AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು

Rural regional banks merger proposal: ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಲು ಯೋಜಿಸಿದೆ. ದೇಶದಲ್ಲಿರುವ 43 ಗ್ರಾಮೀಣ ಬ್ಯಾಂಕುಗಳನ್ನು 28 ಬ್ಯಾಂಕುಗಳಿಗೆ ವಿಲೀನಗೊಳಿಸಲು ಮುಂದಾಗಿದೆ. ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಎಂಬ ಆಲೋಚನೆಯಲ್ಲಿ ಸರ್ಕಾರವು ವಿಲೀನಕ್ಕೆ ಮುಂದಾಗಿದೆ.

ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು
ಕಾವೇರಿ ಗ್ರಾಮೀಣ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2024 | 5:01 PM

Share

ನವದೆಹಲಿ, ನವೆಂಬರ್ 5: ಭಾರತದಲ್ಲಿ ಈಗ ಮತ್ತೊಂದು ಸುತ್ತಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗಬಹುದು ಎನ್ನಲಾಗುತ್ತಿದೆ. ಪ್ರತಿಯೊಂದು ರಾಜ್ಯದಲ್ಲೂ ಒಂದು ಗ್ರಾಮೀಣ ಬ್ಯಾಂಕ್​ಗೆ ಸಂಖ್ಯೆ ಸೀಮಿತಗೊಳಿಸುವ ಗುರಿ ಇದೆ. ಸದ್ಯ ದೇಶದ ವಿವಿಧೆಡೆ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿದ್ದು, ಅವುಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಸಾಧ್ಯತೆ ಇದೆ. ಸರ್ಕಾರದ ವತಿಯಿಂದ ‘ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್’ ಎನ್ನುವ ಗುರಿಯೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಬಾರ್ಡ್ ಜೊತೆಗೆ ಸರ್ಕಾರ ಸಮಾಲೋಚನೆ ನಡೆಸುತ್ತಿದೆ.

2004-05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು. ಈವರೆಗೆ ಮೂರು ಹಂತಗಳಲ್ಲಿ ಈ ಕೆಲಸ ನಡೆದಿದೆ. 196 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43ಕ್ಕೆ ಇಳಿದಿದೆ. ಈಗ ನಾಲ್ಕನೇ ಸುತ್ತಿನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಬಹುದು.

ಗ್ರಾಮೀಣ ಬ್ಯಾಂಕುಗಳ ವಿಲೀನದಿಂದ ಏನು ಪ್ರಯೋಜನ?

  • ಬ್ಯಾಂಕುಗಳ ವೆಚ್ಚ ಕಡಿಮೆ ಆಗಬಹುದು.
  • ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯ
  • ಬ್ಯಾಂಕ್ ಕಾರ್ಯಾಚರಣೆ ನಿರ್ವಹಣೆ ಹೆಚ್ಚು ಸುಲಭ
  • ಜನರನ್ನು ತಲುಪುವುದು ಹೆಚ್ಚು ಸುಲಭ

ಇದನ್ನೂ ಓದಿ: ಭಾರತ್ ಬ್ರ್ಯಾಂಡ್ ಎರಡನೇ ಹಂತದ ಸೇಲ್ಸ್ ಆರಂಭ; ಸಬ್ಸಿಡಿ ದರದಲ್ಲಿ ಗೋಧಿಹಿಟ್ಟು ಮತ್ತು ಅಕ್ಕಿ ಮಾರಾಟ

ಗ್ರಾಮೀಣ ಬ್ಯಾಂಕುಗಳಲ್ಲಿ ಯಾರದ್ದೆಷ್ಟು ಪಾಲು?

ದೇಶದಲ್ಲಿರುವ ಪ್ರತಿಯೊಂದು ಗ್ರಾಮೀಣ ಬ್ಯಾಂಕುಗಳಲ್ಲಿ ನಿಯಮ ರೀತಿಯಲ್ಲಿ ಪಾಲುದಾರಿಕೆ ಇರುತ್ತದೆ. ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲು ಹೊಂದಿರುತ್ತದೆ. ರಾಜ್ಯ ಸರ್ಕಾರದ ಪಾಲು ಶೇ. 15 ಮಾತ್ರವೇ ಇರುತ್ತದೆ. ಹಾಗೆಯೇ ಪ್ರತಿಯೊಂದು ಗ್ರಾಮೀಣ ಬ್ಯಾಂಕಿಗೂ ಪ್ರಾಯೋಜಿತ ನ್ಯಾಷನಲ್ ಬ್ಯಾಂಕ್ ಇರುತ್ತದೆ. ಈ ಸ್ಪಾನ್ಸರ್ ಬ್ಯಾಂಕ್​ನ ಪಾಲು ಶೇ. 35ರಷ್ಟು ಇರುತ್ತದೆ.

ದೇಶದಲ್ಲಿ 43 ಗ್ರಾಮೀಣ ಬ್ಯಾಂಕುಗಳು

ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿವೆ. 12 ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೂರಲ್ ಬ್ಯಾಂಕ್​ಗಳಿವೆ. ಇಂಥವನ್ನು ಒಂದು ಬ್ಯಾಂಕ್​ಗೆ ವಿಲೀನಗೊಳಿಸಲಾಗುತ್ತದೆ.

ಕರ್ನಾಟಕದಲ್ಲಿ ಮೂರು ಗ್ರಾಮೀಣ ಬ್ಯಾಂಕುಗಳಿವೆ. ಬಳ್ಳಾರಿಯಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಇದೆ. ಮೈಸೂರಿನಲ್ಲಿ ಎಸ್​ಬಿಐ ಪ್ರಾಯೋಜಕತ್ವದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಇದೆ. ಧಾರವಾಡದಲ್ಲಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಇದೆ. ಇದರ ಪ್ರಾಯೋಜಕ ಬ್ಯಾಂಕ್ ಸಿಂಡಿಕೆಟ್ ಬ್ಯಾಂಕ್. ಈ ಮೂರು ಬ್ಯಾಂಕನ್ನು ವಿಲೀನಗೊಳಿಸಿ, ಅದರ ಪ್ರಾಯೋಜಕತ್ವವನ್ನು ಎಸ್​ಬಿಐ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಈ ಮೂರರಲ್ಲಿ ಒಂದಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: Life Certificate: ಪಿಂಚಣಿದಾರರೆ ಗಮನಿಸಿ, ಈ ವರ್ಷದ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ ತಿಂಗಳು ಗಡುವು

ಆಂಧ್ರದಲ್ಲಿ ನಾಲ್ಕು ಗ್ರಾಮೀಣ ಬ್ಯಾಂಕ್ ಇದ್ದು ಅವನ್ನು ವಿಲೀನಗೊಳಿಸಿ ಸಿಂಡಿಕೇಟ್ ಬ್ಯಾಂಕ್ ಅಡಿಗೆ ತರಬೇಕು ಎನ್ನುವ ಪ್ಲಾನ್ ಇದೆ. ಪಶ್ಚಿಮ ಬಂಗಾಳದಲ್ಲಿರುವ ಮೂರು ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಿ ಪಿಎನ್​ಬಿ ಅಡಿಗೆ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್