ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್

Uday Kotak Speaks: ‘ಹಲವು ಹೂವುಗಳು ಅರಳಬೇಕು. ಭಾರತದ ಹಣೆಬರಹವನ್ನು ಕೆಲವೇ ಕಂಪನಿಗಳು ಬರೆಯಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ. ಹಲವು ವಿಜೇತರು ಇರುವ ವಿಸ್ತೃತ ತಳಹದಿಯ ಪ್ರಗತಿ ನಮಗೆ ಬೇಕು...’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ಸಂಸ್ಥಾಪಕ ಹಾಗು ಮಾಜಿ ಸಿಇಒ ಉದಯ್ ಕೋಟಕ್ ಹೇಳಿದ್ದು, ಕೆಲವೇ ಉದ್ಯಮಸಂಸ್ಥೆಗಳು ಭಾರತದ ಹಣೆಬರಹ ಬರೆಯುವಂತಾಗಬಾರದು. ಹಲವು ವಿಜೇತರು ಇರುವಂತಹ ವಿಸ್ತೃತ ತಳಹದಿಯ ಪ್ರಗತಿ ನಮ್ಮದಾಗಬೇಕು ಎಂದಿದ್ದಾರೆ.

ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್
ಉದಯ್ ಕೋಟಕ್
Follow us
|

Updated on: Oct 08, 2023 | 2:07 PM

ನವದೆಹಲಿ, ಅಕ್ಟೋಬರ್ 8: ಭಾರತದ ಆರ್ಥಿಕ ಯಶೋಗಾಥೆಯಲ್ಲಿ ಕೆಲವೇ ಉದ್ಯಮಿಗಳು ಮತ್ತು ಸಂಸ್ಥೆಗಳು ಭಾಗೀದಾರರಾಗಿದ್ದಾರೆ ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ಸಂಸ್ಥಾಪಕ ಉದಯ್ ಕೋಟಕ್ (Uday Kotak) ಆತಂಕ ವ್ಯಕ್ತಪಡಿಸಿದ್ದಾರೆ. ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಉದಯ್ ಕೋಟಕ್, ಕೆಲವೇ ಉದ್ಯಮಸಂಸ್ಥೆಗಳು ಭಾರತದ ಹಣೆಬರಹ ಬರೆಯುವಂತಾಗಬಾರದು. ಹಲವು ವಿಜೇತರು ಇರುವಂತಹ ವಿಸ್ತೃತ ತಳಹದಿಯ ಪ್ರಗತಿಯ ಗುರಿ ಇರಬೇಕು ಎಂದು ಸಲಹೆ ನೀಡಿದ್ದಾರೆ.

‘ಹಲವು ಹೂವುಗಳು ಅರಳಬೇಕು. ಭಾರತದ ಹಣೆಬರಹವನ್ನು ಕೆಲವೇ ಕಂಪನಿಗಳು ಬರೆಯಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ. ಹಲವು ವಿಜೇತರು ಇರುವ ವಿಸ್ತೃತ ತಳಹದಿಯ ಪ್ರಗತಿ ನಮಗೆ ಬೇಕು…

‘ಕೋಟ್ಯಂತರ ಮಂದಿಯನ್ನು ಬಡತನದ ಕೂಪದಿಂದ ಹೊರತರಬೇಕಾದರೆ ಆರ್ಥಿಕತೆ ಬಹಳ ವೇಗವಾಗಿ ಹಿಗ್ಗಬೇಕು. ದೇಶದ ಆರ್ಥಿಕತೆ ಶೇ. 8ರಿಂದ 9ರಷ್ಟು ಬೆಳವಣಿಗೆ ಹೊಂದುವಂತಾಗಬೇಕು’ ಎಂದು ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್ ಹೇಳಿದ್ದಾರೆ.

ಇದನ್ನೂ ಓದಿ: Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ

ಕೆಲವೇ ಸಂಸ್ಥೆಗಳು ಉದ್ಯಮ ಪ್ರಪಂಚವನ್ನು ಆಳುತ್ತಿರುವ ಬಗ್ಗೆ ಉದಯ್ ಕೋಟಕ್ ಆತಂಕ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಕಳೆದ ವಾರ ನಡೆದ ಇಂಡಿಯಾ ಟುಡೇ ಕಾಂಕ್ಲೇವ್ 2023 ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ಅವರು ಈ ಬಗ್ಗೆ ಮಾತನಾಡಿದ್ದರು.

ಕೆಲವರ ಕೈಯಲ್ಲಿ ಬಿಸಿನೆಸ್ ಶಕ್ತಿ ಕೇಂದ್ರೀಕೃತವಾಗುತ್ತಿದೆ. ಕಿರು ಅವಧಿಗೆ ಇದು ಫಲ ಕೊಡಬಹುದಾದರೂ ದೀರ್ಘಾವಧಿಯಲ್ಲಿ ಈ ಶಕ್ತಿ ಸಂಚಯನವಾಗಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳು ಬೆಳೆವಣಿಗೆ ಹೊಂದಬೇಕು ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದರು.

ತಮ್ಮ ಅಭಿಪ್ರಾಯಗಳನ್ನು ಪುಷ್ಟೀಕರಿಸಲು ಅವರು ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಥಿತಿಯನ್ನು ಉಲ್ಲೇಖಿಸಿದರು.

ಇದನ್ನೂ ಓದಿ: ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್

‘ಟೆಲಿಕಾಂ ವಲಯವನ್ನೇ ತೆಗೆದುಕೊಳ್ಳಿ, ಐದು ವರ್ಷಗಳ ಹಿಂದೆ 13 ಸಂಸ್ಥೆಗಳಿದ್ದವು. ಈಗ ಎರಡೂವರೆ ಮಾತ್ರವೇ ಇರೋದು. ಉಕ್ಕು ಕ್ಷೇತ್ರದಲ್ಲಿ ಎರಡು ದೊಡ್ಡ ಸಂಸ್ಥೆಗಳು ಹಾಗೂ ಬಹಳಷ್ಟು ಸಣ್ಣ ಸಂಸ್ಥೆಗಳಿವೆ’ ಎಂದು ಹೇಳಿದ ಉದಯ್ ಕೋಟಕ್, ಕೇಂದ್ರ ಸರ್ಕಾರದ ನೀತಿಗಳು ಹೆಚ್ಚೆಚ್ಚು ಹೂವುಗಳು ಅರಳಲು ಅನುವಾಗುವಂತಹ ವಾತಾವರಣ ನಿರ್ಮಿಸುವಂತಿರಬೇಕು ಎಂದು ಸಲಹೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು