Sign In

By signing in or creating an account, you agree with Associated Broadcasting Company's Terms & Conditions and Privacy Policy.

Cognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್

Office Spaces of Cognizant To Go Shorter: ಈ ವರ್ಷ ಕಂಪನಿಗೆ ಆದಾಯ ಕಡಿಮೆ ಬರುವ ಸಾಧ್ಯತೆ ಇರುವುದರಿಂದ ವೆಚ್ಚ ಕಡಿಮೆ ಮಾಡಲು ಕಾಗ್ನೈಜೆಂಟ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಲೇ ಆಫ್ ಮತ್ತು ಕಚೇರಿ ಸ್ಥಳ ಮೊಟಕುಗೊಳಿಸುವುದು ಸೇರಿದಂತೆ ವಿವಿಧ ಕ್ರಮಗಳಿಗೆ ಐಟಿ ಕಂಪನಿ ನಿರ್ಧರಿಸಿದೆ.

Cognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್
ಕಾಗ್ನಿಜೆಂಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2023 | 12:04 PM

ನವದೆಹಲಿ: ಉದ್ಯೋಗಿಗಳನ್ನು ಸಾಲು ಸಾಲಾಗಿ ಲೇ ಆಫ್ ಮಾಡುತ್ತಿರುವ ಟೆಕ್ ಕಂಪನಿಗಳ ಪಟ್ಟಿಗೆ ಈಗ ಕಾಗ್ನಿಜೆಂಟ್ (Cognizant) ಸೇರ್ಪಡೆಯಾಗಿದೆ. ಭಾರತ ಮೂಲದ ಅಮೆರಿಕನ್ ಐಟಿ ಕಂಪನಿ ಕಾಗ್ನೈಜೆಂಟ್ ತನ್ನ ವೆಚ್ಚ ಕಡಿಮೆ ಮಾಡಲು ಮತ್ತು ಚುರುಕು ಕಂಡುಕೊಳ್ಳಲು ತನ್ನ ಕಾರ್ಯಾಚರಣೆ ಪ್ರಕ್ರಿಯೆ ಸರಳಗೊಳಿಸುತ್ತಿದೆ. ನೆಕ್ಸ್​ಟ್​ಜೆನ್ (NextGen) ಎನ್ನುವ ಯೋಜನೆಯೊಂದನ್ನು ಕಾಗ್ನೈಜೆಂಟ್ ಜಾರಿಗೆ ತಂದಿದ್ದು, ಇದರಲ್ಲಿ ಕಂಪನಿ ಕಾರ್ಯಾಚರಿಸುವ ವಿಧಾನವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸರಳಗೊಳಿಸಲಾಗುತ್ತಿದೆ. ಇದರಿಂದ 3,500 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ ಇದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಷ್ಟೇ ಅಲ್ಲ, ಕೆಲಸ ಸ್ಥಳದಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಅನವಶ್ಯಕತ ಕಚೇರಿ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಲೂ ಕಂಪನಿಗೆ ಒಂದಷ್ಟು ವೆಚ್ಚದ ಉಳಿತಾಯವಾಗುವ ನಿರೀಕ್ಷೆ ಇದೆ.

