Byjus Layoffs: ಸಾಲದ ಸುಳಿ, ಕೋರ್ಟ್ ಕೇಸ್​ಗೆ ಸಿಲುಕಿದ ಬೈಜುಸ್; ಉದ್ಯೋಗಿಗಳಿಗೆ ಮತ್ತೊಂದು ಸುತ್ತಿನ ಲೇ ಆಫ್ ಭೀತಿ

|

Updated on: Jun 09, 2023 | 11:30 AM

Byju's May Do 1000 Job Cuts: ದಿ ಮಾರ್ನಿಂಗ್ ಕಾಂಟೆಕ್ಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಬೈಜುಸ್ ಸಂಸ್ಥೆ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಬೈಜುಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Byjus Layoffs: ಸಾಲದ ಸುಳಿ, ಕೋರ್ಟ್ ಕೇಸ್​ಗೆ ಸಿಲುಕಿದ ಬೈಜುಸ್; ಉದ್ಯೋಗಿಗಳಿಗೆ ಮತ್ತೊಂದು ಸುತ್ತಿನ ಲೇ ಆಫ್ ಭೀತಿ
ಬೈಜುಸ್
Follow us on

ಬೆಂಗಳೂರು: ಅಮೆರಿಕದ ಎರಡು ಕೋರ್ಟ್​ಗಳಲ್ಲಿ ಪ್ರಕರಣ ಎದುರಿಸುತ್ತಿರುವ ಮತ್ತು ಸಾಲದ ಸುಳಿಗೆ ಸಿಲುಕಿರುವ ಬೆಂಗಳೂರು ಮೂಲದ ಬೈಜುಸ್ ಸಂಸ್ಥೆ (Byju’s) ಇದೀಗ ಉದ್ಯೋಗಕಡಿತಕ್ಕೆ ಆಲೋಚಿಸುತ್ತಿದೆ ಎಂಬಂತಹ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ದಿ ಮಾರ್ನಿಂಗ್ ಕಾಂಟೆಕ್ಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಬೈಜುಸ್ ಸಂಸ್ಥೆ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ (Layoff) ಸಾಧ್ಯತೆ ಇದೆ. ಈ ಬಗ್ಗೆ ಬೈಜುಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ಒಂದೆರಡು ಬಾರಿ ಬೈಜುಸ್ ಸಂಸ್ಥೆ ತನ್ನ ಕೆಲ ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಜನವರಿ ತಿಂಗಳಲ್ಲೂ 1,000 ಮಂದಿಯನ್ನು ಬೈಜುಸ್ ಆಡಳಿತ ಮನೆಗೆ ಕಳುಹಿಸಿತ್ತು.

ವರದಿ ಪ್ರಕಾರ ಲೇ ಆಫ್ ಆಗುತ್ತಿರುವವರಲ್ಲಿ ಬೈಜುಸ್​ನ ಸೇಲ್ಸ್ ವಿಭಾಗದಲ್ಲಿರುವವರು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇರಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ನಡೆದ ಲೇ ಆಫ್​ನಲ್ಲಿ ಕಂಟೆಂಟ್, ಮೀಡಿಯಾ, ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಟೀಮ್​ಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಬಾಧೆಯಾಗಿತ್ತು. ವರ್ಷಕ್ಕೆ ಒಂದು ಕೋಟಿ ರೂಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಸೀನಿಯರ್ ವೈಸ್ ಪ್ರೆಸಿಡೆಂಟ್​ಗಳು ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು.

ಇದನ್ನೂ ಓದಿED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

ಭಾರತದ ಮೊದಲ ಹಾಗೂ ಅಗ್ರಗಣ್ಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಬೈಜುಸ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಉದ್ಯೋಗಕಡಿತ ಅನಿವಾರ್ಯವೂ ಎನಿಸಿದೆ. ಅಲ್ಲದೇ ಬೈಜುಸ್​ಗೆ ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದರ ಜೊತೆಗೆ ಸಾವಿರಾರು ಕೋಟಿ ರೂ ಸಾಲದ ಸುಳಿಗೆ ಸಿಲುಕಿರುವ ಬೈಜುಸ್ ಸಂಸ್ಥೆ ಈ ಸಂಬಂಧ ಅಮೆರಕದ ಎರಡು ಕೋರ್ಟ್​ಗಳಲ್ಲಿ ಪ್ರಕರಣ ಎದುರಿಸುತ್ತಿದೆ. ಬೈಜುಸ್​ಗೆ ಖಾಸಗಿಯಾಗಿ ಟಿಎಲ್​ಬಿ ಸಾಲ ಕೊಟ್ಟಿದ್ದ ಸಂಸ್ಥೆಗಳು ಸಾಲ ತೀರಿಸುವಂತೆ ಕುತ್ತಿಗೆ ಮೇಲೆ ಕೂತಿದ್ದರಿಂದ ಬೈಜುಸ್ ಕೆಲ ದಿನಗಳ ಹಿಂದೆ ನ್ಯೂಯಾರ್ಕ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಭಾರತದಲ್ಲೂ ಬೈಜುಸ್ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದುಂಟು. ಹಣಕಾಸು ಅಕ್ರಮದ ಆರೋಪದ ಮೇಲೆ ಬೈಜುಸ್​ನ ವಿವಿಧ ಕಚೇರಿಗಳ ಮೇಲೆ ತನಿಖಾಧಿಕಾರಿಗಳು ರೇಡ್ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