Extra Income: ಹಣದುಬ್ಬರದ ನಡುವೆ ಹೆಚ್ಚುವರಿ ಆದಾಯ ಗಳಿಸುವುದು ಹೇಗೆ? ಈ ಸಿಂಪಲ್ ಟಿಪ್ಸ್ ನಿಮಗಾಗಿ
ಜಾಗತಿಕ ಹಣದುಬ್ಬರದ ನಡುವೆ ನೀವು ಕೆಲವೊಂದು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಇದು ನಿಮ್ಮ ವೈದ್ಯಕೀಯ ವೆಚ್ಚ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಸಹಾಯಕ್ಕೆ ಬರಲಿದೆ.
ಜಾಗತಿಕ ಹಣದುಬ್ಬರದ ಒತ್ತಡಗಳು ಜನರಲ್ಲಿ ತಲೆನೋವನ್ನು ಸೃಷ್ಟಿಸಿವೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಹಣಕಾಸನ್ನು ಸರಿಯಾಗಿ ಹೊಂದಿಸುವುದು ಮುಖ್ಯವಾಗಿರುತ್ತದೆ. ಹಣದುಬ್ಬರದ ಸಂದರ್ಭದಲ್ಲಿ ವಸ್ತುಗಳ ಬೆಲೆಗಳು ಕೈ ಸುಡುವಂತಿರುತ್ತದೆ. ಹೀಗಾಗಿ ತೀರಾ ಅಗತ್ಯ ಬಿದ್ದಾಗ ನಿಮ್ಮ ದೈನಂದಿನ ಖರ್ಚುಗಳನ್ನು ಪೂರೈಸಲು ಜೇಬಿನಲ್ಲಿರುವ ಹಣ ಸಾಲದೆಂಬಂತಾಗುತ್ತದೆ. ಹೀಗಾಗಿ ನಿಮ್ಮ ಕನಸುಗಳು ಮತ್ತು ಆಸೆಗಳನ್ನು ಪೂರೈಸಲು ನೀವು ಈಗಿಂದೀಗಲೇ ನಿಬಂಧನೆಗಳನ್ನು ಮಾಡುವುದು ಮುಖ್ಯ, ನೀವು ಈಗ ಯುವಕರಾಗಿದ್ದರೆ, ಬಿಸ ರಕ್ತದ ಮೈಯನ್ನು ಹೊಂದಿದ್ದು ಹೆಚ್ಚುವರಿ ಆದಾಯ ಗಳಿಸಲು ಯೋಜನೆ ಹಾಕುತ್ತಿದ್ದರೆ ಈ ಸಲಹೆಗಳನ್ನು ಅನುಸರಿಸಬಹುದು.
ತರಬೇತಿ ಕೇಂದ್ರ: ನೀವು ಉತ್ತಮ ಶಿಕ್ಷಣ ಪಡೆದಿದ್ದೀರಿ ಎಂದಾದರೆ ಮನೆಯಲ್ಲೇ ಮಕ್ಕಳಿಗೆ ತರಬೇತಿ ನೀಡಬಹುದು, ಬೆಂಗಳೂರಿನಂತಹ ನಗರಗಳಲ್ಲಿ ನೀವು ತರಬೇತಿ ಕೇಂದ್ರವನ್ನು ಹಾಕುತ್ತೀರಿ ಎಂದಾದರೆ ಉತ್ತಮ ಆದಾಯವನ್ನು ಗಳಿಸಬಹುದು. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತರಬೇತಿಯನ್ನು ನೀಡಬಹುದು. ನೀವು ಕಾಲೇಜುಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಅಥವಾ ವಿದ್ಯಾರ್ಥಿಗಳನ್ನು ನಿಮ್ಮತ್ತ ಸೆಳೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದಾದರೂ ಒಮ್ಮೆ ನೀವು ನಿಮ್ಮ ನೆಲೆಯನ್ನು ಸ್ಥಾಪಿಸಿದ್ದೇ ಆದಲ್ಲಿ ಭರ್ಜರಿ ಆದಾಯವನ್ನು ಗಳಿಸಬಹುದು.