ಕಾಗ್ನಿಜೆಂಟ್ ಟೆಕ್ನಾಲಜೀಸ್ ಕಂಪನಿಯಲ್ಲಿ ಸದ್ಯ ಸುಮಾರು 3.5 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗ 3,500 ಮಂದಿ ಅಂದರೆ ಶೇ. 1ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಅಂದರೆ ನೂರು ಉದ್ಯೋಗಿ ಪೈಕಿ ಒಬ್ಬರು ಮನೆಗೆ ಹೋಗಬೇಕಾಗುತ್ತದೆ. ಉದ್ಯೋಗಿ ವೆಚ್ಚ ಉಳಿಸುವುದಕ್ಕಿಂತ ಹೆಚ್ಚಾಗಿ ಕಾರ್ಯಾಚರಣೆ ವ್ಯವಸ್ಥೆ ಸರಳಗೊಳಿಸುವ ನಿಟ್ಟಿನಲ್ಲಿ ಲೇ ಆಫ್ ನಡೆಯುತ್ತಿರವಂತೆ ಮೇಲ್ನೋಟಕ್ಕೆ ತೋರುತ್ತಿದೆ. ಕಾರ್ಯಸ್ಥಳ ತೆರವು ಮೂಲಕ ಉಳಿಸಿದ ಹಣವನ್ನು ಸಣ್ಣ ನಗರಗಳಲ್ಲಿ ಕಚೇರಿ ಸ್ಥಾಪಿಸಲು ಬಳಸಲು ಕಾಗ್ನೈಜೆಂಟ್ ಯೋಜಿಸಿದೆ. ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು ಅನುಕೂಲವಾಗಲು ಕಾಗ್ನೈಜೆಂಟ್ ಈ ಪ್ರಯತ್ನ ಮಾಡುತ್ತಿದೆ. ಭಾರತದಲ್ಲಿ 19,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್​ಗೆ ಹೋಲಿಸಿದರೆ ಕಾಗ್ನಿಜೆಂಟ್ ಲೇ ಆಫ್ ವಿಚಾರದಲ್ಲಿ ತುಸು ಮೃದುವಾಗಿದೆ.

ಇದನ್ನೂ ಓದಿExtra Week Offs: ಬ್ಯಾಂಕುಗಳಿಗೆ ವಾರದಲ್ಲಿ 2 ದಿನ ರಜೆ; ನಿತ್ಯ 40 ನಿಮಿಷ ಹೆಚ್ಚು ಕೆಲಸ; ಸರ್ಕಾರದಿಂದ ಶೀಘ್ರದಲ್ಲೇ ಅಧಿಸೂಚನೆ?

ಈ ವರ್ಷ ಆದಾಯ ಕಡಿಮೆ ಆಗುವ ಭೀತಿ ಕಾಗ್ನಿಜೆಂಟ್​ಗೆ

ಕಾಗ್ನಿಜೆಂಟ್ ತನ್ನ ಮೊದಲ ಕ್ವಾರ್ಟರ್​ನಲ್ಲಿ (2023 ಜನವರಿಯಿಂದ ಮಾರ್ಚ್) ಶೇ. 3ರಷ್ಟು ಆದಾಯ ಹೆಚ್ಚಳ ಕಂಡಿದೆಯಾದರೂ, ಈ ವರ್ಷ ತನ್ನ ಅದಾಯ ವೃದ್ಧಿ ಶೇ. 0.8ಕ್ಕಿಂತ ಕಡಿಮೆಗೆ ಇಳಿಯಬಹುದು ಎಂದು ಅಂದಾಜಿಸಿದೆ. ಮೈನಸ್ ಶೇ. 1.2ರಷ್ಟು ಹಿನ್ನಡೆಯೂ ಆಗಬಹುದು ಎನ್ನುವ ಭೀತಿಯನ್ನೂ ಅದು ವ್ಯಕ್ತಪಡಿಸಿದೆ. ಐಟಿ ಕಂಪನಿಗಳ ಪೈಕಿ ಅತಿ ಕಡಿಮೆ ಲಾಭದ ಮಾರ್ಜಿನ್ ಹೊಂದಿರುವ ಕಂಪನಿಗಳಲ್ಲಿ ಕಾಗ್ನೈಜೆಂಟ್ ಕೂಡ ಒಂದು. ಹೀಗಾಗಿ, ಈ ಸಂಸ್ಥೆಗೆ ಬ್ಯುಸಿನೆಸ್ ಕಡಿಮೆ ಆದರೆ ಆದಾಯವೂ ಇನ್ನೂ ವೇಗವಾಗಿ ಕಡಿಮೆ ಆಗುತ್ತದೆ.

