Great Returns: 10,000 ರೂ ಎಸ್​ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್

Adita Birla Mutual Fund: 2000ರ ವರ್ಷದಲ್ಲಿ ಆರಂಭವಾದ ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಕಳೆದ 23 ವರ್ಷದಲ್ಲಿ ಶೇ. 9.16ರ ಸಿಎಜಿಆರ್ ದರದಲ್ಲಿ ಹೂಡಿಕೆಗಳನ್ನು ಬೆಳೆಸಿದೆ. ಅಂದು 10,000 ರೂನ ಎಸ್​ಐಪಿಯಲ್ಲಿ ತೊಡಗಿಸಿಕೊಂಡವರ ಹಣ ಈಗ 1.14 ಕೋಟಿ ರೂಗೆ ಬೆಳೆದಿದೆ.

Great Returns: 10,000 ರೂ ಎಸ್​ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2023 | 2:20 PM

ಹಣ ಮಾಡುವುದು ಎಷ್ಟು ಮುಖ್ಯವೋ, ಸಂಪಾದಿಸಿದ ಹಣವನ್ನು ಬೆಳೆಸುವುದೂ ಅಷ್ಟೇ ಮುಖ್ಯ. ಹಣ ಬೆಳೆಸಲು ಹೂಡಿಕೆ ಅತ್ಯಗತ್ಯ. ನೀವು ಎಫ್​ಡಿಯಲ್ಲಾದರೂ ಹಾಕಿ, ಷೇರಿಗಾದರೂ ಹಾಕಿ, ಸರ್ಕಾರ ಬಾಂಡ್​ಗಳಿಗಾದರೂ ಹಾಕಿ, ಮ್ಯೂಚುವಲ್ ಫಂಡ್​ನಲ್ಲಾದರೂ ಹಾಕಿ ಹಣ ಬೆಳೆಸಬಹುದು. ವರ್ಷಕ್ಕೆ ನಿಮ್ಮ ಹೂಡಿಕೆ (Investment) ಎಷ್ಟು ಬೆಳೆಯುತ್ತದೆ ಎಂಬುದು ಮುಖ್ಯ. ಈಗ ಮ್ಯೂಚುವಲ್ ಫಂಡ್​ಗೆ ಜೋಡಿತವಾಗಿರುವ ಎಸ್​ಐಪಿ ಸ್ಕೀಮ್​ಗಳು (SIP- Systematic Investment Plan) ಬಹಳ ಜನಪ್ರಿಯವಾಗುತ್ತಿವೆ. ನುರಿತ ತಜ್ಞರು ನಿರ್ವಹಣೆ ಮಾಡುವ ಮ್ಯೂಚುವಲ್ ಫಂಡ್​ಗಳು ಸಾಮಾನ್ಯವಾಗಿ ನಷ್ಟ ತರುವುದು ಕಡಿಮೆ. ಆದರೂ ಒಂದಷ್ಟು ಮ್ಯೂಚುವಲ್ ಫಂಡ್​ಗಳು ಒಮ್ಮೊಮ್ಮೆ ನಷ್ಟ ಕಾಣುವುದು ಸಹಜ. ಆದರೆ, ದೀರ್ಘಕಾಲದ ಹೂಡಿಕೆ ಮಾಡಬಯಸುವವರು ಮ್ಯೂಚುವಲ್ ಫಂಡ್​ನಿಂದ ನಷ್ಟ ಕಂಡಿದ್ದು ಬಹುತೇಕ ಇಲ್ಲ. ಕೆಲ ಮ್ಯೂಚುವಲ್ ಫಂಡ್​ಗಳು ಅದ್ಭುತವಾಗಿ ರಿಟರ್ನ್ ಕೊಟ್ಟಿವೆ. ಇಂಥ ಫಂಡ್​ಗಳಲ್ಲಿ ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್​ಡ್ ಅಡ್ವಾಂಟೇಜ್ ಫಂಡ್ ಒಂದು.

