7th Pay Commission: ಸರ್ಕಾರಿ ನೌಕರರಿಗೆ ಸಿಹಿಕಹಿ ಸುದ್ದಿ; ಈ ಬಾರಿ ಡಿಎ ಹೆಚ್ಚಳ ನಿರೀಕ್ಷೆಗಿಂತ ಕಡಿಮೆಯಾ? ಎಷ್ಟಿರಲಿದೆ ತುಟ್ಟಿಭತ್ಯೆ?

|

Updated on: May 05, 2023 | 11:32 AM

Government Employees Salary Hike: ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಲ್ಲಿ ಡಿಎ ಏರಿಕೆ ಆಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಈ ಬಾರಿ ಶೇ. 3ರಿಂದ 4ರಷ್ಟು ಡಿಎ ಹಾಗೂ ಡಿಆರ್ ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.

7th Pay Commission: ಸರ್ಕಾರಿ ನೌಕರರಿಗೆ ಸಿಹಿಕಹಿ ಸುದ್ದಿ; ಈ ಬಾರಿ ಡಿಎ ಹೆಚ್ಚಳ ನಿರೀಕ್ಷೆಗಿಂತ ಕಡಿಮೆಯಾ? ಎಷ್ಟಿರಲಿದೆ ತುಟ್ಟಿಭತ್ಯೆ?
ಡಿಎ ಹೆಚ್ಚಳ
Follow us on

ನವದೆಹಲಿ: ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಇದು ಖುಷಿಯ ಸುದ್ದಿಯೂ ಹೌದು, ತುಸು ನಿರಾಸೆಗೊಳಿಸುವ ಸುದ್ದಿಯೂ ಹೌದು. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಡಿಯರ್ನೆಸ್ ಅಲೋಯನ್ಸ್ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಪ್ರಮಾಣದಲ್ಲಿ ಶೇ. 4ರಷ್ಟು ಹೆಚ್ಚಳ ಕಂಡಿದ್ದ ಸರ್ಕಾರಿ ನೌಕರರು ಇದೀಗ ಜುಲೈ ತಿಂಗಳಲ್ಲಿ ಮತ್ತೊಮ್ಮೆ ಡಿಎ ಹೆಚ್ಚಳದ ಭಾಗ್ಯ ಪಡೆಯುವುದು ಖಚಿತ ಎನ್ನಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ಡಿಎ ಏರಿಕೆ ಮಾಡಬೇಕೆಂದು 7ನೇ ವೇತನ ಆಯೋಗ (7th Pay Commission) ಕಡ್ಡಾಯಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಹೆಚ್ಚಳ ಮಾಡಲಾಗುತ್ತಿದೆ. ಜನವರಿಯಲ್ಲಿ ಶೇ. 4ರಷ್ಟು ಹೆಚ್ಚಾಗಿದ್ದ ಡಿಎ ಈ ಜುಲೈನಲ್ಲಿ ತುಸು ಕಡಿಮೆ ಡಿಎ ಏರಿಕೆ ಕಾಣಬಹುದು ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ ಜುಲೈನಲ್ಲಿ ಅಪ್​ಡೇಟ್ ಆಗುವ ಡಿಎ ಹೆಚ್ಚಳ ಶೇ. 3ರಿಂದ 4ರಷ್ಟಿರಬಹುದು. ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಆಗಿಲ್ಲ. ಜುಲೈನಲ್ಲೇ ಡಿಎ ಹೆಚ್ಚಳ ನಿರ್ಧಾರ ತೆಗೆದುಕೊಳ್ಳಲಾಗಬಹುದು. ಜನವರಿಯಲ್ಲಿ ಪ್ರಕಟವಾಗಬೇಕಿದ್ದ ಡಿಎ ಹೆಚ್ಚಳದ ನಿರ್ಧಾರವನ್ನು ಮಾರ್ಚ್​ನಲ್ಲಿ ಘೋಷಿಸಲಾದಂತೆ ಜುಲೈನ ಡಿಎ ಹೈಕ್ ಅನ್ನು ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲೂ ಪ್ರಕಟಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಇದನ್ನೂ ಓದಿSBI Rules: ಕ್ಯಾಷ್​ಬ್ಯಾಕ್ ಸರ್ವಿಸ್: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ

