Ola Refund: ಒಲಾ ಎಲೆಕ್ಟ್ರಿಕ್ ಶಾಕ್..! ಗ್ರಾಹಕರಿಗೆ 130 ಕೋಟಿ ರೂ ರೀಫಂಡ್; ಕಾರಣ ಏನು?
FAME Guidelines Violation: ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ಸಿಗಲು ಸರ್ಕಾರ ಫೇಮ್ ಎಂಬ ಸಬ್ಸಿಡಿ ಸ್ಕೀಮ್ ತಂದಿದೆ. ಇದರ ನಿಯಮಗಳಿಗೆ ವಿರುದ್ಧವಾಗಿ ಓಲಾ ಎಲೆಕ್ಟ್ರಿಕ್ ಆಫ್-ಬೋರ್ಡ್ ಚಾರ್ಜರ್ ಅನ್ನು ಹೆಚ್ಚುವರಿ ಬೆಲೆಗೆ ಮಾರಿದೆ. ಈ ಹಿನ್ನೆಲೆಯಲ್ಲಿ 130 ಕೋಟಿ ರೂ ರಿಫಂಡ್ ಮಾಡುವಂತೆ ಓಲಾಗೆ ಸೂಚಿಸಲಾಗಿದೆ.
ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವಾಗ ಆಫ್–ಬೋರ್ಡ್ ಚಾರ್ಜರ್ಗೆ (Off-board Charger) ಹೆಚ್ಚುವರಿ ಹಣ ಕೊಟ್ಟಿದ್ದವರೆಲ್ಲರಿಗೂ ಆ ದುಡ್ಡು ವಾಪಸ್ ಬರಲಿದೆ. ಇಂಥ ಒಂದು ಲಕ್ಷ ಜನರಿಗೆ 130 ಕೋಟಿ ರೂ ರೀಫಂಡ್ ಮಾಡುವಂತೆ ಸರ್ಕಾರದ ಪ್ರಾಧಿಕಾರವೊಂದು ಓಲಾ ಎಲೆಕ್ಟ್ರಿಕ್ ಸಂಸ್ಥೆಗೆ (Ola Electric) ಆದೇಶಿಸಿದೆ. ಎಲೆಕ್ಟ್ರಿಕ್ ವಾಹನ ತಯಾರಕರು (OEM) ಸರ್ಕಾರದ ಸಬ್ಸಿಡಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯದ ವತಿಯಿಂದ ತನಿಖೆ ನಡೆದಿತ್ತು. ಎಲೆಕ್ಟ್ರಿಕ್ ವಾಹನ ವಿಚಾರದಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಬೆಲೆಗೆ ಮಾರುವುದು ಫೇಮ್ (FAME- Faster Adoption and Manufacturing Of Electric Vehicles) ನಿಯಮಾವಳಿಯ ಉಲ್ಲಂಘನೆಯಾಗುತ್ತದೆ.
ತನಿಖೆ ವೇಳೆ ಓಲಾ ಎಲೆಕ್ಟ್ರಿಕ್ ಸಂಸ್ಥೆಯಿಂದ ಈ ನಿಯಮ ಉಲ್ಲಂಘನೆ ಆಗಿರುವುದು ಬೆಳಕಿಗೆ ಬಂದಿತ್ತು. ಇದೀಗ ಆಟೊಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ARIA) ಸಂಸ್ಥೆಗೆ ಪತ್ರ ಬರೆದಿರುವ ಒಲಾ ಎಲೆಕ್ಟ್ರಿಕ್, ಹೆಚ್ಚುವರಿ ಬೆಲೆಗೆ ಆಫ್ ಬೋರ್ಡ್ ಎಲೆಕ್ಟ್ರಿಕ್ ಚಾರ್ಜರ್ ಖರೀದಿಸಿದ 1 ಲಕ್ಷ ಗ್ರಾಹಕರಿಗೆ ಒಟ್ಟು 130 ಕೋಟಿ ರೂ ಹಣವನ್ನು ರೀಫಂಡ್ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: Great Returns: 10,000 ರೂ ಎಸ್ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್
ಸರ್ಕಾರ ಕೂಡ ಎವಿ ಮಾರಾಟಕ್ಕೆ ಸಬ್ಸಿಡಿ ಮೂಲಕ ಉತ್ತೇಜನ ಕೊಡುತ್ತಿದೆ. ಸರ್ಕಾರ ಕೊಡುತ್ತಿರುವ ಸಬ್ಸಿಡಿಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡದೇ ಎವಿ ತಯಾರಕರೇ ಲಾಭ ಮಾಡಿಕೊಳ್ಳುತ್ತಿವೆ ಎಂಬುದು ಆರೋಪ. ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಗಮನಾರ್ಹ ರೀತಿಯಲ್ಲಿ ಮಾರಾಟ ಹೆಚ್ಚಳ ಕಾಣುತ್ತಿರುವ ಓಲಾ ತನ್ನ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಹೆಚ್ಚುವರಿ ಪರಿಕರವಾಗಿ ಆಫ್–ಬೋರ್ಡ್ ಚಾರ್ಜರ್ಗಳನ್ನು ಮಾರಿತ್ತು. 9,000 ರೂನಿಂದ ಆರಂಭವಾಗಿ 19,000 ರೂವರೆಗೂ ಈ ಆಫ್ ಬೋರ್ಡ್ ಚಾರ್ಜರ್ಗಳನ್ನು 1 ಲಕ್ಷ ಗ್ರಾಹಕರಿಗೆ ಸೇಲ್ ಮಾಡಲಾಗಿದೆ.
