Go First Airline: ಗೋ ಫಸ್ಟ್ ಏರ್ಲೈನ್ ಬುಕಿಂಗ್ ಮೇ.15ರವರೆಗೆ ಸ್ಥಗಿತ, ರಿಫಂಡ್ಗೆ ಆದೇಶ
ಗೋ ಫಸ್ಟ್ ಏರ್ಲೈನ್ ಬುಕಿಂಗ್ ಪ್ರಕ್ರಿಯೆಯನ್ನು ಮೇ.15ರವರೆಗೆ ಸ್ಥಗಿತಗೊಳಿಸುವಂತೆ ತನ್ನ ಸಿಬ್ಬಂದಿಗಳಿಗೆ ತಿಳಿಸಿದೆ. ಈಗಾಗಲೇ ಬುಕಿಂಗ್ ಆಗಿರುವುದನ್ನು ರದ್ದುಗೊಳಿಸುವಂತೆ ಮತ್ತು ಹಣವನ್ನು ಪ್ರಯಾಣಿಕರಿಗೆ ವಾಪಸ್ಸು ನೀಡುವಂತೆ ತಿಳಿಸಿದೆ.
ದೆಹಲಿ: ಗೋ ಫಸ್ಟ್ ಏರ್ಲೈನ್ (Go First Airline) ಬುಕಿಂಗ್ ಪ್ರಕ್ರಿಯೆಯನ್ನು ಮೇ.15ರವರೆಗೆ ಸ್ಥಗಿತಗೊಳಿಸುವಂತೆ ತನ್ನ ಸಿಬ್ಬಂದಿಗಳಿಗೆ ತಿಳಿಸಿದೆ. ಈಗಾಗಲೇ ಬುಕಿಂಗ್ ಆಗಿರುವುದನ್ನು ರದ್ದುಗೊಳಿಸುವಂತೆ ಮತ್ತು ಹಣವನ್ನು ಪ್ರಯಾಣಿಕರಿಗೆ ರಿಫಂಡ್ ಮಾಡುವಂತೆ ತಿಳಿಸಿದೆ. ಗೋ ಫಾಸ್ಟ್ ಏರ್ಲೈನ್ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದ ದಿನದಿಂದ ನಗದು ಕೊರತೆಯಿರುವ ವಿಮಾನಯಾನ ಗೋ ಫರ್ಸ್ಟ್ ಮೇ 15 ರವರೆಗೆ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ತಿಳಿಸಿದೆ.
ಹಿಂದೆ ಗೋ ಫಸ್ಟ್ ಏರ್‌ಲೈನ್ಸ್ (Go First) ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಮೇ 3 ಮತ್ತು 4ರಂದು ರದ್ದುಗೊಳಿಸಲಾಗುವುದು ಎಂದು DGCA ಗೆ ತಿಳಿಸಿತ್ತು. ಇಂಜಿನ್‌ಗಳನ್ನು ಸರಬರಾಜು ಮಾಡದಿರುವ ಬಗ್ಗೆ ಯುಎಸ್ ನ್ಯಾಯಾಲಯದಲ್ಲಿ ಏರ್‌ಲೈನ್ಸ್ ವಿಮಾನ ಎಂಜಿನ್ ತಯಾರಕರಾದ ಪ್ರಾಟ್ ಮತ್ತು ವಿಟ್ನಿ ವಿರುದ್ಧ ತುರ್ತು ಅರ್ಜಿಯನ್ನು ಸಲ್ಲಿಸಿರುವ ಕಾರಣ ವಿಮಾನಗಳು ಮೇ 3 ಮತ್ತು 4ರಂದು ವಿಮಾನಗಳ ಹಾರಾಟ ನಡೆಸಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿತ್ತು. ವರದಿಗಳ ಪ್ರಕಾರ, ಎಂಜಿನ್‌ಗಳನ್ನು ಪೂರೈಸದಿದ್ದರೆ ಅದು ದಿವಾಳಿಯಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿತ್ತು. ಈ ಕಾರಣಕ್ಕೆ ವಿಮಾನಗಳು ಹಾರಾಟ ನಡೆಸಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಎಲ್ಲ ಬುಕಿಂಗ್ಗಳನ್ನು ಸ್ಥಗಿತಗೊಳಿಸಿ, ಮರುಪಾವತಿ ಮಾಡಲು ಹೇಳಿದೆ.
ಇದನ್ನೂ ಓದಿ: Go First Airlines: ಗೋ ಫಸ್ಟ್ ಏರ್‌ಲೈನ್ಸ್ ಮೇ 3, 4ರಂದು ನಿಗದಿಪಡಿಸಲಾದ ಎಲ್ಲಾ ವಿಮಾನಗಳ ಹಾರಾಟ ರದ್ದು
ವಾಡಿಯಾ ಸಮೂಹದ ಒಡೆತನದ ಗೋ ಫಸ್ಟ್ ತೀವ್ರ ನಿಧಿಯ ಕೊರತೆಯ ನಡುವೆ ಮೇ 3 ಮತ್ತು 4 ರಂದು ತಾತ್ಕಾಲಿಕವಾಗಿ ಹಾರಾಟವನ್ನು ಸ್ಥಗಿತಗೊಳಿಸಲಿತ್ತು ಎಂದು ಏರ್‌ಲೈನ್‌ನ ಮುಖ್ಯಸ್ಥ ಕೌಶಿಕ್ ಖೋನಾ ಮಂಗಳವಾರ ತಿಳಿಸಿದ್ದರು. ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಬಜೆಟ್ ಕ್ಯಾರಿಯರ್ ಅರ್ಜಿಯನ್ನು ಸಲ್ಲಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Thu, 4 May 23