AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Extra Week Off: ಬ್ಯಾಂಕುಗಳಿಗೆ ವಾರದಲ್ಲಿ 2 ದಿನ ರಜೆ; ನಿತ್ಯ 40 ನಿಮಿಷ ಹೆಚ್ಚು ಕೆಲಸ; ಸರ್ಕಾರದಿಂದ ಶೀಘ್ರದಲ್ಲೇ ಅಧಿಸೂಚನೆ?

Bank Employees 5-day Work Week: ಸರ್ಕಾರಿ ಬ್ಯಾಂಕುಗಳಿಗೆ ವಾರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನ ರಜೆ ಕೊಡುವ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆ ಇದ್ದು, ಹಣಕಾಸು ಇಲಾಖೆಯಿಂದ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

Extra Week Off: ಬ್ಯಾಂಕುಗಳಿಗೆ ವಾರದಲ್ಲಿ 2 ದಿನ ರಜೆ; ನಿತ್ಯ 40 ನಿಮಿಷ ಹೆಚ್ಚು ಕೆಲಸ; ಸರ್ಕಾರದಿಂದ ಶೀಘ್ರದಲ್ಲೇ ಅಧಿಸೂಚನೆ?
ಬ್ಯಾಂಕುಗಳಿಗೆ ರಜೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 04, 2023 | 11:18 AM

Share

ನವದೆಹಲಿ: ಐಟಿ ಕ್ಷೇತ್ರದಲ್ಲಿರುವಂತೆ ಬ್ಯಾಂಕ್ ವಲಯಕ್ಕೂ ವಾರಕ್ಕೆರಡು ವೀಕ್ ಆಫ್ ಬರಲಿದೆ. ಸರ್ಕಾರಿ ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಅವಕಾಶ ಪಡೆಯಲಿವೆ. ಅಂದರೆ ವಾರದಲ್ಲಿ ಎರಡು ನಿಯಮಿತ ರಜಾ ದಿನ ಇರಲಿವೆ. ಶನಿವಾರ ಮತ್ತು ಭಾನುವಾರ ಸರ್ಕಾರಿ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ. ಈ ಬಗ್ಗೆ ಭಾರತೀಯ ಬ್ಯಾಂಕುಗಳ ಸಂಸ್ಥೆ (IBA- Indian Banks Association) ಮಾಡಿರುವ ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆಯಷ್ಟೇ ಬಾಕಿ ಇದೆ. ಶೀಘ್ರದಲ್ಲೇ ಅದಕ್ಕೂ ಸಮ್ಮತಿ ಸಿಗುವ ಸಾಧ್ಯತೆ ಇದೆ ಎಂದು ಸಿಎನ್​ಬಿಸಿ ಟಿವಿ18 ವಾಹಿನಿ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬ್ಯಾಂಕುಗಳು ಈಗ ಪ್ರತೀ ಭಾನುವಾರ ಹಾಗೂ 2ನೇ ಮತ್ತು 3ನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದ ಜೊತೆಗೆ ಎಲ್ಲಾ ಶನಿವಾರವೂ ಬ್ಯಾಂಕಿಗೆ ಆಫ್ ಇರಲಿದೆ.

ರಜೆ ಹೆಚ್ಚಾದರೂ ಕೆಲಸ ಕಡಿಮೆ ಆಗಲ್ಲ ಬ್ಯಾಂಕ್ ನೌಕರರಿಗೆ

ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBA) ಸಂಸ್ಥೆಗಳು ಬ್ಯಾಂಕುಗಳಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿವೆ. ಅದರಂತೆ ಐದು ದಿನ ಕೆಲಸದ ವಾರಕ್ಕೆ ಅನುಮತಿ ನೀಡುವುದಾದರೆ ಬ್ಯಾಂಕುಗಳ ದಿನದ ಅವಧಿ 40 ನಿಮಿಷ ಹೆಚ್ಚು ಮಾಡಬೇಕು. ಅಂದರೆ, ಬ್ಯಾಂಕ್ ನೌಕರರು ಕೆಲಸ ಮಾಡುವ ದಿನದಲ್ಲಿ 40 ನಿಮಿಷ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗುತ್ತದೆ. ಐಬಿಎ ಮತ್ತು ಯುಎಫ್​ಬಿಇ ಇಂಥದ್ದೊಂದು ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ವೇತನ ಮಂಡಳಿ ಪರಿಷ್ಕರಣೆಯೊಂದಿಗೆ ಶೀಘ್ರದಲ್ಲೇ ಅಧಿಸೂಚನೆ ಬರುವ ನಿರೀಕ್ಷೆ ಇದೆ.

ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ರಜೆ ಬೇಕೆನ್ನುವ ಬೇಡಿಕೆ ಹಲವು ದಿನಗಳಿಂದಲೂ ಇದೆ. ಈ ಬೇಡಿಕೆ ಹಿನ್ನೆಲೆಯಲ್ಲಿ ಪ್ರತೀ ಎರಡು ಶನಿವಾರಕ್ಕೆ ರಜೆ ನೀಡಲಾಗಿದೆ. ಈಗ ಎಲ್ಲಾ ಶನಿವಾರಗಳೂ ಬ್ಯಾಂಕುಗಳಿಗೆ ರಜಾ ದಿನಗಳಾಗಬಹುದು.

