ನವದೆಹಲಿ, ಜನವರಿ 2: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖಷಿಯಾಗುವ ಸುದ್ದಿ ಇದು. ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (LTC- Leave travel concession)) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ಡಿಸೆಂಬರ್ 21ರಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಸೂಚನೆಯೊಂದರ ಪ್ರಕಾರ ಎಲ್ಟಿಸಿ ಹಣ ಪಡೆಯಲು ಸಲ್ಲಿಸುವ ಕ್ಲೈಮ್ಗಳಿಗೆ ಇಲಾಖಾ ಮುಖ್ಯಸ್ಥರೇ ಅನುಮೋದನೆ ಮಾಡಬಹುದಾದ ಅವಕಾಶ ಕಲ್ಪಿಸಲಾಗಿದೆ.
ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಅರು ತಿಂಗಳವರೆಗಿನ ಎಲ್ಟಿಸಿ ಪ್ರಯಾಣ ಹಣಕ್ಕೆ ಕ್ಲೈಮ್ ಮಾಡಿ ಉದ್ಯೋಗಿಗಳು ಸಲ್ಲಿಸುವ ಅರ್ಜಿಗಳನ್ನು ಅನುಮೋದನೆ ಮಾಡಬಹುದು ಎಂದಿದೆ ಹೊಸ ಕಾನೂನು. ಹಳೆಯ ನಿಯಮದ ಪ್ರಕಾರ ಉದ್ಯೋಗಿಗಳ ಎಲ್ಟಿಸಿ ಕ್ಲೈಮ್ ಅರ್ಜಿ ಡಿಒಪಿಟಿಯಿಂದ ಅನುಮೋದನೆ ಪಡೆಯಬೇಕಿತ್ತು.
ಒಂದು ವೇಳೆ, ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್ಟಿಸಿ ರಿಇಂಬುರ್ಸ್ಮೆಂಟ್ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ. ಜೊತೆಗೆ, ಆ ಮೂರು ತಿಂಗಳೊಳಗೆ ಉದ್ಯೋಗಿ ತಾನು ಪಡೆದುಕೊಂಡಿದ್ದ ಮುಂಗಡ ಹಣವನ್ನು ಬಡ್ಡಿಸಮೇತ ಹಿಂದಿರುಗಿಸಿರಬೆಕು.
ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?
ಎಲ್ಟಿಸಿ ಎಂಬುದು ಉದ್ಯೋಗಿಗಳಿಗೆ ನೀಡಲಾಗುವ ಲೀವ್ ಟ್ರಾವಲ್ ಕನ್ಸಿಶನ್ ಸೌಲಭ್ಯ. ಉದ್ಯೋಗಿ ರಜೆ ಪಡೆದು ಒಬ್ಬರೆಯೋ ಅಥವಾ ಕುಟುಂಬ ಸಮೇತವೋ ಪ್ರವಾಸ ಹೋದರೆ, ಅವರ ಪ್ರಯಾಣ ವೆಚ್ಚವನ್ನು ಭರಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಎಲ್ಟಿಸಿ ಸೌಲಭ್ಯ ಇದೆ.
ರಜೆಯಿಂದ ಬಂದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಎಲ್ಟಿಸಿ ಹಣಕ್ಕೆ ಉದ್ಯೋಗಿ ಕ್ಲೈಮ್ ಮಾಡಬೇಕು ಎಂಬ ನಿಯಮ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