ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಕಳೆದ ವರ್ಷ ಘೋಷಣೆ ಮಾಡಿ ವಿಚಾರವನ್ನು ಮತ್ತೊಮ್ಮೆ ತಿಳಿಸುತ್ತಾ, ಕೇಂದ್ರ ಹಣಕಾಸು ಸಚಿವೆ ಈ ಬಗ್ಗೆ ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟ್ನಲ್ಲಿ ಸ್ಪಷ್ಟಪಡಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಣ್ಣ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರಿಗೆ ಹಾಗೂ ಸಣ್ಣ ಸಂಸ್ಥೆಗಳನ್ನು ನಡೆಸುವವರಿಗೆ ಬೆಂಬಲ ನೀಡುವ ಉದ್ದೇಶದಿಂದ ಕೆಲವು ಷರತ್ತುಗಳೊಂದಿಗೆ, ಉದ್ಯೋಗದಾತರು ಮತ್ತು ಉದ್ಯೋಗಿಗಳ ಪಿಎಫ್ ಕೊಡುಗೆಯನ್ನು ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು.
ಇದಕ್ಕೂ ಮುನ್ನ, ಕೆಲಸ ಕಳೆದುಕೊಂಡು, ಆ ನಂತರ ಅವರನ್ನು ಮತ್ತೆ ಕೆಲಸಕ್ಕೆ ಕರೆಸಿಕೊಂಡಿದ್ದಲ್ಲಿ ಅಂತಹ ಸಂಘಟಿತ ವಲಯದ ಇಪಿಎಫ್ಒ ನೋಂದಾಯಿತ ಸಣ್ಣ ಪ್ರಮಾಣದ ಘಟಕಗಳ ಉದ್ಯೋಗದಾತರು ಮತ್ತು ಉದ್ಯೋಗಿಗಳ ಪಿಎಫ್ ಪಾಲನ್ನು 2022ರ ತನಕ ಕೇಂದ್ರ ಸರ್ಕಾರವೇ ಪಾವತಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ ಎಂದು ಎಎನ್ಐ ತಿಳಿಸಿತ್ತು.
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಹೇರಿದ್ದ ಕಾರಣಕ್ಕೆ ಉತ್ಪಾದನೆ, ಪೂರೈಕೆ ಜಾಲ ಹಾಗೂ ಬೇಡಿಕೆಯಲ್ಲಿ ಭಾರೀ ಏರುಪೇರಾಗಿತ್ತು. ಸಣ್ಣ- ಪುಟ್ಟ ಸಂಸ್ಥೆಗಳು ಲಾಕ್ಡೌನ್ನಿಂದ ಭಾರೀ ಹೊಡೆತ ತಿನ್ನುವಂತಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: Oil Bonds: ಯುಪಿಎ ಆಳ್ವಿಕೆಯ ಆಯಿಲ್ ಬಾಂಡ್ಸ್ ಅಂದರೇನು? ಬಿಜೆಪಿ ಸರ್ಕಾರ ಹೇಳುತ್ತಿರುವ ಪರಿಣಾಮಗಳೇನು?
(Central Government Will Pay Employer Employees PF Contribution Till 2022 Said Nirmala Sitharaman According to ANI)
Published On - 7:57 pm, Sat, 21 August 21