ಕಾಗ್ನಿಜೆಂಟ್ ಕಂಪನಿಯಲ್ಲಿ ಇತ್ತೀಚೆಗೆ ಸಾಕಷ್ಟು ಆಡಳಿತಾತ್ಮಕ ಬದಲಾವಣೆಗಳಾಗುತ್ತಿವೆ. ಸಿಇಒ ಆಗಿದ್ದ ಬ್ರಿಯಾನ್ ಹಮ್​ಫ್ರೀಸ್ ಅವರನ್ನು ತೆಗೆದುಹಾಕಲಾಗಿತ್ತು. ಮೇಲ್ಪದರ ಇನ್ನೂ ಹಲವು ನಾಯಕರು ಕೆಲಸ ಬಿಡುವ ಸಾಧ್ಯತೆ ಇದೆ. ರವಿಕುಮಾರ್ ಎಸ್ ಎಂಬುವವರು ಇತ್ತೀಚೆಗಷ್ಟೇ ಸಿಇಒ ಆಗಿ ನೇಮಕವಾಗಿದ್ದಾರೆ. ಇಂಥ ಹೊತ್ತಿನಲ್ಲಿ ಹೊಸ ಸಿಇಒ ಮುಂದೆ ಗುರುತರ ಸವಾಲುಗಳಿವೆ. ಕಾಗ್ನಿಜೆಂಟ್​ಗೆ ಪ್ರತಿಸ್ಪರ್ಧಿಗಳಾಗಿ ಇನ್ಫೋಸಿಸ್, ಟಿಸಿಎಸ್, ಅಕ್ಸೆಂಚರ್ ಮೊದಲಾದ ಕಂಪನಿಗಳಿವೆ.

ಇದನ್ನೂ ಓದಿOla Refund: ಒಲಾ ಎಲೆಕ್ಟ್ರಿಕ್ ಶಾಕ್..! ಗ್ರಾಹಕರಿಗೆ 130 ಕೋಟಿ ರೂ ರೀಫಂಡ್; ಕಾರಣ ಏನು?

ಅಮೆರಿಕದಲ್ಲಿ ಮುಖ್ಯ ಕಚೇರಿ ಇದ್ದರೂ ಕಾಗ್ನಿಜೆಂಟ್ ಮೂಲ ಭಾರತದ್ದು:

ಕಾಗ್ನೈಜೆಂಟ್ ಸಂಸ್ಥೆ ಸ್ಥಾಪನೆಯಾಗಿದ್ದು 1994ರಂದು ಚೆನ್ನೈನಲ್ಲಿ. ಆತ ತೊಂಬತ್ತರ ದಶಕದಲ್ಲಿ ಬಹಳ ದೈತ್ಯ ಎನಿಸಿದ್ದ ಸತ್ಯಂ ಕಂಪ್ಯೂಟರ್ಸ್ ಹಾಗೂ ಡುನ್ ಅಂಡ್ ಬ್ರಾಡ್​ಸ್ಟ್ರೀಟ್ ಸಂಸ್ಥೆಯ ಜಂಟಿ ಯೋಜನೆಯಾಗಿ ಇದರ ಸ್ಥಾಪನೆ ಆಗಿದ್ದು. ಬಳಿಕ ಇದರ ಮುಖ್ಯ ಕಚೇರಿಯನ್ನು ಅಮೆರಿಕಗೆ ವರ್ಗಾಯಿಸಲಾಯಿತು. ಅಲ್ಲಿನ ನಾಸ್ಡಾಕ್ ಷೇರುಪೇಟೆಯಲ್ಲಿ ಇದು ಲಿಸ್ಟ್ ಆಗಿದೆ. ಅಮೆರಿಕದ ಕಂಪನಿ ಆದರೂ ಇದರ ಹೆಚ್ಚಿನ ಕಾರ್ಯಾಚರಣೆ ಇರುವುದು ಭಾರತದಲ್ಲೇ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