ಇದನ್ನೂ ಓದಿ: Bank Holidays May 2023: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್ ಬಾಗಿಲು ಬಂದ್ ಅಗಿರುತ್ತೆ ತಿಳಿದಿರಿ

2023 ಮೇ ತಿಂಗಳಲ್ಲಿ ಭಾರತದ ವಿವಿಧೆಡೆ ಬ್ಯಾಂಕ್ ರಜಾದಿನಗಳ ಪಟ್ಟಿ

ಮೇ 1ರಂದು ಕಾರ್ಮಿಕರ ದಿನಕ್ಕೆ ರಾಷ್ಟ್ರಾದ್ಯಂತ ಬ್ಯಾಂಕುಗಳಿಗೆ ರಜೆ ಇತ್ತು. ಅದು ಬಿಟ್ಟು ಉಳಿದ ರಜಾ ದಿನಗಳ ಪಟ್ಟಿ ಇಲ್ಲಿದೆ

  • ಮೇ 5 (ಶುಕ್ರವಾರ): ಬುದ್ಧ ಪೂರ್ಣಿಮಾದೆಹಲಿ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ್, ಅಸ್ಸಾಮ್, ಬಿಹಾರ, ಗುಜರಾತ್, ಅರುಣಾಚಲಪ್ರದೇಶ, ಚತ್ತೀಸ್​ಗಡ
  • ಮೇ 7: ಭಾನುವಾರ
  • ಮೇ 9 (ಮಂಗಳವಾರ): ರವೀಂದ್ರನಾಥ್ ಠಾಗೂರ್ ಜಯಂತಿ
  • ಮೇ 13: ಎರಡನೇ ಶನಿವಾರ
  • ಮೇ 14: ಭಾನುವಾರ
  • ಮೇ 16 (ಮಂಗಳವಾರ): ಸಿಕ್ಕಿಂ ದಿನ
  • ಮೇ 21: ಭಾನುವಾರ
  • ಮೇ 22 (ಸೋಮವಾರ): ಮಹಾರಾಣಾ ಪ್ರತಾಪ್ ಜಯಂತಿಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ
  • ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿತ್ರಿಪುರಾ
  • ಮೇ 27: ನಾಲ್ಕನೇ ಶನಿವಾರ
  • ಮೇ 28: ಭಾನುವಾರ

ಇಲ್ಲಿ ಸಿಕ್ಕಿಂ ಪ್ರದೇಶದ ಬ್ಯಾಂಕುಗಳು ಮೇ ತಿಂಗಳಲ್ಲಿ 6 ವಾರದ ರಜೆ ಸೇರಿ 8 ರಜಾದಿನಗಳನ್ನು ಹೊಂದಿರುತ್ತವೆ. ಹರ್ಯಾಣ, ಪಂಜಾಬ್, ಗುಜರಾತ್ ರಾಜ್ಯಗಳಲ್ಲೂ ಬ್ಯಾಂಕುಗಳು 8 ದಿನ ಬಾಗಿಲು ಮುಚ್ಚಿರುತ್ತವೆ.

ಕರ್ನಾಟಕದಲ್ಲಿ 6 ವಾರದ ರಜೆಯ ಜೊತೆ ಕಾರ್ಮಿಕರ ದಿನದ ರಜೆ ಮಾತ್ರ ಇದೆ. ಅಂದರೆ ಮೇ 1ರಂದು ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲಿ ಬ್ಯಾಂಕುಗಳು ಬಂದ್ ಆಗಿದ್ದವು.

ಕರ್ನಾಟಕದಲ್ಲಿ 2023 ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುವ ದಿನಗಳು:

  • ಮೇ 1: ಕಾರ್ಮಿಕರ ದಿನ
  • ಮೇ 7: ಭಾನುವಾರ
  • ಮೇ 13: ಎರಡನೇ ಶನಿವಾರ
  • ಮೇ 14: ಭಾನುವಾರ
  • ಮೇ 21: ಭಾನುವಾರ
  • ಮೇ 27: ನಾಲ್ಕನೇ ಶನಿವಾರ
  • ಮೇ 28: ಭಾನುವಾರ

ಇದನ್ನೂ ಓದಿ: World Bank: ವಿಶ್ವಬ್ಯಾಂಕ್​ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ನೇಮಕ

2023 ಜೂನ್​ನಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  • ಜೂನ್ 29: ಬಕ್ರೀದ್
  • ಜುಲೈ 29: ಮೊಹರಂ ಕೊನೆಯ ದಿನ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಸೆಪ್ಟಂಬರ್ 18: ಗಣೇಶ ಹಬ್ಬ
  • ಸೆಪ್ಟಂಬರ್ 28: ಈದ್ ಮಿಲಾದ್
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 14: ಮಹಾಲಯ ಅಮಾವಾಸ್ಯೆ
  • ಅಕ್ಟೋಬರ್ 23: ಆಯುಧಪೂಜೆ
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ವಾಲ್ಮೀಕಿ ಜಯಂತಿ
  • ನವೆಂಬರ್ 1: ಕನ್ನಡ ರಾಜ್ಯೋತ್ಸವ
  • ನವೆಂಬರ್ 12: ನರಕ ಚತುರ್ದಶಿ
  • ನವೆಂಬರ್ 14: ದೀಪಾವಳಿ, ಬಲಿಪಾಡ್ಯಮಿ
  • ನವೆಂಬರ್ 30: ಕನಕದಾಸ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Thu, 4 May 23

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು