Fertilizer Subsidy: ಮುಂಗಾರು ಬೆಳೆಗೆ ಒಂದು ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿ: ಕೇಂದ್ರ ಸಮಿತಿ ಅನುಮೋದನೆ; 12ಕೋಟಿ ರೈತರಿಗೆ ಪ್ರಯೋಜನ

Central Cabinet Approves Fertilizer Subsidy: ಮುಂಗಾರು ಸೀಸನ್​ಗೆ 1.08 ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ ಕೊಟ್ಟಿರುವ ಸಂಗತಿಯನ್ನು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಖ್ ಮಾಂಡವೀಯ ತಿಳಿಸಿದ್ದಾರೆ. ಯೂರಿಯಾ ಮತ್ತು ಡಿಎಪಿ, ಎಂಒಪಿ ಮತ್ತಿತರ ರಸಗೊಬ್ಬರಗಳಿಗೆ (fertilizers) ಈ ಸಬ್ಸಿಡಿ ಸಿಗಲಿದೆ.

Fertilizer Subsidy: ಮುಂಗಾರು ಬೆಳೆಗೆ ಒಂದು ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿ: ಕೇಂದ್ರ ಸಮಿತಿ ಅನುಮೋದನೆ; 12ಕೋಟಿ ರೈತರಿಗೆ ಪ್ರಯೋಜನ
ರೈತ
Edited By:

Updated on: Oct 08, 2026 | 12:29 PM

ನವದೆಹಲಿ: ಈ ವರ್ಷದ ಮುಂಗಾರು ಬೆಳೆಗೆ (Kharif Crop) ರೈತರಿಗೆ ಸಹಾಯವಾಗಿ ಕೇಂದ್ರ ಸರ್ಕಾರ 1.08 ಲಕ್ಷ ಕೋಟಿ ರೂ ಮೊತ್ತದಷ್ಟು ರಸಗೊಬ್ಬರ ಸಬ್ಸಿಡಿ ಹಣ ಬಿಡುಗಡೆ ಮಾಡಲಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (Economic Affairs Cabinet Committee) ಮೇ 17, ಮಂಗಳವಾರದಂದು ಅನುಮೋದನೆ ನೀಡಿರುವುದು ವರದಿಯಾಗಿದೆ. ಯೂರಿಯಾ ಮತ್ತು ಡಿಎಪಿ, ಎಂಒಪಿ ಮತ್ತಿತರ ರಸಗೊಬ್ಬರಗಳಿಗೆ (fertilizers) ಈ ಸಬ್ಸಿಡಿ ಸಿಗಲಿದೆ. ಮುಂಗಾರು ಸೀಸನ್​ಗೆ 1.08 ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ ಕೊಟ್ಟಿರುವ ಸಂಗತಿಯನ್ನು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಖ್ ಮಾಂಡವೀಯ ತಿಳಿಸಿದ್ದಾರೆ. ಕೇಂದ್ರದ ಈ ಸಬ್ಸಿಡಿಯು 12 ಕೋಟಿ ರೈತರಿಗೆ ಉಪಯೋಗವಾಗುವ ನಿರೀಕ್ಷೆ ಇದೆ.

ಯೂರಿಯಾ ರಸಗೊಬ್ಬರಕ್ಕೆ 70,000 ಕೋಟಿ ರೂ, ಡೈ ಅಮೋನಿಯಂ ಫಾಸ್​ಫೇಟ್ (ಡಿಎಪಿ) ಹಾಗೂ ಇತರ ರಸಗೊಬ್ಬರಗಳಿಗೆ 38,000 ಕೋಟಿ ರೂ ಸಬ್ಸಿಡಿ ಸಿಗಲಿದೆ. ಈ ಹೊಸ ದರ ಏಪ್ರಿಲ್​ನಿಂದಲೇ ಅನ್ವಯ ಆಗಲಿದ್ದು, 2023 ಸೆಪ್ಟಂಬರ್​ವರೆಗೂ ಇರಲಿದೆ. ರೈತರಿಗೆ ರಸಗೊಬ್ಬರ ಬೆಲೆಯಲ್ಲಿ ಹೆಚ್ಚಳ ಆಗದಿರಲೆಂದು ಸಬ್ಸಿಡಿ ನೀಡಲಾಗುತ್ತಿದೆ.

ಕೇಂದ್ರದ ಈ ರಸಗೊಬ್ಬರ ಸಬ್ಸಿಡಿಯಿಂದಾಗಿ ಬಜೆಟ್​ನಲ್ಲಿ ನಿಗದಿ ಮಾಡಲಾಗಿದ್ದ ಮೊತ್ತ ದಾಟಿ ಹೋಗಲಾಗಿದೆ. ಕಳೆದ ಬಜೆಟ್​ನಲ್ಲಿ ರಸಗೊಬ್ಬರ ಸಬ್ಸಿಡಿಗೆ 1.75 ಲಕ್ಷ ಕೋಟಿ ರೂ ಔಟ್​ಲೇ ಹಾಕಲಾಗಿತ್ತು. 2023-24ರ ಹಣಕಾಸ ವರ್ಷದಲ್ಲಿ ಒಟ್ಟಾರೆ ಫರ್ಟಿಲೈಸರ್ ಸಬ್ಸಿಡಿ 2 ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆ ಇದೆ. ಹಾಗೆಯೇ, ಅಂತಾರಾಷ್ಟ್ರೀಯ ದರಗಳು ಕಡಿಮೆಗೊಂಡಿರುವುದರಿಂದ ಎನ್​ಪಿಕೆ ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದೆ.

ಸದ್ಯ ಒಂದು ಚೀಲ ಯೂರಿಯಾ ಗೊಬ್ಬರದ ಬೆಲೆ 276 ರೂ ಇದೆ. ಡೈ ಅಮೋನಿಯಮ್ ಫಾಸ್​ಫೇಟ್ ಅಥವಾ ಡಿಎಪಿ ರಸಗೊಬ್ಬರದ ಬೆಲೆ ಒಂದು ಚೀಲಕ್ಕೆ 1,350 ರೂ ಇದೆ. ರೈತರಿಗೆ ಈಗ ಬಹುತೇಕ ಇದೇ ಬೆಲೆಗೆ ರಸಗೊಬ್ಬರ ಸಿಗುವ ಸಾಧ್ಯತೆ ಇದೆ.

Published On - 6:22 pm, Wed, 17 May 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us