ಕಳೆದ ಕೆಲ ವರ್ಷಗಳಿಂದ ಸರ್ಕಾರ ವರ್ಷಕ್ಕೆರಡು ಬಾರಿ ಶೇ. 4ರಷ್ಟು ಡಿಎ ಹೆಚ್ಚಿಸುತ್ತಾ ಬಂದಿದೆ. ಈಗ ಸರ್ಕಾರಿ ನೌಕರರ ಸಂಬಳದ ಜೊತೆಗೆ ಶೇ. 42ರಷ್ಟು ತುಟ್ಟಿಭತ್ಯೆ ಸಿಗುತ್ತಿದೆ. ಜುಲೈನಲ್ಲಿ ಶೇ. 4ರಷ್ಟು ಏರಿಕೆ ಆದರೆ ತುಟ್ಟಿಭತ್ಯೆ ಶೇ. 46 ಆಗುತ್ತದೆ.

ಡಿಎ ಮತ್ತು ಡಿಆರ್ ಹೆಚ್ಚಳ ಯಾಕೆ?

ಅಗತ್ಯವಸ್ತುಗಳ ಬೆಲೆ ವರ್ಷವರ್ಷ ಏರುತ್ತಲೇ ಇರುವುದರಿಂದ ಜೀವನ ವೆಚ್ಚವೂ ಸಹಜವಾಗಿ ಏರುತ್ತದೆ. ಇದೇ ಹಣದುಬ್ಬರ. ಪ್ರತೀ ವರ್ಷ ಸಂಬಳ ಹೆಚ್ಚಾದರೂ ಹಣದುಬ್ಬರದಿಂದಾಗಿ ಈ ಸಂಬಳ ಏರಿಕೆಯ ಪೂರ್ಣಲಾಭ ಉದ್ಯೋಗಿಗಳಿಗೆ ಸಿಕ್ಕುವುದಿಲ್ಲ. ಈ ಕಾರಣಕ್ಕೆ ಹಣದುಬ್ಬರವನ್ನು ಸರಿದೂಗಿಸಲು ನೌಕರರ ಸಂಬಳಕ್ಕೆ ತುಟ್ಟಿಭತ್ಯೆಯನ್ನು ಸೇರಿಸಿ ಕೊಡಬೇಕೆಂದು 7ನೇ ವೇತನ ಆಯೋಗ ಕಡ್ಡಾಯಪಡಿಸುತ್ತದೆ. ಡಿಎ ಎಂಬುದು ಈಗ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ಅನ್ವಯ ಆದರೆ, ಡಿಯರ್ನೆಸ್ ಅಲೋಯನ್ಸ್ (ಡಿಆರ್) ನಿವೃತ್ತ ನೌಕರರ ಪಿಂಚಣಿಗೆ ಸೇರಿಸಿ ಕೊಡಲಾಗುತ್ತದೆ.

ಇದನ್ನೂ ಓದಿPay without Internet: ಮೊಬೈಲ್​ಗೆ *99# ಸೆಟಪ್ ಮಾಡಿ; ಇಂಟರ್ನೆಟ್ ಇಲ್ಲದೇ ಹಣ ಪಾವತಿಸಿ; ಇದನ್ನು ಬಳಸುವುದು ಹೇಗೆ? ಇಲ್ಲಿದೆ ವಿವರ

ಈ ಬಾರಿ ಡಿಎ ಹೆಚ್ಚಳ ಯಾಕೆ ಕಡಿಮೆ ಆಗಬಹುದು?

ಈ ವರ್ಷ ಹಣದುಬ್ಬರ ತುಸು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಡಿಎ ಎರಿಕೆಯನ್ನೂ ಅನುಗುಣವಾಗಿ ಕಡಿಮೆ ಮಾಡುವ ಸಾಧ್ಯತೆ ಇದೆ. ಜುಲೈನಲ್ಲಿ ಡಿಎ ಶೇ. 3ರಷ್ಟು ಏರಿಕೆಗೆ ಮಿತಿಗೊಳ್ಳಬಹುದು ಎಂಬ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದಲ್ಲಿ 47.58 ಲಕ್ಷ ಉದ್ಯೋಗಿಗಳಿದ್ದಾರೆ. 69.76 ಲಕ್ಷದಷ್ಟು ಪಿಂಚಣಿದಾರರಿದ್ದಾರೆ. ಡಿಎ ಮತ್ತು ಡಿಆರ್ ಹೆಚ್ಚಳದಿಂದ 1.17 ಕೋಟಿಗೂ ಹೆಚ್ಚು ಮಂದಿ ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