ಷೇರುಗಳಲ್ಲಿ ಹೂಡಿಕೆ ಮಾಡುವುದು: ನೀವು ದೀರ್ಘಾವಧಿಯಲ್ಲಿ ಹಣವನ್ನು ಸಂಗ್ರಹಿಸಲು ಬಯಸುತ್ತಿದ್ದರೆ ಷೇರುಗಳಲ್ಲಿ ಹೂಡಿಕೆ ಮಾಡುವ ಪ್ರಯತ್ನ ನಡೆಸಬಹುದು. ಷೇರು ಕಂಪನಿಯ ಷೇರುಗಳನ್ನು ಖರೀದಿಸಿದರೆ ಬೆಲೆಗಳು ಮೇಲಕ್ಕೆ ಚಲಿಸುವಾಗ ಲಾಭಾಂಶದ ರೂಪದಲ್ಲಿ ಹಣವನ್ನು ಪಾವತಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೀವು ಹೂಡಿಕೆ ಮಾಡುವ ಮೊದಲು ಹೂಡಿಕೆ ಮಾಡಲು ಇಚ್ಚಿಸುವ ಕಂಪನಿಯ ಅಥವಾ ನಿರ್ದಿಷ್ಟ ವಲಯದ ಬೆಳವಣಿಗೆಯ ನಿರೀಕ್ಷೆಗಳನ್ನು ವಿಶ್ಲೇಷಿಸುವುದು ಮುಖ್ಯವಾಗಿರುತ್ತದೆ. ಉತ್ತಮ ಕಂಪನಿಯಾಗಿದ್ದಲ್ಲಿ ಅಥವಾ ಷೇರು ಲಾಭಗಳನ್ನು ನೋಡಿಕೊಂಡು ಹೂಡಿಕೆ ಮಾಡಿ.
ಬಾಡಿಗೆ ಆದಾಯ: ನಿಮ್ಮ ಪೋಷಕರು ಅಥವಾ ಹಿರಿಯರು ಮಾಡಿದ್ದ ಕಟ್ಟಡ ಇದ್ದರೆ ಅದನ್ನು ಬಾಡಿಗೆಗೆ ನೀಡಿದರೆ ಬೇರೊಂದು ಕೆಲಸದ ನಡುವೆ ಬಾಡಿಗೆ ಆದಾಯವೂ ನಿಮ್ಮ ನಿತ್ಯದ ಆದಾಯದಲ್ಲಿ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ. ಇದು ನಿಮ್ಮ ಆರ್ಥಿಕ ಭದ್ರತೆಯ ಉತ್ತಮ ಮೂಲವಾಗಿದ್ದು, ಇದನ್ನ ನಿಮ್ಮ ಮುಂದಿನ ಪೀಳಿಗೆಗೂ ಒಪ್ಪಿಸಬಹುದು.
ಸ್ವತಂತ್ರ ಕೆಲಸ: ಈ ರೀತಿಯ ಕೆಲಸವು ನಿಮ್ಮ ನಿಯಮಿತ ಕೆಲಸದಷ್ಟು ಸಮಯವನ್ನು ಒಳಗೊಂಡಿರುವುದಿಲ್ಲ. ಅಂದರೆ ಸ್ವತಂತ್ರ ಕೆಲಸಕ್ಕೆ ನಿಮ್ಮ ವಾರಾಂತ್ಯವನ್ನು ಮೀಸಲಿಡಬೇಕಾಗುತ್ತದೆ ಅಥವಾ ದೈನಂದಿನ ವೇಳಾಪಟ್ಟಿಯಲ್ಲಿ ಅದನ್ನು ಸೇರಿಸಿಕೊಳ್ಳಬಹುದು. ಕೆಲಸವು ನಿಮ್ಮ ಸ್ವಂತ ಕ್ಷೇತ್ರಕ್ಕೆ ಅಥವಾ ನೀವು ನಿಜವಾಗಿಯೂ ಆಸಕ್ತಿ ಹೊಂದಿರುವ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬಹುದು. ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ನಡೆಸಬಹುದಾದ ಯೋಗ, ಅಡುಗೆ, ಕೋಡಿಂಗ್ ಅಥವಾ ಗಿಟಾರ್ ತರಗತಿಗಳನ್ನು ನೀವು ತೆಗೆದುಕೊಳ್ಳಬಹುದು. ಮುಂದೆ ಇದು ಉಪಯೋಗಕ್ಕೆ ಬರಬಹುದು.
