Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ

|

Updated on: Oct 08, 2023 | 11:34 AM

ಕೆಲಸಕ್ಕೆ ಹೋಗಿ ಅವರಿವರ ಬಳಿ ದುಡಿಯುವುದಕ್ಕಿಂತ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರಬಹುದು. ಆದರೆ, ಏನು ಮಾಡಬೇಕು ಎಂದು ತೋಚದೇ ಸುಮ್ಮನಾಗುವವರೇ ಅಧಿಕ. ಕೇವಲ 10,000 ರೂ ಬಂಡವಾಳ ಇದ್ದರೂ ನಮ್ಮದೇ ಆದಾಯ ಮೂಲ ಸೃಷ್ಟಿಸಿಕೊಳ್ಳಬಹುದು. ಮೊದಲಿಗೆ ನಿಮ್ಮ ಆಸಕ್ತಿ, ಪ್ರತಿಭೆಯನ್ನು ನೀವೇ ಗುರುತಿಸಿದರೆ ಆಗ ಸ್ವಂತ ಬಿಸಿನೆಸ್ ಮಾರ್ಗ ಹುಡುಕುವುದು ಸುಲಭವಾಗುತ್ತದೆ.

Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ
ಸ್ವಂತ ಬಿಸಿನೆಸ್
Follow us on

ಕೆಲಸಕ್ಕೆ ಹೋಗಿ ಅವರಿವರ ಬಳಿ ದುಡಿಯುವುದಕ್ಕಿಂತ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರಬಹುದು. ಆದರೆ, ಏನು ಮಾಡಬೇಕು ಎಂದು ತೋಚದೇ ಸುಮ್ಮನಾಗುವವರೇ ಅಧಿಕ. ಕೈಯಲ್ಲಿ ಹೆಚ್ಚು ಬಂಡವಾಳ (low investment) ಇಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಸುಮ್ಮನಾಗುವವರೂ ಉಂಟು. ಕೋಟ್ಯಂತರ ರೂ ಬಂಡವಾಳ ಇದ್ದರೆ ಭರ್ಜರಿ ಬಿಸಿನೆಸ್ ಮಾಡಬಹುದು. ಕೈಯಲ್ಲಿ ಹಣ ಇಲ್ಲದೇ ಶುರು ಮಾಡಬಹುದಾದ ಸ್ವಂತ ಬಿಸಿನೆಸ್​ಗಳೂ ಹಲವುಂಟು.

ಕೇವಲ 10,000 ರೂ ಬಂಡವಾಳ ಇದ್ದರೂ ನಮ್ಮದೇ ಆದಾಯ ಮೂಲ ಸೃಷ್ಟಿಸಿಕೊಳ್ಳಬಹುದು. ಮೊದಲಿಗೆ ನಿಮ್ಮ ಆಸಕ್ತಿ, ಪ್ರತಿಭೆಯನ್ನು ನೀವೇ ಗುರುತಿಸಿದರೆ ಆಗ ಸ್ವಂತ ಬಿಸಿನೆಸ್ ಮಾರ್ಗ ಹುಡುಕುವುದು ಸುಲಭವಾಗುತ್ತದೆ. ಹತ್ತು ಸಾವಿರ ರೂ ಹಣದಲ್ಲಿ ಮಾಡಬಹುದಾದ ಹಲವು ಬಿಸೆನೆಸ್​ಗಳಲ್ಲಿ ಕೆಲ ಐಡಿಯಾ ಇಲ್ಲಿವೆ…

ಟಿಫನ್ ಸರ್ವಿಸ್

ನಿಮಗೆ ಅಡುಗೆ ಕಲೆ ಸಿದ್ಧಿಸಿದ್ದರೆ ಟಿಫನ್ ಸರ್ವಿಸ್ ಆರಂಭಿಸಬಹುದು. ಸಾಕಷ್ಟು ಜನರಿಗೆ ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿ ಸರಿಯಾಗಿ ಆರೋಗ್ಯಯುತ ರುಚಿಕರ ತಿಂಡಿ ಸಿಗುವುದಿಲ್ಲ. ನೀವದನ್ನು ಒದಗಿಸುವುದಾದರೆ ಒಳ್ಳೆಯ ಬಿಸಿನೆಸ್ ಆಗುತ್ತದೆ. ನಿಮ್ಮ ಪ್ರದೇಶದ ಸುತ್ತಮುತ್ತ ಒಂದಷ್ಟು ಪ್ರಚಾರ ಮಾಡಿಕೊಂಡರೆ ಗ್ರಾಹಕರು ಸುಲಭವಾಗಿ ಸಿಗುತ್ತಾರೆ.

