬಹಳ ವೇಗವಾಗಿ ಕಂಬ್ಯಾಕ್ ಮಾಡುತ್ತಿದೆ. ಒಗ್ಗಟ್ಟಿನಿಂದ ರೀಚಾರ್ಜ್ ದರಗಳನ್ನು ಏರಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಅ ಸಂಸ್ಥೆಗಳಿಗೆ ಬಿಎಸ್ಸೆನ್ನೆಲ್ ಸಖತ್ ಪೈಪೋಟಿ ನೀಡುತ್ತಿದೆ. 5ಜಿಗೆ ಇನ್ನೂ ಇಳಿದಿಲ್ಲವಾದರೂ 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಆಫರ್ ಮಾಡುತ್ತಿರುವ ಬಿಎಸ್ಸೆನ್ನೆಲ್​ಗೆ ಈಗ ಅದರ ಅಗ್ಗದ ರೀಚಾರ್ಜ್ ದರಗಳೇ ಟ್ರಂಪ್ ಕಾರ್ಡ್ ಎನಿಸಿವೆ. ಅದರ ಎಲ್ಲಾ ರೀಚಾರ್ಜ್ ದರಗಳೂ ಆಕರ್ಷಕವಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಸಾಕಷ್ಟು ಗ್ರಾಹಕರು ಬಿಎಸ್ಸೆನ್ನೆಲ್ ಕಡೆಗೆ ವಲಸೆ ಹೋಗುವಂತೆ ಮಾಡಿವೆ.

ಬಿಎಸ್ಸೆನ್ನೆಲ್​ನ 397 ರೂ ರೀಚಾರ್ಜ್ ಪ್ಲಾನ್

ಬಿಎಸ್​ಎನ್​ಎಲ್​ನ ಜನಪ್ರಿಯ ರೀಚಾರ್ಜ್ ಪ್ಲಾನ್​ಗಳಲ್ಲಿ 397 ರೂನದ್ದು ಒಂದು. ಪ್ರತಿಸ್ಪರ್ಧಿ ಕಂಪನಿಗಳು ಇದೇ ಬೆಲೆ ರೀಚಾರ್ಜ್ ದರ ಹೊಂದಿದ್ದರೂ ಅದರ ವ್ಯಾಲಿಡಿಟಿ 28 ದಿನ ಅಥವಾ 30 ದಿನ ಮಾತ್ರವೇ ಇರುವುದು. ಆದರೆ, ಬಿಎಸ್ಸೆನ್ನೆಲ್​ನ 397 ರೂ ಪ್ಲಾನ್ ಬರೋಬ್ಬರಿ 150 ದಿನಗಳ ಅವಧಿಯವರೆಗೆ ಇದೆ. ಹೆಚ್ಚೂಕಡಿಮೆ ಐದು ತಿಂಗಳ ಕಾಲ ನೀವು ಸರ್ವಿಸ್ ಪಡೆಯಬಹುದು. ಒಂದು ತಿಂಗಳಿಗೆ ನಿಮಗೆ ಆಗುವ ವೆಚ್ಚ 80 ರೂಗಿಂತಲೂ ಕಡಿಮೆಯೇ.

ಇದನ್ನೂ ಓದಿ: ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?

ಆದರೆ, ಗಮನಿಸಬೇಕಾದ ಸಂಗತಿ ಎಂದರೆ ನಿಮಗೆ 150 ದಿನಗಳ ಕಾಲ ಎಲ್ಲಾ ಸರ್ವಿಸ್ ಲಭ್ಯ ಇರೋದಿಲ್ಲ. ಈ 150 ದಿನ ನಿಮಗೆ ಇನ್ಕಮಿಂಗ್ ಕಾಲ್​ಗೆ ಯಾವ ತಡೆಯೂ ಇರುವುದಿಲ್ಲ. ಆದರೆ, 30 ದಿನಗಳಾದ ಬಳಿಕ ಇಂಟರ್ನೆಟ್ ಸ್ಟೀಡ್ 40 ಕೆಬಿಪಿಎಸ್​ಗೆ ಇಳಿಯುತ್ತದೆ. ಉಚಿತ ಎಸ್ಸೆಮ್ಮೆಸ್ ಇರೋದಿಲ್ಲ.

ಬಿಎಸ್ಸೆನ್ನೆಲ್​ನ 397 ರೂ ರೀಚಾರ್ಜ್ ಪ್ಲಾನ್ 150 ದಿನ ವ್ಯಾಲಿಡಿಟಿ ಇದೆ. ಆದರೆ, ಮೊದಲ 30 ದಿನ ಕಾಲ ಅನ್​ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಇರುತ್ತದೆ. ಇನ್ನು, ಮೊದಲ 30 ದಿನಗಳ ಕಾಲ ದಿನಕ್ಕೆ 2 ಜಿಬಿಯಂತೆ 4ಜಿ ಡಾಟಾ ಸೌಲಭ್ಯ ಇರುತ್ತದೆ. 30 ದಿನ ಕಳೆದ ಬಳಿಕ 4ಜಿ ಡಾಟಾ ನಿಂತು ಹೋಗುತ್ತದೆ. 64 ಕೆಬಿಪಿಎಸ್ ಸ್ಪೀಡ್​ನ ಡಾಟಾ ಮಾತ್ರ ಸಿಗುತ್ತದೆ. ಬ್ಯಾಕಪ್​ಗಾಗಿ ಹೆಚ್ಚುವರಿ ಸಿಮ್ ಇಟ್ಟುಕೊಂಡಿರುವ ವ್ಯಕ್ತಿಗಳಿಗೆ ಈ ಪ್ಲಾನ್ ವರ್ಕೌಟ್ ಆಗುತ್ತದೆ.

ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

ಬಿಎಸ್ಸೆನ್ನೆಲ್ ಒಂದು ಲಕ್ಷ ಹೊಸ ಮೊಬೈಲ್ ಟವರ್​ಗಳನ್ನು ನಿರ್ಮಿಸುತ್ತಿದೆ. ಇದರಲ್ಲಿ 35,000 ಟವರ್​ಗಳ ಸ್ಥಾಪನೆ ಪೂರ್ಣಗೊಂಡು ಕಾರ್ಯಾಚರಣೆಯಲ್ಲಿವೆ. ಟಿಸಿಎಸ್ ನೆರವಿನಿಂದ ಬಿಎಸ್ಸೆನ್ನೆಲ್ ಸದ್ಯ 4ಜಿ ನೆಟ್ವರ್ಕ್ ಅಳವಡಿಸುತ್ತಿದೆ. ಬಹಳ ಶೀಘ್ರದಲ್ಲಿ 5ಜಿ ನೆಟ್ವರ್ಕ್​ಗೂ ಅದು ಅಪ್​ಗ್ರೇಡ್ ಆಗುತ್ತಿದೆ. ಹಾಗೇನಾದರೂ ಆದಲ್ಲಿ ಜಿಯೋ, ಏರ್ಟೆಲ್ ಮತ್ತು ವಿಐ ಸಂಸ್ಥೆಗಳಿಗೆ ನಡುಕ ಸೃಷ್ಟಿಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