ನಿಮ್ಮ ಸ್ವಂತ ಬ್ಲಾಗ್ ಅಥವಾ ಯುಟ್ಯೂಬ್ ಚಾನೆಲ್ ಅನ್ನು ರಚಿಸಿ: ನೀವು ನಿಮ್ಮ ಹೆಚ್ಚಿನ ಬಿಡುವಿನ ಸಮಯದ ವೇಳೆ ಸಾಮಾಜಿಕ ಜಾಲತಾಣಕ್ಕೆ ಭೇಟಿಕೊಟ್ಟರೆ ಒಂದಷ್ಟು ರೀಲ್ಸ್ಗಳನ್ನು, ವಿಡಿಯೋಗಳನ್ನು ಕಾಣಬಹುದು. ಅದೇ ರೀತಿಯಲ್ಲಿ ನೀವೂ ಕೂಡ ಒಂದು ಬ್ಲಾಗ್ ಅಥವಾ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಬಹುದು. ಒಂದೊಮ್ಮೆ ನೀವು ಹೆಚ್ಚು ವೀಕ್ಷಣೆಗಳನ್ನು ಪಡೆದರೆ ಜಾಹೀರಾತುಗಳು ಸೇರಿದಂತೆ ಇನ್ನಿತರ ಕಡೆಗಳಿಂದ ಆದಾಯ ನಿಮ್ಮನ್ನು ಅರಸಿಕೊಂಡು ಬರಲಿದೆ. ನೀವು ಸೃಜನಶೀಲರಾಗಿದ್ದರೆ, ನಿಮಗೆ ಆಸಕ್ತಿಯಿರುವ ವಿಷಯದ ಕುರಿತು ನಿಮ್ಮ ಸ್ವಂತ ಯುಟ್ಯೂಬ್ ಚಾನೆಲ್ ಅನ್ನು ನೀವು ಪ್ರಾರಂಭಿಸಬಹುದು. ಚಾನೆಲ್ ಪ್ರಾರಂಭಿಸುವ ಮುನ್ನ ಹೆಚ್ಚು ಅನುಯಾಯಿಗಳನ್ನು ಪಡೆಯುವಂತೆ ಮಾಡುವ ವಿಷಯಗಳನ್ನೇ ಮುಂದಿಟ್ಟುಕೊಂಡು ಪ್ರಸ್ತುತಪಡಿಸಬೇಕಾಗುತ್ತದೆ.
ಕಾರು ಜಾಹೀರಾತು: ಈ ಪರಿಕಲ್ಪನೆಯು ಇನ್ನೂ ದೇಶಾದ್ಯಂತ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ ಹೆಚ್ಚುವರಿ ಆದಾಯವನ್ನು ಗಳಿಸಲು ಇದು ಉತ್ತಮ ಆಯ್ಕೆಯಾಗಿದೆ. ನೀವು ಮಾಡಬೇಕಾಗಿರುವುದು ಕಾರು ಜಾಹೀರಾತು ಏಜೆನ್ಸಿಯನ್ನು ಸಂಪರ್ಕಿಸುವುದು (ಅವರಲ್ಲಿ ಅನೇಕರು ತಮ್ಮ ವೆಬ್‌ಸೈಟ್‌ಗಳನ್ನು ಹೊಂದಿದ್ದಾರೆ) ಮತ್ತು ಒಪ್ಪಂದದ ಪರಸ್ಪರ ಸ್ವೀಕಾರಾರ್ಹ ನಿಯಮಗಳು ಮತ್ತು ಷರತ್ತುಗಳನ್ನು ಲೆಕ್ಕಾಚಾರ ಮಾಡಬೇಕು. ನಿಮ್ಮ ಕಾರಿಗೆ ಯಾವುದಾದರೊಂದು ಉತ್ಪನ್ನದ ಜಾಹೀರಾತುಗಳನ್ನು ಹಾಕಿ ನೀವು ರಸ್ತೆಗಳಲ್ಲಿ ಚಾಲನೆ ಮಾಡಬಹುದು. ಇದಕ್ಕಾಗಿ ಏಜೆನ್ಸಿಗಳು ನಿಮಗೆ ಹಣ ನೀಡುತ್ತಾರೆ.