ಇದನ್ನೂ ಓದಿ: ಗ್ರಾಮೀಣ ಮಹಿಳಾ ಸಂಘಗಳ ಉತ್ಪನ್ನಗಳಿಗೆ ಆನ್‌ಲೈನ್ ಮಾರ್ಕೆಟ್ : ಸಂಜೀವಿನಿ ಪೋರ್ಟಲ್ ಮೂಲಕ ಉತ್ಪನ್ನಗಳ ಮಾರಾಟ

ಉಪ್ಪಿನಕಾಯಿ, ಚಟ್ನಿಪುಡಿ, ಕುರುಕಲು ತಿಂಡಿಗಳ ಬಿಸಿನೆಸ್

ಮನೆಯಲ್ಲೇ ಮಾಡಿದ ಕುರುಕಲು ತಿಂಡಿಗಳು, ಉಪ್ಪಿನಕಾಯಿ, ಚಟ್ನಿಪುಡಿ, ಚಕ್ಕುಳಿ, ಪುಳಿಯೋಗರೆ ಗೊಜ್ಜು ಇತ್ಯಾದಿಗಳಿಗೆ ಬಹಳ ಬೇಡಿಕೆಗಳುಂಟು. ಆರಂಭದಲ್ಲಿ ನಿಮ್ಮ ಪ್ರದೇಶದ ಸುತ್ತ ಪ್ರಚಾರ ಮಾಡಬೇಕಾಗಬಹುದು. ನಿಮ್ಮ ತಿಂಡಿ ರುಚಿ ಚೆನ್ನಾಗಿದ್ದರೆ ಗ್ರಾಹಕರ ಸಂಖ್ಯೆ ಬೆಳೆಯುತ್ತದೆ.

ಸೋಷಿಯಲ್ ಮೀಡಿಯಾ

ಇವತ್ತು ಫೇಸ್ಬುಕ್, ಯೂಟ್ಯೂಬ್, ಇನ್ಸ್​ಟಾಗ್ರಾಮ್​ಗಳಿಂದ ಹೇರಳ ಹಣ ಸಂಪಾದಿಸುವವರಿದ್ದಾರೆ. ಅಡುಗೆಯೋ, ಹಾಸ್ಯವೋ, ಚಾರಣವೋ, ನೀತಿ ಬೋಧನೆಯೋ ಏನಾದರೂ ಸರಿ ನಿಮಗೆ ವಿಶೇಷ ಪರಿಣಿತಿ ಅಥವಾ ಆಸಕ್ತಿ ಇದ್ದರೆ ಅದರ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದರೆ ಅದರಿಂದ ಆದಾಯ ಮಾಡಬಹುದು.

ಇದನ್ನೂ ಓದಿ: ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ

ಯೋಗ ತರಗತಿ

ಮನಸು ಮತ್ತು ದೇಹದ ಆರೋಗ್ಯಕ್ಕೆ ಅವಶ್ಯವಾಗಿರುವ ಯೋಗಾಸನ ನಿಮಗೆ ಗೊತ್ತಿದ್ದರೆ ಸಂಪಾದನೆಗೆ ಬಳಸಬಹುದು. ನಿಮ್ಮದೇ ಯೋಗ ಶಾಲೆ ಅಥವಾ ಯೋಗ ಫಿಟ್ನೆಸ್ ಸೆಂಟರ್ ತೆರೆಯಬಹುದು. ಅಥವಾ ಬೇರೆಡೆ ಯೋಗ ಇನ್ಸ್​ಟ್ರಕ್ಟರ್ ಆಗಿ ಕೆಲಸ ಮಾಡಬಹುದ. ಶಾಲೆಗಳಲ್ಲೂ ಯೋಗ ಟೀಚರ್ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