ಆದಿತ್ಯ ಬಿರ್ಲಾ ಸನ್ ಲೈಫ್​ನ ಈ ಮ್ಯೂಚುವಲ್ ಫಂಡ್​ನ (Aditya Birla Sun Life Balanced Advantage Fund) ಸಿಎಜಿಆರ್ ದರ ಶೇ. 9.16ರಷ್ಟಿದೆ. ಸಿಎಜಿಆರ್ ಎಂದರೆ ಕಾಂಪೌಂಡ್ ಆ್ಯನುವಲ್ ಗ್ರೋತ್ ರೇಟ್. ಇದು ಸರಾಸರಿ ವಾರ್ಷಿಕ ಪ್ರಗತಿಯ ದರ. ಬಿರ್ಲಾ ಸನ್ ಲೈಫ್ ಬ್ಯಾಲನ್​ಸ್ಡ್ ಅಡ್ವಾಂಟೇಜ್ ಫಂಡ್ ಆರಂಭವಾಗಿದ್ದು 2000 ಏಪ್ರಿಲ್ 25ರಂದು. ಅಲ್ಲಿಂದ 23 ವರ್ಷದಲ್ಲಿ ಇದು ವಾರ್ಷಿಕ ಸಿಎಜಿಆರ್ ಶೇ. 9.16ರ ದರದಲ್ಲಿ ಬೆಳೆದಿದೆ. 2000ರಲ್ಲಿ ಈ ಮ್ಯೂಚುವಲ್ ಫಂಡ್​ಗೆ ಜೋಡಿತವಾದ ಎಸ್​ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್) ಯೋಜನೆಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಈ 23 ವರ್ಷದಲ್ಲಿ ಅವರ ಹೂಡಿಕೆಯು ಈಗ 1.14 ಕೋಟಿ ರೂ ಆಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿGoogle: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್

ಪಕ್ಕಾ ವೃತ್ತಿಪರರು ನಿರ್ವಹಿಸುವ ಮ್ಯೂಚುವಲ್ ಫಂಡ್ ಇದು

ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಅನ್ನು ಅನುಭವಿಗಳಾದ ಮೋಹಿತ್ ಶರ್ಮಾ, ವಿಶಾಲ್ ಗಾಜ್ವಾನಿ ಮತ್ತು ಲವ್ಲಿಶ್ ಸೋಳಂಕಿ ಅವರು ನಿಭಾಯಿಸುತ್ತಿದ್ದಾರೆ. ಇದೊಂದು ಹೈಬ್ರಿಡ್ ಫಂಡ್ ಅಗಿದ್ದು, ಷೇರುಹೂಡಿಕೆ ಮಾತ್ರವಲ್ಲ, ನಿಶ್ಚಿತ ಆದಾಯದ ಯೋಜನೆಗಳಲ್ಲೂ ಹಣ ಹೂಡಿಕೆ ಮಾಡುತ್ತದೆ. ಮಾರುಕಟ್ಟೆಯ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಹೂಡಿಕೆಗಳ ತಾಣವನ್ನು ಬದಲಿಸುತ್ತಲೇ ಇರುತ್ತಾರೆ. ಒಂದು ವಲಯ ಉತ್ತಮ ಪ್ರಗತಿ ಕಾಣಬಹುದು ಎಂಬ ನಿರೀಕ್ಷೆ ಇದ್ದರೆ ಕೂಡಲೇ ಆ ವಲಯದಲ್ಲಿನ ಪ್ರಮುಖ ಕಂಪನಿಗಳ ಷೇರುಗಳ ಮೇಲೆ ಹಣ ಹೂಡುತ್ತಾರೆ. ಒಂದು ವಲಯ ಹಿನ್ನಡೆ ಕಾಣುತ್ತದೆ ಎಂದನಿಸಿದರೆ ಷೇರುಗಳ ಬೀಳುವ ಮುನ್ನವೇ ಮಾರಿಬಿಡುತ್ತಾರೆ. ಈ ರೀತಿಯಲ್ಲಿ ಫಂಡ್ ಮ್ಯಾನೇಜರ್​ಗಳು ಹೂಡಿಕೆ ನಿರ್ವಹಣೆ ಮಾಡಿ, ನಷ್ಟದ ಸಾಧ್ಯತೆಯನ್ನು ಕಡಿಮೆ ಮಾಡಿ ಹೆಚ್ಚೆಚ್ಚು ಆದಾಯಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್​ನ ಶೇ. 9.16ರ ಸಿಆರ್​ಜಿಆರ್ ದರ ದೊಡ್ಡ ಮಟ್ಟದ ಲಾಭ ಕೊಡುವಂಥದ್ದಲ್ಲ. ಕೆಲ ಮ್ಯೂಚುವಲ್ ಫಂಡ್​ಗಳು ಶೇ. 25ರ ದರದಲ್ಲಿ ಬೆಳೆದಿರುವುದುಂಟು. ಆದರೂ ದೀರ್ಘಾವಧಿಯಲ್ಲಿ 9.16ರ ಸಿಎಜಿಆರ್ ಉತ್ತಮ ಎಂದು ತಜ್ಞರು ಭಾವಿಸುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