ಆನ್ಲೈನ್ ವ್ಯಾಪಾರ: ನೀವು ಬರವಣಿಗೆಯಲ್ಲಿ ಉತ್ಸಾಹ ಹೊಂದಿದ್ದೀರಾ? ಸ್ವತಂತ್ರ ಯೋಜನೆಗಳನ್ನು ಏಕೆ ತೆಗೆದುಕೊಳ್ಳಬಾರದು? ಎಂಬುದನ್ನು ಯೋಚಿಸಿ. ನೀವು ಉತ್ತಮ ವರ್ಣಚಿತ್ರಕಾರರಾಗಿದ್ದರೆ ಅಥವಾ ಅದ್ಭುತವಾದ ಮೇಣದಬತ್ತಿಗಳು, ಮನೆಯಲ್ಲಿ ಆಭರಣಗಳು, ಚಾಕೊಲೇಟ್‌ಗಳು ಅಥವಾ ಇದೇ ರೀತಿಯ ರೇಖೆಗಳಲ್ಲಿ ಏನನ್ನಾದರೂ ಮಾಡಬಹುದೇ? ನಿಮ್ಮ ವೇಳಾಪಟ್ಟಿಯಿಂದ ಸ್ವಲ್ಪ ಹೆಚ್ಚುವರಿ ಸಮಯವನ್ನು ಇದಕ್ಕಾಗಿ ಮೀಸಲಿಟ್ಟರೆ ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ನೀವು ಆಸಕ್ತಿ ಹೊಂದಿರುವ ಯೋಜನೆಯನ್ನು ಹಾಕುವುದರ ಜೊತೆಗೆ ಗ್ರಾಹಕರ ಅಭಿರುಚಿಯನ್ನು ಕೂಡ ನೋಡಬೇಕಾಗುತ್ತದೆ.
ರೀತಿಯಾದಂತಹ ಅನೇಕ ಕೆಲಸಕಾರ್ಯಗಳು ಇದ್ದು, ಇವುಗಳಲ್ಲೂ ತೊಡಗಿಕೊಂಡರೆ ನೀವು ನಂಬಿರುವ ಕ್ಷೇತ್ರದಲ್ಲಿ ಕೆಲಸ ಕಳೆದುಕೊಂಡಾ ಹೆಚ್ಚುವರಿ ಕೆಲಸ ಆರ್ಥಿಕವಾಗಿ ನಿಮ್ಮ ಕೈ ಹಿಡಿಯಲಿದೆ. ತುರ್ತು ವೈದ್ಯಕೀಯ ಸಂದರ್ಭದಲ್ಲೂ ಗಳಿಸಿದ ಹೆಚ್ಚುವರಿ ಆದಾಯವೂ ಸಹಾಯಕ್ಕೆ ಬರಲಿದೆ. ಅಲ್ಲದೆ, ಸಾಲ ವತಿಸುವುದು ಅಥವಾ ಕುಟುಂಬದಲ್ಲಿ ಹಠಾತ್ ಪ್ರಮುಖ ಹಣಕಾಸಿನ ಅಗತ್ಯತೆಗಳಂತಹ ಅನಿಶ್ಚಯತೆಗಳಿಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ನೀವು ವಾಹನ ಖರೀದಿಯ ಗುರಿ ಹೊಂದಿದ್ದರೂ ಈ ಹಣಕಾಸು ಯೋಜನೆ ನಿಮ್ಮ ನೆರವಿಗೆ ಬರಲಿದೆ. ಮುಖ್ಯವಾಗಿ, ಹಣದುಬ್ಬರದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಬಹುದು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:46 am, Thu, 8 September 22