AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Rules: ಕ್ಯಾಷ್​ಬ್ಯಾಕ್ ಸರ್ವಿಸ್: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ

Credit Card Rules Change: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳ ಮೂಲಕ ಹಣ ಪಾವತಿಸುವುದರಿಂದ ಒಂದಿಷ್ಟು ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್​ಗಳು ಸಿಗುತ್ತವೆ. ಈ ಸೇವೆಯಲ್ಲಿ ಈ ವರ್ಷ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಕೆಲ ಪಾವತಿಗಳಿಗೆ ಕ್ಯಾಷ್​ಬ್ಯಾಕ್ ಕಡಿಮೆ ಆಗಿದೆ, ಕೆಲವಕ್ಕೆ ರಿವಾರ್ಡ್ ಪಾಯಿಂಟ್ಸ್ ಹೆಚ್ಚಾಗಿದೆ. ಇದರ ವಿವರ ಇಲ್ಲಿದೆ.

SBI Rules: ಕ್ಯಾಷ್​ಬ್ಯಾಕ್ ಸರ್ವಿಸ್: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2023 | 3:48 PM

Share

ಏಪ್ರಿಲ್ 1ರಿಂದ ಭಾರತದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಿದೆ. 2023-24ರ ವರ್ಷ ಹಲವು ಬದಲಾವಣೆಗಳೊಂದಿಗೆ ಅಡಿ ಇಟ್ಟಿದೆ. ಪ್ರಮುಖ ಹಣಕಾಸು ನಿಯಮಗಳು ಬಂದಿವೆ. ವೈಯಕ್ತಿಕ ತೆರಿಗೆ, ಹೂಡಿಕೆಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಬ್ಯಾಂಕುಗಳ ಬಡ್ಡಿ ದರದಲ್ಲಿ ವ್ಯತ್ಯಯಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಮತ್ತು ಪೇಮೆಂಟ್ ಸೇವೆಗಳಲ್ಲಿ ಒಂದಿಷ್ಟು ಮಹತ್ವದ ಬದಲಾವಣೆಗಳಾಗಿವೆ. ಈ ತಿಂಗಳು ಮೇ 1ರಿಂದಲೇ ಈ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಎಸ್​ಬಿಐ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಿದೆ. ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಸಂಗತಿಯಲ್ಲಿ ಎಸ್​ಬಿಐ ಕೆಲ ನಿಯಮ ಬದಲಾವಣೆ ಮಾಡಿದೆ. ಬೇರೆ ಬೇರೆ ಕ್ರೆಡಿಟ್ ಕಾರ್ಡ್​ಗಳು ನೀಡುವ ಆಫರ್​ನಲ್ಲಿ ಬದಲಾವಣೆ ಆಗಿದೆ. ಈ ಬಗ್ಗೆ ವಿವರ ಇಲ್ಲಿದೆ.

  • ಎಸ್​ಬಿಐನ AURUM ಕ್ರೆಡಿಟ್ ಕಾರ್ಡ್ ಮೂಲಕ ಸಿಗುತ್ತಿದ್ದ ಈಜಿಡೈನರ್ ಪ್ರೈಮ್ (EazyDiner Prime) ಮತ್ತು ಲೆನ್ಸ್​ಕಾರ್ಟ್ ಗೋಲ್ಡ್ (LensKart Gold) ಮೆಂಬರ್​ಶಿಪ್ ಸೌಲಭ್ಯ ಇನ್ಮುಂದೆ ಸಿಗುವುದಿಲ್ಲ.
  • AURUM ಕ್ರೆಡಿಟ್ ಕಾರ್ಡ್ ಹೊಂದಿರುವವರು ಒಂದು ವರ್ಷಕ್ಕೆ 5,00,000 ರೂ ಮೈಲ್​ಸ್ಟೋನ್ ಸ್ಪೆಂಡ್​ಗೆ ಆರ್​​ಬಿಎಲ್​ನಿಂದ 5,000 ರೂ ಮೌಲ್ಯದ ಕೂಪನ್ ಸಿಗುತ್ತಿತ್ತು. ಈಗ ಆರ್​ಬಿಎಲ್ ಲುಕ್ಸ್​ನಿಂದ (RBL Luxe) ಈ ಕೂಪನ್ ಸಿಗಲ್ಲ. ಅದರ ಬದಲು ಟಾಟಾ ಕ್ಲಿಕ್ ಲಕ್ಷುರಿಯಿಂದ (Tata CliQ Luxury) ಕೂಪನ್ ಸಿಗುತ್ತದೆ.

ಇದನ್ನೂ ಓದಿHow Scams Work?: ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಖೆಡ್ಡಾ ತೋಡುವ ವಂಚಕರು; ನಿತಿನ್ ಕಾಮತ್ ಬಿಚ್ಚಿಟ್ಟ ಭಯಾನಕ ಕ್ರಿಪ್ಟೋ ವೃತ್ತಾಂತ