ಫೇಮ್ ಸ್ಕೀಮ್ ಪ್ರಕಾರ ಎಲೆಕ್ಟ್ರಿಕ್ ವಾಹನ ತಯಾರಕರು ಚಾರ್ಜರ್ ಮತ್ತು ವಾಹನದ ಸಾಫ್ಟ್ವೇರ್ ಅನ್ನು ಹೆಚ್ಚುವರಿ ಬೆಲೆಗೆ ಮಾರುವಂತಿಲ್ಲ. ವಾಹನದ ಒಟ್ಟಾರೆ ಬೆಲೆಯಲ್ಲಿ ಇವೂ ಒಳಗೊಂಡಿರಬೇಕು. ಆದರೆ, ಒಲಾ ಎಲೆಕ್ಟ್ರಿಕ್ ಸಂಸ್ಥೆ ಫೇಮ್ ನಿಯಮವನ್ನು ಉಲ್ಲಂಘಿಸಿದೆ.
ಇದನ್ನೂ ಓದಿ: Comet EV: ಚೀನೀ ಕಂಪನಿಯಿಂದ ಭಾರತದಲ್ಲಿ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ; ಟಾಟಾ ಟಿಯಾಗೋಕ್ಕಿಂತ ಉತ್ತಮವಾಗಿದೆಯಾ?
ಸರ್ಕಾರ ಹೇಳಿದಂತೆ ಕೇಳುತ್ತೇವೆ ಎಂದ ಓಲಾ ಎಲೆಕ್ಟ್ರಿಕ್ ಸಿಇಒ
ಆಫ್–ಬೋರ್ಡ್ ಚಾರ್ಜರ್ ಅನ್ನು ಹೆಚ್ಚುವರಿ ಬೆಲೆಗೆ ಮಾರಿರುವ ಓಲಾ ಎಲೆಕ್ಟ್ರಿಕ್ ಕಂಪನಿ 130 ಕೋಟಿ ರೂ ಅನ್ನು ಗ್ರಾಹಕರಿಗೆ ಮರಳಿಸಬೇಕೆಂದು ಸರ್ಕಾರ ಮಾಡಿರುವ ಆದೇಶಕ್ಕೆ ಸಂಸ್ಥೆ ಪೂರಕವಾಗಿ ಸ್ಪಂದಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಲಾ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ಭವೀಶ್ ಅಗರ್ವಾಲ್, ಸರ್ಕಾರ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೇಮ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇವಲ ಬಂದಿರುವುದು ಕೇವಲ ಓಲಾ ಮೇಲೆ ಮಾತ್ರವಲ್ಲ, ಇತರ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಾದ ಹೀರೋ ಎಲೆಕ್ಟ್ರಿಕ್, ಏದರ್ ಎನರ್ಜಿ ಕಂಪನಿಗಳ ಮೇಲೂ ಆರೋಪ ಇದೆ. ಸರ್ಕಾರದಿಂದ ಈ ಸಂಸ್ಥೆಗಳ ಮೇಲೂ ತನಿಖೆ ಆಗುತ್ತಿದೆ.