  • SimplyCLICK ಎಸ್​ಬಿಐ ಕಾರ್ಡ್ ಮತ್ತು SimplyCLICK ಅಡ್ವಾಂಟೇಜ್ ಎಸ್​ಬಿಐ ಕಾರ್ಡ್ ಬಳಸಿ ಆನ್​ಲೈನ್ ಮೂಲಕ ಬಾಡಿಗೆ ಪಾವತಿಸಿದರೆ ಒಂದಿಷ್ಟು ರಿವಾರ್ಡ್ ಪಾಯಿಂಟ್ ಸಿಗುತ್ತಿತ್ತು. ಈ ರಿವಾರ್ಡ್ ಪಾಯಿಂಟ್​ಗಳನ್ನು ಐದು ಹಂತಗಳಷ್ಟು ಇಳಿಸಲಾಗಿದೆ. ಅಂದರೆ 5 ಅಂಕಗಳು ಸಿಗುತ್ತಿದ್ದರೆ ಈಗ 1 ಅಂಕ ಮಾತ್ರ ಸಿಗುತ್ತದೆ.
  • ಕ್ಯಾಷ್​ಬ್ಯಾಕ್ ಎಸ್​ಬಿಐ ಕಾರ್ಡ್​ನಲ್ಲಿ ಒಡವೆ, ಶಾಲೆ ಹಾಗು ಶೈಕ್ಷಣಿಕ ಸೇವೆ, ಯುಟಿಲಿಟಿ ಬಿಲ್, ಇನ್ಷೂರೆನ್ಸ್ ಸರ್ವಿಸ್ ಇತ್ಯಾದಿ ಪಾವತಿಗೆ ಇನ್ಮುಂದೆ ಯಾವುದೇ ಕ್ಯಾಷ್​ಬ್ಯಾಕ್ ಆಫರ್ ಇರುವುದಿಲ್ಲ. ಗಿಫ್ಟ್​ಗಳು, ಸೌಂದರ್ಯವರ್ಧಕಗಳು, ರೈಲ್ವೇಸ್ ಇತ್ಯಾದಿ ಖರೀದಿಗೂ ಕ್ಯಾಷ್​ಬ್ಯಾಕ್ ಸಿಗುವುದಿಲ್ಲ.

ಅಪೋಲೋ, ಬುಕ್ ಮೈ ಶೋನಲ್ಲಿ ಈ ಕ್ರೆಡಿಟ್ ಕಾರ್ಡ್​ಗೆ ಭರ್ಜರಿ ರಿವಾರ್ಡ್ ಪಾಯಿಂಟ್ಸ್

SimplyCLICK ಎಸ್​ಬಿಐ ಕಾರ್ಡ್ ಮತ್ತು SimplyCLICK ಅಡ್ವಾಂಟೇಜ್ ಎಸ್​ಬಿಐ ಕಾರ್ಡ್ ಮೂಲಕ ಲೆನ್ಸ್​ಕಾರ್ಟ್​ನಿಂದ ಏನಾದರೂ ಖರೀದಿಸಿದರೆ ರಿವಾರ್ಡ್ ಪಾಯಿಂಟ್ ಸಿಗುತ್ತಿತ್ತು. ಏಪ್ರಿಲ್ 1ರಿಂದ ಒಂದನೇ ಹತ್ತು ಭಾಗದಷ್ಟು ರಿವಾರ್ಡ್ ಪಾಯಿಂಟ್ ಇಳಿಸಲಾಗಿದೆ. 10 ಅಂಕ ಪಡೆಯುತ್ತಿದ್ದವರಿಗೆ 1 ಅಂಕವಷ್ಟೇ ಸಿಗುತ್ತದೆ.

ಇದನ್ನೂ ಓದಿCognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್

ಆದರೆ, ಅಪೋಲೋ 24/7 ಮತ್ತು ಬುಕ್ ಮೈ ಶೋನಲ್ಲಿ ಈ ಎರಡು ಎಸ್​ಬಿಐ ಕಾರ್ಡ್ ಉಪಯೋಗಿಸಿ ಹಣ ಪಾವತಿಸಿದರೆ 10 ಪಟ್ಟು ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಸಿಗಲಿದೆ. ಕ್ಲಿಯರ್​ಟ್ರಿಪ್, ಈಜಿಡೈನರ್ ಮತ್ತು ನೆಟ್​ಮೆಡ್ಸ್ ಮೊದಲಾದವುಗಳಲ್ಲಿ ಪಾವತಿಗಳಿಗೂ 10 ಪಟ್ಟು ರಿವಾರ್ಡ್ ಪಾಯಿಂಟ್ಸ್ ದೊರಕುತ್ತದೆ.

ಎಸ್​ಬಿಐ ಕಾರ್ಡ್ ಮೂಲಕ ಪಾವತಿಸುವ ಬಾಡಿಗೆಗೆ ಶುಲ್ಕ ಹೆಚ್ಚಳ

ಎಸ್​ಬಿಐನ ಕ್ರೆಡಿಟ್ ಕಾರ್ಡ್​ಗಳ ಮೂಲಕ ಬಾಡಿಗೆ ಪಾವತಿಸುತ್ತಿದ್ದರೆ 99 ರೂ ಹಾಗೂ ತೆರಿಗೆ ಪಾವತಿಸಬೇಕಿತ್ತು. ಈಗ ಈ ಪ್ರೋಸಸಿಂಗ್ ಶುಲ್ಕವನ್ನು 199 ರೂಗೆ ಹೆಚ್ಚಿಸಲಾಗಿದೆ. ಶೇ. 18ರಷ್ಟು ಜಿಎಸ್​ಟಿಯನ್ನೂ ತೆರಬೇಕಾಗುತ್ತದೆ. ಮಾರ್ಚ್ 17ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪ್ರೋಸಸಿಂಗ್ ಫೀಸ್ ಅನ್ನು 99 ರೂಗೆ ಹೆಚ್ಚಿಸಲಾಗಿತ್ತು. ಕೆಲ ತಿಂಗಳ ಅಂತರದಲ್ಲೇ ಎರಡನೇ ಬಾರಿ ಈ ದರ ಹೆಚ್ಚಳವಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು